ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

Suvarna News   | Asianet News
Published : Jul 27, 2021, 05:01 PM ISTUpdated : Jul 27, 2021, 05:16 PM IST
ಒಲಿಂಪಿಕ್‌ ತಾರೆ ಮೀರಾಬಾಯಿ ಚಾನುಗೆ ಸಿಕ್ತು ಬಡ್ತಿ, 2 ಕೋಟಿ ರೂ ಬಹುಮಾನ

ಸಾರಾಂಶ

* ಒಲಿಂಪಿಕ್ಸ್‌ ಪದಕ ಗೆದ್ದ ಮೀರಾಬಾಯಿ ಚಾನುವಿಗೆ ಜಾಕ್‌ಪಾಟ್‌ * ರೈಲ್ವೇ ಇಲಾಖೆಯಿಂದ 2 ಕೋಟಿ ರುಪಾಯಿ ಬಹುಮಾನ, ಉದ್ಯೋಗದಲ್ಲಿ ಬಡ್ತಿ * ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧಕಿಗೆ ಸನ್ಮಾನ

ನವದೆಹಲಿ(ಜು.27): ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮರಳಿದ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಅವರನ್ನು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಆತ್ಮೀಯ ಸ್ವಾಗತಿಸಿದ್ದಲ್ಲದೇ, ಸಾಧಕಿಗೆ 2 ಕೋಟಿ ರುಪಾಯಿ ನಗದು ಬಹುಮಾನ ಹಾಗೂ ಈಶಾನ್ಯ ರೈಲ್ವೇ ಇಲಾಖೆಯಲ್ಲಿ ಅವರಿಗೆ ಬಡ್ತಿ ನೀಡಲಾಗಿದೆ.

ಮೀರಾಬಾಯಿ ಚಾನು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಮೂಲಕ ಕೋಟ್ಯಾಂತರ ಭಾರತೀಯರ ಪಾಲಿಗೆ ಸ್ಪೂರ್ತಿಯಾಗಿದ್ದಾರೆ. ಅವರ ನಿರಂತರ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ ಎಂದು ರೈಲ್ವೇ ಸಚಿವರು ನುಡಿದಿದ್ದಾರೆ. ದೇಶದ ಹೆಮ್ಮೆಯಾದ ಮೀರಾಬಾಯಿ ಚಾನು ಅವರನ್ನು ಭೇಟಿಯಾಗಿ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅವರಿಗೆ ಸನ್ಮಾನ ಮಾಡಿ, 2 ಕೋಟಿ ರುಪಾಯಿ ಬಹುಮಾನ ಘೋಷಿಸಲಾಯಿತು ಹಾಗೆಯೇ ಬಡ್ತಿಯನ್ನು ನೀಡಲಾಯಿತು. ಆಕೆ ತನ್ನ ಪರಿಶ್ರಮ ಹಾಗೂ ಪ್ರತಿಭೆಯಿಂದ ಕೋಟ್ಯಾಂತರ ಭಾರತೀಯರನ್ನು ಸ್ಪೂರ್ತಿಗೊಳಿಸಿದ್ದಾರೆ ಎಂದು ಅಶ್ವಿನಿ ವೈಷ್ಣವ್ ಟ್ವೀಟ್‌ ಮಾಡಿದ್ದಾರೆ.

ತುಂಬಾ ಪಿಝಾ ತಿನ್ನಬೇಕು ಎಂದ ಚಾನು..! ಲೈಫ್‌ ಟೈಂ ಫ್ರೀ ಪಿಝಾ ಘೋಷಿಸಿದ ಡೊಮಿನೋಸ್

ಮಣಿಪುರದ ಮೀರಾಬಾಯಿ ಚಾನು ಈಶಾನ್ಯ ರೈಲ್ವೇ ಉದ್ಯೋಗಿಯಾಗಿದ್ದು, ಏಪ್ರಿಲ್‌ 2018ರಲ್ಲಿ ಸ್ಪೆಷಲ್ ಡ್ಯೂಟಿ(ಕ್ರೀಡೆ) ಆಫಿಸರ್ ಆಗಿ ಬಡ್ತಿ ನೀಡಲಾಗಿತ್ತು. ಜಪಾನ್ ರಾಜಧಾನಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 49 ಕೆ.ಜಿ. ವಿಭಾಗದ ವೇಟ್‌ಲಿಪ್ಟಿಂಗ್‌ನಲ್ಲಿ ಒಟ್ಟು 202(87ಕೆಜಿ ಸ್ನ್ಯಾಚ್‌&115 ಕೆಜಿ ಕ್ಲೀನ್ ಅಂಡ್‌ ಜೆರ್ಕ್) ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದು ಬೀಗಿದ್ದರು. ಇಲ್ಲಿಯವರೆಗೆ ಒಲಿಂಪಿಕ್ಸ್‌ನಲ್ಲಿ ಕೇವಲ ಒಂದು ಪದಕ ಮಾತ್ರ ಜಯಿಸಿದೆ.
 

PREV
click me!

Recommended Stories

ಭಾರತೀಯ ಸೇನೆ ಪಾಕ್ ದಾಳಿ ಹಿಮ್ಮೆಟ್ಟಿಸುತ್ತಿದ್ದಂತೆ ಶಾಂತಿ ಪಾಠ ಮಾಡಿದ ಸಾನಿಯಾ ಮಿರ್ಜಾ
ಕಣ್ಮುಚ್ಚಿ ಯುವತಿರಿಗೆ ಕಿಸ್ ಕೊಡುವಾಗ ಜಾಗೃತೆ, ಅಥ್ಲೀಟ್‌ಗೆ ಒಂದು ಮುತ್ತಿನ ಕತೆ ಎಚ್ಚರಿಕೆ