* ಟೋಕಿಯೋ ಒಲಿಂಪಿಕ್ಸ್‌ಗೆ ಟಿಕೆಟ್ ಪಕ್ಕಾ ಮಾಡಿಕೊಂಡ ಸೀಮಾ ಪೂನಿಯಾ
* ಹರ್ಯಾಣ ಮೂಲದ 37 ವರ್ಷದ ಅಥ್ಲೀಟ್ ಸೀಮಾ ಪೂನಿಯಾ 4 ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದಾರೆ
* 4 ಬಾರಿಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ರೆಡಿಯಾದ ಪೂನಿಯಾ
ಪಟಿಯಾಲ(ಜೂ.30): ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನುಭವಿ ಡಿಸ್ಕಸ್ ಥ್ರೋ ಪಟು ಸೀಮಾ ಪೂನಿಯಾ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದಾರೆ.
ಕಳೆದ ವರ್ಷ ರಷ್ಯಾದಲ್ಲಿ ತರಬೇತಿ ಪಡೆಯುತ್ತಿದ್ದಾಗ ಸೀಮಾಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಇದಾದ ಫಿಟ್‌ನೆಸ್‌ಗಳಿಸಲು ತಿಂಗಳುಗಟ್ಟಲೇ ಶ್ರಮವಹಿಸಿದ್ದರು. ಇದೀಗ ಪಟಿಯಾಲದಲ್ಲಿ ನಡೆಯುತ್ತಿರುವ 60ನೇ ಅಂತರರಾಜ್ಯ ರಾಷ್ಟ್ರೀಯ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 63.72 ಮೀಟರ್ ದೂರ ಡಿಸ್ಕಸ್ ಥ್ರೋ ಎಸೆಯುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 63.50 ಮೀಟರ್ ನಿಗದಿ ಮಾಡಲಾಗಿತ್ತು.
I congratulate Seema Punia for qualifying for after a throw of 63.72m in the women’s discus throw at the finals of the 60th National Inter-State Athletics Championship in Patiala pic.twitter.com/kCYdCovBBY
— Kiren Rijiju (@KirenRijiju)
ಹರ್ಯಾಣ ಮೂಲದ 37 ವರ್ಷದ ಅಥ್ಲೀಟ್ ಸೀಮಾ ಪೂನಿಯಾ 4 ಬಾರಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಜಯಿಸಿದ್ದಾರೆ. ಇದೀಗ ಕಮಲ್‌ಪ್ರೀತ್ ಕೌರ್ ಹಾಗೂ ಸೀಮಾ ಪೂನಿಯಾ ಡಿಸ್ಕಸ್ ಥ್ರೋನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವಾರ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-4 ಟೂರ್ನಿಯಲ್ಲಿ 66.59 ಮೀಟರ್ ದೂರ ಎಸೆಯುವ ಮೂಲಕ ಕಮಲ್‌ಪ್ರೀತ್ ಕೌರ್ ರಾಷ್ಟ್ರೀಯ ದಾಖಲೆ ಬರೆದಿದ್ದರು.
ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಗಿಟ್ಟಿಸಿದ ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್
ಸೀಮಾ ಪೂನಿಯಾಗಿದು 4ನೇ ಒಲಿಂಪಿಕ್ಸ್ ಆಗಿದೆ. ಈ ಮೊದಲು ಸೀಮಾ 2004, 2012 ಹಾಗೂ 2016ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.