ಒಂದೆಡೆ ಗಾಯ, ರಕ್ತ ಕೋರ್ಟ್ ಮೇಲೆ ಚೆಲ್ಲಿತ್ತು. ಆದರೆ 'ಲಕ್ಷ್ಯ' ಚಿನ್ನವಾಗಿತ್ತು. ನೋವಿಗಿಂತ ಗುರಿ ಸ್ಪಷ್ಟವಾಗಿತ್ತು. ಆದರೆ ಗಾಯ ಮುಳುವಾಗಿಬಿಟ್ಟಿತ್ತು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲಕ್ಷ್ಯ ಸೇನ್ ಪದಕ ಗೆಲ್ಲದೆ ನಿರಾಸೆ ಅನುಭವಿಸಿದರೂ 2028ರಲ್ಲಿ ಚಿನ್ನ ಗೆಲ್ಲುವ ತಾರೆಯಾಗಿ ರೂಪುಗೊಂಡಿದ್ದಾರೆ.
ಸುದರ್ಶನ್, ಕ್ರೀಡಾಪತ್ರಕರ್ತ
ಆಟವಿತ್ತು, ಅನುಭವ ಸಾಲಲಿಲ್ಲ..!
ಪ್ರತಿಭೆಯಿತ್ತು, ಪರಾಕ್ರಮ ಸಾಲಲಿಲ್ಲ..!
ಹಸಿವಿತ್ತು, ಭೂಮಿ ಹಸನಾಗಿರಲಿಲ್ಲ..!
ಆಟದಲ್ಲಿ ಕೌಶಲ್ಯವಿತ್ತು, ಅದೃಷ್ಟ ಕೈ ಹಿಡಿಯಲಿಲ್ಲ..!
ಆದರೂ ಈ ಹುಡುಗ ಭಾರತದ ಪಾಲಿಗೆ ಚಿನ್ನದ ಹುಡುಗನೇ..
undefined
ಪ್ಯಾರಿಸ್ ಒಲಿಂಪಿಕ್ಸ್’ನ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್’ನಲ್ಲಿ ಸ್ವರ್ಣ ಪದಕ ಗೆದ್ದಿರುವ ಡೆನ್ಮಾರ್ಕ್’ನ ವಿಕ್ಟರ್ ಅಕ್ಸೆಲ್ಸನ್ ನುಡಿದ ಭವಿಷ್ಯವೇ ನಿಜವಾದರೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್’ನಲ್ಲಿ ಲಕ್ಷ್ಯ ಸೇನ್ ಚಿನ್ನ ಗೆದ್ದೇ ಗೆಲ್ಲುತ್ತಾನೆ.
ಗೋಲ್ಡ್ ಮೆಡಲ್ ಮ್ಯಾಚ್’ಗೆ ಅರ್ಹತೆ ಪಡೆಯುವ ಅವಕಾಶ ಸ್ವಲ್ಪದರಲ್ಲೇ ಲಕ್ಷ್ಯನಿಗೆ ಕೈ ತಪ್ಪಿತ್ತು. ಕೊಂಚ sensible ಆಗಿ ಆಡಿದ್ದರೆ ಇವತ್ತು ಚಿನ್ನ ಗೆದ್ದಿರುವ ಅಕ್ಸೆಲ್ಸನ್ ಸೆಮಿಫೈನಲ್’ನಲ್ಲೇ ಮಕಾಡೆ ಮಲಗಿ ಬಿಡುತ್ತಿದ್ದ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮೊದಲ ಗೇಮ್ ಗೆದ್ದ ಲಕ್ಷ್ಯನಿಗೆ ಅದೃಷ್ಟ ಕೈ ಹಿಡಿಯಲಿಲ್ಲ. ಪಂದ್ಯದ ಮಧ್ಯೆ racket ಹಿಡಿಯುವ ಕೈಗೇ ಗಾಯವಾಗಿ ಬಿಟ್ಟಿತು. ಒಂದೆರಡು ರಕ್ತದ ಹನಿ’ಗಳು ಅಂಗಣಕ್ಕೆ ಬಿದ್ದವು. ಚಿಕಿತ್ಸೆ ಪಡೆದು ಆಡಿದರೂ ಪದಕದ ಲಕ್ಷ್ಯ ಭೇದಿಸಲು ಹೊರಟಿದ್ದವನಿಗೆ ಆ ಗಾಯವೇ ಮುಳುವಾಯಿತು.
ಪ್ಯಾರಿಸ್ ಒಲಿಂಪಿಕ್ಸ್ 2024 ಹೋರಾಡಿ ಸೋತ ಲಕ್ಷ್ಯ ಸೇನ್; ಭಾರತದ ಕೈತಪ್ಪಿದ ಕಂಚು..!
ಈ ಸೋಲಿನಲ್ಲೂ ಗೆಲುವಿದೆ. ಲಕ್ಷ್ಯ ಸೇನ್ ಪಾಲಿಗೆ ಇದು ಆರಂಭ ಅಷ್ಟೇ.. ಅವನಿಗೂ ಮುನ್ನ ಒಲಿಂಪಿಕ್ಸ್’ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಭಾರತದ ಮತ್ತೊಬ್ಬ ಪುರುಷ ಬ್ಯಾಡ್ಮಿಂಟನ್ ತಾರೆಯನ್ನು ತೋರಿಸಿ ನೋಡೋಣ..? ಸಾಧ್ಯವೇ ಇಲ್ಲ.. ಪ್ರಕಾಶ್ ಪಡುಕೋಣೆ, ಪುಲ್ಲೇಲ ಗೋಪಿಚಂದ್ ಅವರಂಥ ದಿಗ್ಗಜರಿಗೆ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ್ದಾನೆ 22 ವರ್ಷದ ಲಕ್ಷ್ಯ ಸೇನ್.
ಲಕ್ಷ್ಯನಿಗೆ ಉತ್ತರಾಖಂಡ್ ಜನ್ಮಭೂಮಿ, ಕರ್ನಾಟಕ ಕರ್ಮಭೂಮಿ. ಬ್ಯಾಡ್ಮಿಂಟನ್ ಆಡಲೆಂದೇ 12 ವರ್ಷಗಳ ಹಿಂದೆ ಉತ್ತರಾಖಂಡ್’ನ ಅಲ್ಮೋರಾದಿಂದ ಬೆಂಗಳೂರಿಗೆ ಬಂದಿದ್ದ ಲಕ್ಷ್ಯನೀಗ ನಮ್ಮ ಹುಡುಗನೇ ಆಗಿ ಹೋಗಿದ್ದಾನೆ.
ಒಲಿಂಪಿಕ್ಸ್’ನಲ್ಲಿ ಈ ಹುಡುಗ ಡಬಲ್ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ವಿಕ್ಟರ್ ಅಕ್ಸೆಲ್ಸನ್’ನಂಥಾ ದಿಗ್ಗಜನಿಗೇ ಬೆವರಿಳಿಸಿದ್ದಾನೆ ಎಂದರೆ, ಅನುಮಾನವೇ ಬೇಡ, He is the man. ಭಾರತಕ್ಕೆ ಮುಂದಿನ ಒಲಿಂಪಿಕ್ಸ್’ನಲ್ಲಿ ಚಿನ್ನದ ಪದಕ ತಂದು ಕೊಡುವ ಹುಡುಗ ಇವನೇ..
ಪ್ರೀತಿಯ ಲಕ್ಷ್ಯ,
ಪದಕ ಗೆಲ್ಲದಿದ್ದರೇನಂತೆ.. ಪ್ಯಾರಿಸ್ ಒಲಿಂಪಿಕ್ಸ್’ನಲ್ಲಿ ನೀನು ಆಡಿದ ಆಟದ ಬಗ್ಗೆ ನಮಗೆ ಹೆಮ್ಮೆಯಿದೆ.
ಪ್ಯಾರಿಸ್ ಒಲಿಂಪಿಕ್ಸ್: ಫೈನಲ್ ಪ್ರವೇಶಿಸಿ ಇತಿಹಾಸ ಬರೆದ ವಿನೇಶ್ ಫೋಗಟ್