ಮುಂದಿನ ತಿಂಗಳಿನಿಂದ ಗುರುಗ್ರಾಮ್‌ನಲ್ಲಿ ಝೊಮಾಟೊ ಇನ್‌ಸ್ಟಂಟ್ ನಾಲ್ಕು ನಿಲ್ದಾಣಗಳೊಂದಿಗೆ ಪ್ರಾರಂಭವಾಗುತ್ತದೆ. ಕಂಪನಿಯು ಭಾರತದಾದ್ಯಂತ ಈ ಸೇವೆಯನ್ನು ಬಿಡುಗಡೆ ಮಾಡುವ ಟೈಮ್‌ಲೈನ್ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
Tech Desk: ದೇಶದ ಅತ್ಯಂತ ಜನಪ್ರಿಯ ಆಹಾರ ವಿತರಣಾ (Food Delivery) ಅಪ್ಲಿಕೇಶನ್‌ಗಳಲ್ಲಿ ಒಂದಾದ ಝೊಮಾಟೊ ಆಹಾರ ಪ್ರೇಮಿಗಳಿಗಾಗಿ 10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ಘೋಷಿಸಿದೆ. ಝೊಮಾಟೊ ಸ್ಥಾಪಕ ದೀಪಿಂದರ್ ಗೋಯಲ್, ಸೋಮವಾರ ಸಂಜೆ ಮತ್ತೊಂದು ತ್ವರಿತ ವಿತರಣಾ ಸೇವೆಯ ಬಗ್ಗೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. "ಝೊಮಾಟೊದಲ್ಲಿ 10 ನಿಮಿಷಗಳ ಆಹಾರ ವಿತರಣೆ ಶೀಘ್ರದಲ್ಲೇ ಬರಲಿದೆ" ಎಂದು ಅವರು ತಿಳಿಸಿದ್ದಾರೆ.
ಇಲ್ಲಿಯವರೆಗೆ, ನಾವು ವಿವಿಧ ಟೆಕ್ ಪ್ಲಾಟ್‌ಫಾರ್ಮ್‌ಗಳಿಂದ 10 ನಿಮಿಷಗಳ ದಿನಸಿ ವಿತರಣಾ ಸೇವೆಗಳನ್ನು ನೋಡಿದ್ದೇವೆ. ಆದರೆ ಕಂಪನಿಯೊಂದು ಕೇವಲ 10 ನಿಮಿಷಗಳಲ್ಲಿ ಆಹಾರವನ್ನು ತಲುಪಿಸುವುದಾಗಿ ಹೇಳಿಕೊಂಡಿರುವುದು ಇದೇ ಮೊದಲು.
undefined
ಇದನ್ನೂ ಓದಿ: New Year 2022: ಪ್ರತಿ ನಿಮಿಷಕ್ಕೆ 17,000 ಆನಲೈನ್ ಫುಡ್ ಆರ್ಡರ್ಸ್‌ಗಳೊಂದಿಗೆ ಹೊಸ ವರ್ಷ ಆಚರಿಸಿದ ಭಾರತ!
“ಬ್ಲಿಂಕಿಟ್‌ನ ಗ್ರಾಹಕನಾದ ನಂತರ ಜೊಮಾಟೊದಿಂದ 30 ನಿಮಿಷಗಳ ಸರಾಸರಿ ವಿತರಣಾ ಸಮಯ ತುಂಬಾ ನಿಧಾನವಾಗಿದೆ ಎಂದು ನಾನು ಭಾವಿಸಲು ಪ್ರಾರಂಭಿಸಿದೆ ಮತ್ತು ಶೀಘ್ರದಲ್ಲೇ ಇದು ಹಳೆಯದಾಗಲಿದೆ. ನಾವು ಈ ರೀತಿ ಸೇವೆ ನೀಡದಿದ್ದರೆ, ಬೇರೆಯವರು ಮಾಡುತ್ತಾರೆ" ಎಂದು ಗೋಯಲ್ ಬ್ಗಾಗ್‌ಪೋಸ್ಟ್‌ನಲ್ಲಿ ಹೇಳಿದ್ದಾರೆ. ಬ್ಲಿಂಕಿಟ್ ಎಂಬುದು ಕ್ವಿಕ್ ಕಾಮರ್ಸ್ ಸ್ಪೇಸ್ ಆಗಿದ್ದು ಝೊಮಾಟೊ ಹೂಡಿಕೆ ಮಾಡಿದ ಕಂಪನಿಗಳಲ್ಲಿ ಒಂದಾಗಿದೆ.
"ತಂತ್ರಜ್ಞಾನ ಉದ್ಯಮದಲ್ಲಿ ಬದುಕಲು (ಮತ್ತು ಆದ್ದರಿಂದ ಅಭಿವೃದ್ಧಿ ಹೊಂದಲು) ನಾವೀನ್ಯತೆ ಮತ್ತು ಮದಲು ಹೆಜ್ಜೆ ಇಡುವುದು ಏಕೈಕ ಮಾರ್ಗವಾಗಿದೆ. ಹೀಗಾಗಿ Zomato Instant ಮೂಲಕ ನಾವು ನಮ್ಮ 10-ನಿಮಿಷದ ಆಹಾರ ವಿತರಣಾ ಸೇವೆ ನೀಡುತ್ತೇವೆ ,” ಎಂದು ತಿಳಿಸಿದ್ದಾರೆ.
ಪಾಲುದಾರರ ಮೇಲೆ ಒತ್ತಡವಿಲ್ಲ: ಈ ತ್ವರಿತ ವಿತರಣಾ ಸೇವೆಗಳು ಗ್ರಾಹಕರಿಗೆ ಉತ್ತಮವಾಗಿವೆ, ಆದರೆ ವಿತರಣಾ ಏಜೆಂಟ್‌ಗಳಿಗೆ ಇರಿಂದ ತೊಂದರೆಯಾಗಬಹುದು. 10 ನಿಮಿಷಗಳ ದಿನಸಿ ವಿತರಣಾ ಸೇವೆಯು ದೇಶದಲ್ಲಿ ವೇಗವನ್ನು ಪಡೆದ ನಂತರ, ಡೆಲಿವರಿ ಏಜೆಂಟ್‌ಗಳ ಜೀವನವನ್ನು ಅಪಾಯಕ್ಕೆ ತಳ್ಳುವ ಹಲವಾರು ಘಟನೆಗಳು ನಡೆದಿವೆ. ಹೀಗಾಗಿ ಆಹಾರವನ್ನು ವೇಗವಾಗಿ ತಲುಪಿಸಲು ವಿತರಣಾ ಪಾಲುದಾರರ ಮೇಲೆ ಝೋಮ್ಯಾಟೋ ಯಾವುದೇ ಒತ್ತಡವನ್ನು ಹೇರುವುದಿಲ್ಲ ಎಂದು ಗೋಯಲ್ ಸ್ಪಷ್ಟಪಡಿಸಿದ್ದಾರೆ.
Announcement: 10 minute food delivery is coming soon on Zomato.
Food quality – 10/10
Delivery partner safety – 10/10
Delivery time – 10 minutes
Here’s how Zomato Instant will achieve the impossible while ensuring delivery partner safety – https://t.co/oKs3UylPHh pic.twitter.com/JYCNFgMRQz
“ನಮ್ಮ ತ್ವರಿತ ವಿತರಣಾ ಭರವಸೆಯನ್ನು ಪೂರೈಸಲು ನಾವು ಸ್ಪಷ್ಟೀಕರಣದೊಂದಿಗೆ ಪ್ರಾರಂಭಿಸುತ್ತೇವೆ, ಆಹಾರವನ್ನು ವೇಗವಾಗಿ ತಲುಪಿಸಲು ನಾವು ವಿತರಣಾ ಪಾಲುದಾರರ ಮೇಲೆ ಯಾವುದೇ ಒತ್ತಡವನ್ನು ಹಾಕುವುದಿಲ್ಲ. ತಡವಾದ ಡೆಲಿವರಿಗಳಿಗಾಗಿ ನಾವು ವಿತರಣಾ ಪಾಲುದಾರರಿಗೆ ದಂಡ ವಿಧಿಸುವುದಿಲ್ಲ. ವಿತರಣಾ ಪಾಲುದಾರರಿಗೆ ವಿತರಣೆಯ ಭರವಸೆಯ ಸಮಯದ ಬಗ್ಗೆ ತಿಳಿಸಲಾಗಿಲ್ಲ. ಸಮಯ ಆಪ್ಟಿಮೈಸೇಶನ್ ರಸ್ತೆಯಲ್ಲಿ ಸಂಭವಿಸುವುದಿಲ್ಲ ಮತ್ತು ಯಾವುದೇ ಜೀವವನ್ನು ಅಪಾಯಕ್ಕೆ ಒಳಪಡಿಸುವುದಿಲ್ಲ, ”ಎಂದು ಗೋಯಲ್ ಹೇಳಿದ್ದಾರೆ.
ಇದನ್ನೂ ಓದಿ: Viral Video: ಗುಜರಾತಿಯಲ್ಲಿ ಫುಡ್ ಆರ್ಡರ್ ಮಾಡಿದ ಅಮೇರಿಕನ್ ಯೂಟ್ಯೂಬರ್ !
ಗುರುಗ್ರಾಮ್‌ನಲ್ಲಿ ಆರಂಭ: ಈ ಸೇವೆಯ ಬಿಡುಗಡೆಗೆ ಸಂಬಂಧಿಸಿದಂತೆ, ಮುಂದಿನ ತಿಂಗಳಿನಿಂದ ಗುರುಗ್ರಾಮ್‌ನಲ್ಲಿ ಜೊಮಾಟೊ ಇನ್‌ಸ್ಟಂಟ್ ನಾಲ್ಕು ನಿಲ್ದಾಣಗಳೊಂದಿಗೆ ಪ್ರಾರಂಭವಾಗುತ್ತದೆ. ಕಂಪನಿಯು ಇನ್ನೂ ಭಾರತದಾದ್ಯಂತ ರೋಲ್‌ಔಟ್ ಟೈಮ್‌ಲೈನ್ ಕುರಿತು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
Zomato Instant ಯಶಸ್ವಿಯಾದರೆ, Swiggy ನಂತಹ ಪ್ರತಿಸ್ಪರ್ಧಿ ಆಹಾರ-ವಿತರಣಾ ಅಪ್ಲಿಕೇಶನ್‌ಗಳು ಸಹ ಮುಂದಿನ ದಿನಗಳಲ್ಲಿ ಇದೇ ರೀತಿಯ ತ್ವರಿತ ಆಹಾರ ವಿತರಣಾ ಸೇವೆಗಳನ್ನು ಬಿಡುಗಡೆ ಮಾಡಬಹುದು.
ಕೆಲವು ತಿಂಗಳುಗಳ ಹಿಂದೆ ಸ್ವಿಗ್ಗಿ ಇನ್‌ಸ್ಟಾಮಾರ್ಟನ್ನು ಪ್ರಾರಂಭಿಸಿದ ನಂತರ, ಜೊಮಾಟೊ ಬ್ಲಿಂಕಿಟ್‌ನಲ್ಲಿ ಹೂಡಿಕೆ ಮಾಡಿತು (ಹಿಂದೆ ಇದನ್ನು ಗ್ರೋಫರ್ಸ್ ಎಂದು ಕರೆಯಲಾಗುತ್ತಿತ್ತು). Blinkit, ಮತ್ತೊಂದು 10-ನಿಮಿಷದ ದಿನಸಿ ವಿತರಣಾ ಸೇವೆಯಾಗಿದ್ದು, ಅದರ 10-ನಿಮಿಷದ ದಿನಸಿ ವಿತರಣಾ ಸೇವೆಗಾಗಿ ದೇಶಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ. ಆದಾಗ್ಯೂ, ಇನ್‌ಸ್ಟಾಮಾರ್ಟಗೆ ಭಿನ್ನವಾಗಿ, ಇದು ಕಾರ್ಟ್ ಬೆಲೆ ಮೇಲೆ ಪ್ರತಿ ಆರ್ಡರ್‌ಗೆ 9 ರೂಗಳ ಶುಲ್ಕವನ್ನು ವಿಧಿಸುತ್ತದೆ.