ಟೋಕಿಯೋ(ಜು.22): ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ. ವೆಯ್ಟಿಲಿಫ್ಟಿಂಗ್ 49 ಕೆಜಿ ಮಹಿಳಾ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲೋ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಚಾನು ಸಾಧನೆಗೆ ಪ್ರಧಾನಿ ಮೋದಿ, ರಾಷ್ಟ್ರಪತಿ ಸೇರಿದಂತೆ ಇಡೀ ಭಾರತ ಶುಭಕೋರಿದೆ. ಇದೀಗ ಮೀರಾ ಬಾಯಿ ಕೋಟ್ಯಾಂತರ ಭಾರತೀಯರ ಪ್ರಾರ್ಥನೆಗೆ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಬೆಂಬಲ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದ ಹೇಳಿದ್ದಾರೆ.
ಟೋಕಿಯೋ ಒಲಿಂಪಿಕ್ಸ್; ಮೀರಾಬಾಯಿ ಪರಿಶ್ರಮದಿಂದ ಪದಕಪಟ್ಟಿಯಲ್ಲಿ ಭಾರತಕ್ಕೆ 12ನೇ ಸ್ಥಾನ!ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದ ಬೆನ್ನಲ್ಲೇ ಪ್ರಧಾನಿ ಮೋದಿ ಶುಭಾಶಯ ತಿಳಿಸಿದ್ದರು. ಟ್ವಿಟರ್ ಮೂಲಕ ಮೋದಿ ಮೀರಾಬಾಯಿ ಚಾನು ಸಾಧನೆಯನ್ನು ಕೊಂಡಾಡಿದ್ದರು. ಇದಕ್ಕೆ ಮೀರಾ ಬಾಯಿ ಚಾನು, ಪ್ರಧಾನಿ ಮೋದಿಯ ಬೆಂಬಲ ಹಾಗೂ ಪೋತ್ಸಾಹಕ್ಕೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
undefined
Thank you Hon'ble Pm sir for all the support and encouragement. https://t.co/qcbBTb5XDC
— Saikhom Mirabai Chanu (@mirabai_chanu)ಮೀರಾಬಾಯಿ ಚಾನು ಪದಕ ಸಾಧನೆಯಿಂದ ಭಾರತ ಟೋಕಿಯೋ ಪದಕ ಪಟ್ಟಿಯಲ್ಲಿ 12ನೇ ಸ್ಥಾನ ಸಂಪಾದಿಸಿದೆ. ನಾಳೆ(ಜು.25) ಮತ್ತಷ್ಟು ಪದಕದ ನಿರೀಕ್ಷೆಯಿದೆ. ಪಿವಿ ಸಿಂಧೂ, ಮೇರಿ ಕೋಮ್, ಸಾನಿಯಾ ಮಿರ್ಜಾ ಸೇರಿದಂತೆ ಘಟಾನುಘಟಿ ಕ್ರೀಡಾಪಟುಗಳು ಕಣಕ್ಕಿಳಿಯಲಿದ್ದಾರೆ.
Could not have asked for a happier start to ! India is elated by ’s stupendous performance. Congratulations to her for winning the Silver medal in weightlifting. Her success motivates every Indian. pic.twitter.com/B6uJtDlaJo
— Narendra Modi (@narendramodi)