* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಿ.ವಿ. ಸಿಂಧು ಮಿಂಚಿನ ಶುಭಾರಂಭ
* ರಿಯೋ ಪದಕ ವಿಜೇತೆಗೆ ಸಾಟಿಯಾಗದ ಇಸ್ರೇಲಿ ಆಟಗಾರ್ತಿ
* 21-7, 21-10 ನೇರ ಗೇಮ್‌ಗಳಲ್ಲಿ ಸಿಂಧುಗೆ ಒಲಿದ ಜಯ
ಟೋಕಿಯೋ(ಜು.25): ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭರ್ಜರಿಯಾಗಿಯೇ ಶುಭಾರಂಭ ಮಾಡಿದ್ದಾರೆ. ಮೊದಲ ಗೇಮ್ ಅನ್ನು ಕೇವಲ 13 ನಿಮಿಷಗಳಲ್ಲಿ ಕೈವಶ ಮಾಡಿಕೊಂಡಿದ್ದ ಸಿಂಧು, ಆ ನಂತರವೂ ಅನಾಯಾಸವಾಗಿ ಗೆಲುವು ದಾಖಲಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಹೌದು, 2016ರ ರಿಯೋ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತೆ ಸಿಂಧು ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಸ್ರೇಲಿನ ಕೆಸ್ನಿಯಾ ಪೊಲಿಕರ್ಪೊವಾ ಎದುರು 21-7, 21-10 ನೇರ ಗೇಮ್‌ಗಳಲ್ಲಿ ಗೆಲುವು ದಾಖಲಿಸುವ ಮೂಲಕ ಸುಲಭವಾಗಿ ಪಂದ್ಯದಲ್ಲಿ ಪ್ರಾಬಲ್ಯ ಮೆರೆದರು. ಗ್ರೂಪ್ 'ಜೆ'ನಲ್ಲಿ ಸ್ಥಾನ ಪಡೆದಿರುವ ಸಿಂಧು ಮೊದಲ ಗೇಮ್‌ನಲ್ಲಿ 13 ಅಂಕಗಳ ಭಾರೀ ಅಂತರದ ಗೆಲುವು ದಾಖಲಿಸಿದರು. ಎರಡನೇ ಸೆಟ್‌ನಲ್ಲಿ ಇಸ್ರೇಲಿ ಆಟಗಾರ್ತಿ ಕೊಂಚ ತಿರುಗೇಟು ನೀಡಲು ಯತ್ನಿಸಿದರಾದರೂ ಭಾರತೀಯ ಚಾಂಪಿಯನ್ ಆಟಗಾರ್ತಿಯ ಎದುರು ಪ್ರಾಬಲ್ಯ ಮೆರೆಯಲು ಸಾಧ್ಯವಾಗಲಿಲ್ಲ.
PV Sindhu wins her opening group match at the defeating Ksenia Polikarpova of Israel 21-7, 21-10 pic.twitter.com/XWwA2chmxO
— SAIMedia (@Media_SAI)
undefined
ಟೋಕಿಯೋ 2020 ಆರ್ಚರಿ: ಕ್ವಾರ್ಟರ್‌ನಲ್ಲಿ ಸೋತ ದೀಪಿಕಾ-ಪ್ರವೀಣ್
ಪಿ.ವಿ. ಮೊದಲ ಪಂದ್ಯದಲ್ಲೇ ಆಕರ್ಷಕ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಭರವಸೆ ಎನಿಸಿರುವ ಸಿಂಧು ಮತ್ತೊಮ್ಮೆ ಟೋಕಿಯೋದಲ್ಲಿ ಪದಕ ಗೆಲ್ಲಲಿ ಎನ್ನುವುದು ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.