ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೇಡ್ ಇನ್ ಇಂಡಿಯಾ ಝಲಕ್‌

By Suvarna News  |  First Published Jul 17, 2021, 12:30 PM IST

* ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾ ಉಪಕರಣಗಳ ಬಳಕೆ

* ಭಾರತದ ಬಹುತೇಕ ಕ್ರೀಡಾಪಟುಗಳು ಭಾರತೀಯ ಕಂಪನಿಗಳ ಉಪಕರಣಗಳನ್ನೇ ಬಳಕೆ ಮಾಡುತ್ತಾರೆ.

* ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಜುಲೈ 23ರಿಂದ ಆರಂಭ


ನವದೆಹಲಿ(ಜು.17): ಮುಂಬರುವ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾ ಉಪಕರಣಗಳು ಬಳಕೆಯಾಗಲಿವೆ. ಕ್ರೀಡಾಕೂಟದ ವೇಳೆ ಭಾರತದ ಆನಂದ್‌ ಟ್ರ್ಯಾಕ್‌ ಅಂಡ್‌ ಫೀಲ್ಡ್‌ ಎಕ್ವಿಪ್‌ಮೆಂಟ್‌(ಎಟಿಇ), ಭಲ್ಲಾ ಇಂಟರ್‌ನ್ಯಾಷನಲ್‌ ಹಾಗೂ ನೆಲ್ಕೊ ಕಂಪನಿಗಳು ತಯಾರಿಸಿದ ಶಾಟ್‌ ಪುಟ್‌(7.26 ಕೆ.ಜಿ), ಡಿಸ್ಕಸ್‌ (2 ಕೆ.ಜಿ) ಹಾಗೂ ಹ್ಯಾಮರ್‌ (7.26 ಕೆ.ಜಿ)ಗಳನ್ನು ಆಯೋಜಕರು ಸ್ಪರ್ಧೆಗಳು ನಡೆಯುವ ಸ್ಥಳದಲ್ಲಿ ಇರಿಸಲಿದ್ದಾರೆ. ಕ್ರೀಡಾಪಟುಗಳು ಯಾವುದನ್ನು ಬೇಕಿದ್ದರೂ ಆಯ್ಕೆ ಮಾಡಿಕೊಳ್ಳಬಹುದು.

ಅನೇಕ ಕ್ರೀಡಾಪಟುಗಳು ತಮ್ಮ ಸ್ವಂತ ಉಪಕರಣಗಳನ್ನು ತರಲಿದ್ದಾರೆ. ಯಾರಿಗಾದರೂ ಅಗತ್ಯವಿದ್ದರಷ್ಟೇ ಆಯೋಜಕರು ಒದಗಿಸುವ ಉಪಕರಣಗಳನ್ನು ಬಳಸುತ್ತಾರೆ. ಭಾರತದ ಬಹುತೇಕ ಕ್ರೀಡಾಪಟುಗಳು ಭಾರತೀಯ ಕಂಪನಿಗಳ ಉಪಕರಣಗಳನ್ನೇ ಬಳಕೆ ಮಾಡುತ್ತಾರೆ.

Latest Videos

undefined

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಗ್ರಾಮದಲ್ಲಿ ಮೊದಲ ಕೋವಿಡ್ 19 ಕೇಸ್ ಪತ್ತೆ..!

ಉಪಕರಣಗಳನ್ನು ಪೂರೈಸುವ ಕಂಪನಿಗಳಿಗೆ ಆಯೋಜಕರು ಯಾವುದೇ ಹಣ ಪಾವತಿಸುವುದಿಲ್ಲ. ಆದರೆ ವಿಶ್ವದ ಅತಿದೊಡ್ಡ ಕ್ರೀಡಾಕೂಟದಲ್ಲಿ ತಮ್ಮ ಬ್ರ್ಯಾಂಡ್‌ಗಳಿಗೆ ಪ್ರಚಾರ ಸಿಗಲಿದೆ. ಉತ್ತಮ ಗುಣಮಟ್ಟದ ಶಾಟ್‌ಪುಟ್‌, ಡಿಸ್ಕಸ್‌ ಇಲ್ಲವೇ ಹ್ಯಾಮರ್‌ಗೆ ಸುಮಾರು 6,000ರಿಂದ 10,000 ಆಗಲಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.
 

click me!