ಟೋಕಿಯೋ 2020: ಭಾರತ ಆರ್ಚರಿ ಪಟುಗಳಿಗೆ ಇಂದು ಕೊನೆಯ ಅವಕಾಶ

Suvarna News   | Asianet News
Published : Jul 28, 2021, 07:53 AM IST
ಟೋಕಿಯೋ 2020: ಭಾರತ ಆರ್ಚರಿ ಪಟುಗಳಿಗೆ ಇಂದು ಕೊನೆಯ ಅವಕಾಶ

ಸಾರಾಂಶ

* ವೈಯುಕ್ತಿಕ ವಿಭಾಗದಲ್ಲಿ ಸ್ಪರ್ಧೆಗಿಳಿದ ಭಾರತದ ಆರ್ಚರ್‌ಗಳು * ತಂಡ ವಿಭಾಗದಲ್ಲಿ ಹಿನ್ನಡೆ ಅನುಭವಿಸಿರುವ ಭಾರತದ ಆರ್ಚರ್‌ಗಳು * ವೈಯುಕ್ತಿಕ ವಿಭಾಗದಲ್ಲಿ ದೀಪಿಕಾ, ತರುಣ್ ರೈ, ಪ್ರವೀಣ್ ಸ್ಪರ್ಧೆ

ಟೋಕಿಯೋ(ಜು.28): ತಂಡ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ನಿರಾಸೆ ಅನುಭವಿಸಿದ್ದ ಭಾರತೀಯ ಆರ್ಚರ್‌ಗಳು ಬುಧವಾರ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಪದಕ ಗೆಲ್ಲಲು ಕೊನೆಯ ಅವಕಾಶವಾಗಿದೆ. 

ತಂಡ ವಿಭಾಗದ ರ‍್ಯಾಂಕಿಂಗ್‌ ಸುತ್ತಿನಲ್ಲಿ ಸಾಧಾರಣ ಪ್ರದರ್ಶನ ತೋರಿ ಕ್ವಾರ್ಟರ್‌ ಫೈನಲ್‌ನಲ್ಲಿ ಬಲಿಷ್ಠ ಕೊರಿಯಾವನ್ನು ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದ ಭಾರತೀಯ ಆರ್ಚರ್‌ಗಳು, ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.  ಅಂತಿಮ 32ರ ಎಲಿಮಿನೇಷನ್‌ ಸುತ್ತು ಬುಧವಾರ ನಡೆಯಲಿದ್ದು, ಮಹಿಳೆಯರ ವಿಭಾಗದಲ್ಲಿ ದೀಪಿಕಾ ಕುಮಾರಿ, ಪುರುಷರ ವಿಭಾಗದಲ್ಲಿ ತರುಣ್‌ದೀಪ್‌ ರೈ ಹಾಗೂ ಪ್ರವೀಣ್‌ ಜಾಧವ್‌ ಸ್ಪರ್ಧಿಸಲಿದ್ದಾರೆ.

ಟೋಕಿಯೋ 2020: 13 ವರ್ಷದ ಸ್ಕೇಟ್‌ಬೋರ್ಡರ್‌ಗೆ ಒಲಿದ ಒಲಿಂಪಿಕ್ಸ್ ಚಿನ್ನದ ಪದಕ

ಟಿಟಿ: ಶರತ್‌ಗೆ ಸೋಲು, ಭಾರತದ ಸವಾಲು ಅಂತ್ಯ

ಹಾಲಿ ಒಲಿಂಪಿಕ್‌ ಹಾಗೂ ವಿಶ್ವ ಚಾಂಪಿಯನ್‌ ಟೇಬಲ್‌ ಟೆನಿಸ್‌ ಆಟಗಾರ ಚೀನಾದ ಮಾ ಲಾಂಗ್‌ ವಿರುದ್ಧ ಭಾರತದ ಅಚಂತ ಶರತ್‌ ಕಮಲ್‌ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿನಲ್ಲಿ ವೀರೋಚಿತ ಸೋಲು ಕಂಡರು.

ಮೊದಲ 3 ಗೇಮ್‌ಗಳಲ್ಲಿ ಭರ್ಜರಿ ಪೈಪೋಟಿ ನೀಡಿದ ಶರತ್‌, ಕೊನೆ 2 ಗೇಮ್‌ಗಳಲ್ಲಿ ಮಂಕಾದರು. 7-11, 11-8, 11-13, 4-11, 4-11 ಗೇಮ್‌ಗಳಲ್ಲಿ ಶರತ್‌ ಶರಣಾದರು. ಇದರೊಂದಿಗೆ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿತು.

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ