ಟೋಕಿಯೋ 2020: ಬಲಿಷ್ಠ ಪಂಚ್‌ಗಳ ಮೂಲಕ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್‌

Suvarna News   | Asianet News
Published : Jul 25, 2021, 02:17 PM IST
ಟೋಕಿಯೋ 2020: ಬಲಿಷ್ಠ ಪಂಚ್‌ಗಳ ಮೂಲಕ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್‌

ಸಾರಾಂಶ

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಶುಭಾರಂಭ ಮಾಡಿದ ಬಾಕ್ಸರ್ ಮೇರಿ ಕೋಮ್ * ಡೊಮಿನಿಕ್‌ ರಿಪಬ್ಲಿಕ್‌ ಆಟಗಾರ್ತಿ ಎದುರು ಸಂಪೂರ್ಣ ಪ್ರಾಬಲ್ಯ ಮೆರೆದ ಮೇರಿ * ಭಾರತ ಪರ ಪದಕ ಗೆಲ್ಲಬಲ್ಲ ನೆಚ್ಚಿನ ಆಟಗಾರ್ತಿ ಮೇರಿ ಕೋಮ್

ಟೋಕಿಯೋ(ಜು.25): ಭಾರತದ ಅನುಭವಿ ಬಾಕ್ಸರ್, 2012ರ ಲಂಡನ್ ಒಲಿಂಪಿಕ್ಸ್‌ ಪದಕ ವಿಜೇತೆ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ಡೊಮಿನಿಕ್‌ ರಿಪಬ್ಲಿಕ್‌ನ ಮಿಗುಲಿನ ಹೆರ್ನಾಂಡೀಜ್‌ ಎದುರು 4-1 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ರೀಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಆರು ಬಾರಿ ವಿಶ್ವ ಚಾಂಪಿಯನ್‌ ಆಗಿರುವ ಮೇರಿ ಕೋಮ್‌ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮತ್ತೊಂದು ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಮೊದಲ ಸುತ್ತಿನಲ್ಲಿ ಮೇರಿ ಕೋಮ್ 3-2 ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನ ಹೋರಾಟದಲ್ಲೂ ಮೇರಿ ಮತ್ತೆ 3-2ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಮೂರನೇ ಸುತ್ತಿನ ಕದನದಲ್ಲೂ ಬಲಿಷ್ಠ ಪಂಚ್‌ಗಳ ಮೂಲಕ ಆಕ್ರಮಣಕಾರಿ ರಣತಂತ್ರ ರೂಪಿಸಿಕೊಂಡ ಮೇರಿ ಎದುರಾಳಿಗೆ ಮೇಲುಗೈ ಸಾಧಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಮೇರಿ ಮೇರಿ 4-1 ಅಂತರದಲ್ಲಿ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಟೋಕಿಯೋ ಒಲಿಂಪಿಕ್ಸ್‌ ತಾರೆ ಮೀರಾಬಾಯಿ ಚಾನು ಎಕ್ಸ್‌ಕ್ಲೂಸಿವ್‌ ಸಂದರ್ಶನ

ಅಂಕ ಹೇಗೆ ಹಂಚಿಕೆ: ಬಾಕ್ಸಿಂಗ್‌ನಲ್ಲಿ ಫಲಿತಾಂಶ ನಿರ್ಧರಿಸಲು ಐವರು ತೀರ್ಪುಗಾರರಿರುತ್ತಾರೆ. ಮೊದಲೆರಡು ಸುತ್ತಿನಲ್ಲಿ ಮೂವರು ತೀರ್ಪುಗಾರರು ಮೇರಿ ಪರ ಅಂಕ ನೀಡಿದರೆ, ಇನ್ನುಳಿದ ಇಬ್ಬರು ಜಡ್ಜ್‌ಗಳು ಎದುರಾಳಿ ಬಾಕ್ಸರ್‌ಗೆ ಅಂಕ ನೀಡಿದರು. ಆದರೆ ಮೂರನೇ ಸುತ್ತಿನಲ್ಲಿ ಎಲ್ಲಾ 5 ತೀರ್ಪುಗಾರರು ಮೇರಿ ಕೋಮ್‌ಗೆ ಅಂಕ ನೀಡಿದ್ದರಿಂದ ಅಂತಿಮವಾಗಿ 4-1 ರಿಂದ ಭಾರತದ ಬಾಕ್ಸರ್ ಜಯಶಾಲಿ ಎಂದು ಘೋಷಿಸಲಾಯಿತು.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ