ಮನು ಭಾಕರ್ ಹ್ಯಾಟ್ರಿಕ್ ಪದಕ ಸಾಧನೆ ಜಸ್ಟ್ ಮಿಸ್, ಕೆಚ್ಚೆದೆಯ ಹೋರಾಟಕ್ಕೆ ಭಾರಿ ಮೆಚ್ಚುಗೆ!

25 ಮೀಟರ್ ಪಿಸ್ತೂಲ್ ಶೂಟಿಂಗ್‌ನಲ್ಲಿ ಫೈನಲ್ ಪ್ರವೇಶಿಸಿದ್ಧ ಮನು ಭಾಕರ್ ಮೂರನೇ ಪದಕ ಜಸ್ಟ್ ಮಿಸ್ ಮಾಡಿಕೊಂಡಿದ್ದಾರೆ. ಫೈನಲ್ ಸುತ್ತಿನಲ್ಲಿ ಮನು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಆದರೆ ಮನು ಹೋರಾಟಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ
 


ಪ್ಯಾರಿಸ್(ಆ.03) ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಮೂರು ಕಂಚಿನ ಪದಕ ಸಾಧನೆ ಮಾಡಿದೆ. ಇಂದು ನಡೆದ 25 ಮೀಟರ್ ಪಿಸ್ತೂಲ್ ಫೈನಲ್ ಸುತ್ತಿನಲ್ಲಿ ಚಾಂಪಿಯನ್ ಅಥ್ಲೀಟ್ ಮನುಭಾಕರ್ ಮೂರನೇ ಪದಕಕ್ಕೆ ಗುರಿ ಇಟ್ಟಿದ್ದರು. ಆದರೆ ಕೂದಲೆಳೆ ಅಂತರದಲ್ಲಿ ಪದಕ ಮಿಸ್ ಮಾಡಿಕೊಂಡಿದ್ದಾರೆ. ಪದಕ ಸುತ್ತಿನಲ್ಲಿ ಮನು ಭಾಕರ್ 28 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 31 ಅಂಕ ಪಡೆದ ಹಂಗೇರಿಯಾದ ವಿ ಮೇಜರ್ ಕಂಚಿನ ಪದಕ ಸಾಧನೆ ಮಾಡಿದ್ದಾರೆ.

ಫೈನಲ್ ಸುತ್ತಿನಲ್ಲಿನ ಆರಂಭಿಕ ಹಂತದಲ್ಲಿ 2ನೇ ಸ್ಥಾನದಲ್ಲಿದ್ದ ಮನು ಭಾಕರ್ ಮತ್ತೊಂದು ಪದಕದ ಸೂಚನೆ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಮನು ಭಾಕರ್ ಹಿನ್ನಡೆ ಅನಭವಿಸಿದರು. ಎಲಿಮಿನೇಶನ್ ಶೂಟ್ ಆಫ್‌ನಲ್ಲಿ ಮನು ನಿರಾಸೆ ಅನುಭವಿಸಿದರು. ಈ ಮೂಲಕ ಒಂದೇ ಒಲಿಂಪಿಕ್ಸ್‌ನಲ್ಲಿ ಹ್ಯಾಟ್ರಿಕ್ ಪದಕ ಸಾಧನೆ ಮಾಡುವ ಮೂಲಕ ದಾಖಲೆ ಬರೆಯಲು ಮನು ಭಾಕರ್ ಸಜ್ಜಾಗಿದ್ದರು. ಆದರೆ 3 ಪದಕ ಸಾಧ್ಯವಾಗಿಲ್ಲ. ಈಗಾಗಲೇ 2 ಪದಕ ಗೆದ್ದು ಭಾರತ ಕೀರ್ತಿ ಪತಾಕೆಯನ್ನು ಮನು ಭಾಕರ್ ಮತ್ತಷ್ಟು ಎತ್ತರಕ್ಕೆ ಹಾರಿಸಿದ್ದಾರೆ.

Latest Videos

52 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತ!

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಶೂಟರ್‌ಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. ಸದ್ಯ ಭಾರತ ಸಂಪಾದಿಸಿರುವ 3 ಪದಕಗಳು ಶೂಟಿಂಗ್ ಮೂಲಕವೇ ಬಂದಿದೆ. ಈ ಪೈಕಿ ಎರಡು ಪದಕವನ್ನು ಮನು ಭಾಕರ್ ತಂದುಕೊಟ್ಟಿದ್ದಾರೆ. 10 ಮೀಟರ್ ಶೂಟಿಂಗ್‌ನಲ್ಲಿ ಮನು ಭಾಕರ್ ಕಂಚಿನ ಪದಕ ಸಾಧನೆ ಮಾಡಿದ್ದರು. ಬಳಿಕ ಸರಬ್ಜೋತ್ ಸಿಂಗ್ ಜೊತೆ ಸೇರ ಮಿಶ್ರ 10 ಮೀಟರ್ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು. ಇದಾದ ಬಳಿಕ 50 ಮೀಟರ್ ರೈಫಲ್ ಶೂಟಿಂಗ್‌ನಲ್ಲಿ ಸ್ವಪ್ನಿಲ್ ಕುಶಾಲೆ ಕಂಚಿನ ಪದಕ ಗೆದ್ದಿದ್ದಾರೆ. 

2012ರಲ್ಲಿ ಭಾರತದ ಶೂಟಿಂಗ್‌ನಲ್ಲಿ 1 ಬೆಳ್ಳಿ ಹಾಗೂ 2 ಕಂಚಿನ ಮೂಲಕ ಒಟ್ಟು 2 ಪದಕ ಗೆದ್ದಿತ್ತು. ಈ ಬಾರಿ ಶೂಟಿಂಗ್‌ನಲ್ಲಿ ಭಾರತ ಈಗಾಗಲೇ 3 ಕಂಚಿನ ಪದಕ ಗೆದ್ದುಕೊಂಡ ಸಾಧನೆ ಮಾಡಿದೆ.  

ಮನು ಭಾಕರ್ ಪದಕ ಗೆದ್ದ ಬೆನ್ನಲ್ಲೇ ಅರಸಿ ಬಂದ 40ಕ್ಕೂ ಹೆಚ್ಚು ಬ್ರಾಂಡ್, ರಾಯಭಾರಿಯಾಗಲು ಕೋಟಿಗಟ್ಟಲೆ ಒಪ್ಪಂದ!

click me!