ಟೋಕಿಯೋ ಒಲಿಂಪಿಕ್ಸ್‌ 4*400 ಮೀ. ರಿಲೇ: ಏಷ್ಯನ್‌ ದಾಖಲೆ ಬರೆದ ಭಾರತ

Kannadaprabha News   | Asianet News
Published : Aug 07, 2021, 07:58 AM IST
ಟೋಕಿಯೋ ಒಲಿಂಪಿಕ್ಸ್‌ 4*400 ಮೀ. ರಿಲೇ: ಏಷ್ಯನ್‌ ದಾಖಲೆ ಬರೆದ ಭಾರತ

ಸಾರಾಂಶ

* ಅಥ್ಲೆಟಿಕ್ಸ್‌ ವಿಭಾಗದಲ್ಲಿ ಭಾರತೀಯರಿಗೆ ನಿರಾಸೆ * ಏಷ್ಯನ್‌ ದಾಖಲೆ ನಿರ್ಮಿಸಿದರು ಫೈನಲ್‌ಗೇರಲು ವಿಫಲವಾದ ಭಾರತ ಪುರುಷರ ರಿಲೇ ತಂಡ * ನಡಿಗೆ ಸ್ಪರ್ಧೆಯಲ್ಲಿಯೂ ಭಾರತೀಯರಿಗೆ ನಿರಾಸೆ

ಟೋಕಿಯೋ(ಆ.07): ಭಾರತದ 4*400 ಮೀ. ರಿಲೇ ಓಟ ತಂಡ ಏಷ್ಯನ್‌ ದಾಖಲೆ ಬರೆದರೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಫೈನಲ್‌ ಪ್ರವೇಶಿಸುವಲ್ಲಿ ವಿಫಲವಾಗಿದೆ. ಮುಹಮದ್‌ ಅನಾಸ್‌, ಟಾಮ್‌ ನಿರ್ಮಲ್‌, ರಾಜೀವ್‌ ಅರೋಕಿಯಾ ಹಾಗೂ ಅಮೊಜ್‌ ಜೇಕಬ್‌ ಅವರಿದ್ದ ತಂಡ 3 ನಿಮಿಷ 00:25 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ 3 ನಿಮಿಷ 00:56 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕತಾರ್‌ ಏಷ್ಯನ್‌ ದಾಖಲೆ ಬರೆದಿತ್ತು. ಆ ದಾಖಲೆಯನ್ನು ಭಾರತ ಮುರಿದಿದೆ.

ಏಷ್ಯನ್‌ ದಾಖಲೆ ಬರೆದರೂ ಭಾರತ ಫೈನಲ್‌ ಪ್ರವೇಶಿಸಲು ಸಾಧ್ಯವಾಗಲಿಲ್ಲ. 2 ಹೀಟ್ಸ್‌ಗಳಲ್ಲಿ ಅಗ್ರ 3 ಸ್ಥಾನಗಳನ್ನು ಪಡೆದ ಒಟ್ಟು 6 ತಂಡಗಳು ಹಾಗೂ ನಂತರದ 2 ಶ್ರೇಷ್ಠ ತಂಡಗಳಿಗೆ (ಒಟ್ಟು 8) ಫೈನಲ್‌ನಲ್ಲಿ ಸ್ಥಾನ ದೊರೆಯಿತು. ಭಾರತ ಒಟ್ಟಾರೆ 9ನೇ ಸ್ಥಾನ ಪಡೆದು, ಕೂದಲೆಳೆಯ ಅಂತರದಲ್ಲಿ ಫೈನಲ್‌ ಸ್ಥಾನದಿಂದ ವಂಚಿತವಾಯಿತು.

ನಡಿಗೆ ಸ್ಪರ್ಧೆ: ಭಾರತೀಯರಿಗೆ ನಿರಾಸೆ

ಟೋಕಿಯೋ: ಒಲಿಂಪಿಕ್ಸ್‌ ರೇಸ್‌ ವಾಕ್‌(ನಡಿಗೆ ಸ್ಪರ್ಧೆ)ನಲ್ಲಿ ಭಾರತದ ಕ್ರೀಡಾಪಟುಗಳು ನಿರಾಸೆ ಮೂಡಿಸಿದ್ದಾರೆ. ಮಹಿಳೆಯರ 20 ಕಿ.ಮೀ. ವಿಭಾಗದಲ್ಲಿ ಪ್ರಿಯಾಂಕ ಗೋಸ್ವಾಮಿ ಹಾಗೂ ಭಾವ್ನಾ ಜಾಟ್‌ ಕ್ರಮವಾಗಿ 17ನೇ ಮತ್ತು 32ನೇ ಸ್ಥಾನ ಪಡೆದರು. 

ರಾಜೀವ್‌ ಗಾಂಧಿ ಖೇಲ್‌ ರತ್ನ ಪ್ರಶಸ್ತಿ ಹೆಸರು ಬದಲು, ಮೇಜರ್ ಧ್ಯಾನ್‌ ಚಂದ್‌ಗೆ ಪ್ರಧಾನಿ ಮೋದಿ ಗೌರವ

ಪುರುಷರ 50 ಕಿ.ಮೀ. ವಿಭಾಗದಲ್ಲಿ ಗುರುಪ್ರೀತ್‌ ಸಿಂಗ್‌ಗೆ ಸ್ಪರ್ಧೆ ಪೂರ್ಣಗೊಳಿಸಲಿಲ್ಲ. 2 ಗಂಟೆ 55.19 ನಿಮಿಷದಲ್ಲಿ 35 ಕಿ.ಮೀ ಕ್ರಮಿಸಿ 51ನೇ ಸ್ಥಾನದಲ್ಲಿದ್ದ ಗುರುಪ್ರೀತ್‌ ಬಿಸಿಲಿನಿಂದ ಬಳಲಿ ಟ್ರಾಕ್‌ನಲ್ಲೇ ಕುಳಿತರು. ಒಟ್ಟು 59 ಸ್ಪರ್ಧಿಗಳಲ್ಲಿ 47 ಮಂದಿ ಮಾತ್ರ ಗುರಿ ಮುಟ್ಟಿದರು.

ಸೀಮಾಗೆ ಸೋಲು: ಇದೇ ವೇಳೆ ಮಹಿಳೆಯರ 50 ಕೆ.ಜಿ. ಕುಸ್ತಿಯಲ್ಲಿ ಸೀಮಾ ಬಿಸ್ಲಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ