ಗಾಲ್ಫ್‌ನಲ್ಲಿ ರಾಜ್ಯದ ಅದಿತಿ ಐತಿಹಾಸಿಕ ಪದಕ ಸಾಧನೆ?

Kannadaprabha News   | Asianet News
Published : Aug 07, 2021, 07:33 AM IST
ಗಾಲ್ಫ್‌ನಲ್ಲಿ ರಾಜ್ಯದ ಅದಿತಿ ಐತಿಹಾಸಿಕ ಪದಕ ಸಾಧನೆ?

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕದ ಭರವಸೆ ಮೂಡಿಸಿದ ಗಾಲ್ಫರ್ ಅದಿತಿ ಅಶೋಕ್ * ಚೊಚ್ಚಲ ಒಲಿಂಪಿಕ್ಸ್‌ ಪದಕ ಗೆಲ್ಲುವ ಸನಿಹದಲ್ಲಿದ್ದಾರೆ ಬೆಂಗಳೂರಿನ ಗಾಲ್ಫರ್ * ಗಾಲ್ಫರ್ ಅದಿತಿ ಮೇಲೆ ಎಲ್ಲರ ಚಿತ್ತ

ಟೋಕಿಯೋ(ಆ.07): ಕರ್ನಾಟಕದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್‌ ಒಲಿಂಪಿಕ್ಸ್‌ನಲ್ಲಿ ಇತಿಹಾಸ ಬರೆಯುವ ಸನಿಹದಲ್ಲಿದ್ದಾರೆ. ಮಹಿಳೆಯರ ವೈಯಕ್ತಿಕ ಸ್ಟ್ರೋಕ್‌ ಪ್ಲೇ ವಿಭಾಗದಲ್ಲಿ ಅದಿತಿ 3ನೇ ಸುತ್ತಿನ ಅಂತ್ಯಕ್ಕೆ 2ನೇ ಸ್ಥಾನದಲ್ಲಿದ್ದು, ಶನಿವಾರ ಅಂತಿಮ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡರೆ ಪದಕ ಒಲಿಯಲಿದೆ.

ಮೊದಲೆರಡು ಸುತ್ತುಗಳಲ್ಲಿ ಜಂಟಿ 2ನೇ ಸ್ಥಾನದಲ್ಲಿದ್ದ ಅದಿತಿ, 3ನೇ ದಿನವಾದ ಶುಕ್ರವಾರ 18 ಹೋಲ್‌ಗಳ ಆಟದಲ್ಲಿ ಐದು ಬರ್ಡೀಸ್‌ ಅಂಕಗಳನ್ನು ಪಡೆದರು. ಒಟ್ಟು 71 ಯತ್ನಗಳೊಳಗೆ ಎಲ್ಲಾ 18 ಹೋಲ್‌ಗಳನ್ನು ಪೂರ್ಣಗೊಳಿಸಬೇಕು. ಅದಿತಿ ಮೊದಲ ಸುತ್ತಿನಲ್ಲಿ 67, 2ನೇ ಸುತ್ತಿನಲ್ಲಿ 66 ಹಾಗೂ 3ನೇ ಸುತ್ತಿನಲ್ಲಿ 68 ಯತ್ನಗಳಲ್ಲೇ 18 ಹೋಲ್‌ಗಳಿಗೆ ಚೆಂಡನ್ನು ಕಳುಹಿಸಿದರು. 

ಗಾಲ್ಫ್‌ನಲ್ಲಿ ಪದಕದ ಆಸೆ ಜೀವಂತವಾಗಿರಿಸಿರುವ ಕನ್ನಡತಿ ಅದಿತಿ

ಮೊದಲ ಸ್ಥಾನದಲ್ಲಿರುವ ವಿಶ್ವ ನಂ.1 ಅಮೆರಿಕದ ನೆಲ್ಲಿ ಕೊರ್ಡಾ ಅದಿತಿಗಿಂತ 3 ಯತ್ನ ಮೊದಲೇ ಗುರಿ ಸಾಧಿಸಿದ್ದು, ಚಿನ್ನದ ಪದಕ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದಾರೆ. 3ನೇ ಸ್ಥಾನವನ್ನು ನಾಲ್ವರು ಹಂಚಿಕೊಂಡಿದ್ದು, ಅದಿತಿಗಿಂತ ಕೇವಲ 2 ಅಂಕ ಹಿಂದಿದ್ದಾರೆ. ಹೀಗಾಗಿ ಅಂತಿಮ ಸುತ್ತಿನಲ್ಲಿ ಅದಿತಿ ತಮ್ಮ ಶ್ರೇಷ್ಠ ಪ್ರದರ್ಶನವನ್ನು ತೋರಬೇಕಿದೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ