ಕ್ರಿಪ್ಟೋ ಇನ್ಫ್ಲುಯೆನ್ಸರ್ಸ್‌, ಕರೆನ್ಸಿ ವಿನಮಯ ಆ್ಯಪ್‌ಗಳ ಯೂಟ್ಯೂಬ್ ಚಾನೆಲ್‌ಗಳು ಹ್ಯಾಕ್!

By Suvarna News  |  First Published Jan 25, 2022, 1:41 PM IST

ಕ್ರಿಪ್ಟೋ ಬೆಂಬಲಿಸುವ ಇನ್ಫ್ಲುಯೆನ್ಸರ್ಸ್‌ಗೆ  ಸೇರಿದ ಹಲವಾರು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಭಾರತೀಯ ಕರೆನ್ಸಿ ವಿನಿಮಯ ಅಪ್ಲೀಕೇಶನ್‌ಗಳಾದ CoinDCX, WazirX ಮತ್ತು Unocoin ಯುಟ್ಯೂಬ್‌ ಚಾನೆಲ್‌ಗಳು ಹ್ಯಾಕ್‌ ಆಗಿರುವ ಬಗ್ಗೆ ವರದಿಯಾಗಿದೆ


Tech Desk: ಪ್ರಪಂಚದಾದ್ಯಂತ ಸುದ್ದಿಯಲ್ಲಿರುವ  ಕ್ರಿಪ್ಟೋ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಹ್ಯಾಕರ್‌ಗಳು ತಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತಿದ್ದಾರೆ. ಇತ್ತೀಚಿನ ಘಟನೆಯೊಂದರಲ್ಲಿ, ಕ್ರಿಪ್ಟೋ ಬೆಂಬಲಿಸಿವ ಇನ್ಫ್ಲುಎನ್ಸರ್ಸ್‌ಗೆ (Influencers) ಸೇರಿದ ಹಲವಾರು ಯೂಟ್ಯೂಬ್ ಚಾನೆಲ್‌ಗಳು ಸೇರಿದಂತೆ ಭಾರತೀಯ ಕರೆನ್ಸಿ ವಿನಿಮಯ ಅಪ್ಲೀಕೇಶನ್‌ಗಳಾದ CoinDCX, WazirX ಮತ್ತು Unocoin ಯುಟ್ಯೂಬ್‌ ಚಾನೆಲ್‌ಗಳು ಹ್ಯಾಕ್‌ ಆಗಿರುವ ಬಗ್ಗೆ ವರದಿಯಾಗಿದೆ. ಹ್ಯಾಕರ್‌ಗಳು ಈ ಯುಟ್ಯೂಬ್‌ ಚಾನೆಲ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಕ್ರಿಪ್ಟೋಕರೆನ್ಸಿ ರೂಪದಲ್ಲಿ ಹಣ ಸಂದಾಯ ಮಾಡುವಂತೆ  ಜನರನ್ನು ಕೇಳುವ ವೀಡಿಯೊ ಸೂಚನೆಗಳನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೊದ ವಿವರಣೆ ವಿಭಾಗದಲ್ಲಿ ಹ್ಯಾಕರ್‌ಗಳು ಕ್ರಿಪ್ಟೋ ನೀಡಬೇಕಾದ ವ್ಯಾಲೆಟ್ ಲಿಂಕನ್ನು ಸಹ ಸೇರಿಸಿದ್ದಾರೆ.

ಹ್ಯಾಕ್ ಮಾಡಿದ ಖಾತೆಗಳಲ್ಲಿ ವೀಡಿಯೊ ಸಂದೇಶವನ್ನು  ಪ್ಲೇ ಮಾಡಲು ಹ್ಯಾಕರ್‌ಗಳು ಯೂಟ್ಯೂಬ್ ಸರ್ವರ್‌ಗಳನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. OWCY ಎಂಬ ಹೊಸ, ಪರಿಚಯವಿಲ್ಲದ ಕ್ರಿಪ್ಟೋಕರೆನ್ಸಿಗೆ ಬದಲಾಗಿ USD Coin, Binance ಮತ್ತು Ether ಕ್ರಿಪ್ಟೋಕರೆನ್ಸಿಗಳನ್ನು ಕಳುಹಿಸವಂತೆ ಕೇಳಿಕೊಂಡಿದ್ದಾರೆ.

Tap to resize

Latest Videos

ಇದನ್ನೂ ಓದಿ: PM Narendra Modi: ಪ್ರಧಾನಿ ಮೋದಿ ಟ್ವೀಟರ್‌ ಖಾತೆ ಹ್ಯಾಕ್: ಬಿಟ್‌ಕಾಯಿನ್ ಕುರಿತು ಪೋಸ್ಟ್!

ಈ ಬೆನ್ನಲ್ಲೇ ಭಾರತೀಯ ಕಂಟೆಂಟ್‌ ಕ್ರಿಯೆಟರ್ ಅರುಣ್ ಮೈನಿ (Arun Maini) ಈ ಘಟನೆಯ ಬಗ್ಗೆ ಟ್ವೀಟ್ ಮಾಡಿ ಯಾರಾದರೂ ವೀಡಿಯೊ ಸಂದೇಶವನ್ನು ಸ್ಕ್ರೀನ್-ರೆಕಾರ್ಡ್ ಮಾಡಿದ್ದಾರೆಯೇ ಎಂದು ತಮ್ಮ ಅನುಯಾಯಿಗಳನ್ನು (Followers) ಕೇಳಿದ್ದರು. ಇದಕ್ಕೆ ಪ್ರತಿಕ್ರಿಸಿರುವ ಅನುಯಾಯಿಯೊಬ್ಬರು ಹ್ಯಾಕರ್‌ಗಳ ವೀಡಿಯೊವನ್ನು ಟ್ವೀಟ್‌ ಮಾಡಿದ್ದಾರೆ.

 

I think someone just got into my YouTube account and posted something

Did anyone manage to get a screen recording?

— Arun Maini (@Mrwhosetheboss)

 

Box Mining YouTube ಚಾನೆಲ್‌ನ ಸೃಷ್ಟಿಕರ್ತ ಮೈಕೆಲ್ ಗು (Michael Gu) ಕೂಡ ಟ್ವಿಟರ್ ಮೂಲಕ ತನ್ನ ಚಾನೆಲ್ ಹೈಜಾಕ್ ಆಗಿರುವ ಬಗ್ಗೆ ತನ್ನ ಅನುಯಾಯಿಗಳಿಗೆ ಮಾಹಿತಿ ನೀಡಿದ್ದಾರೆ."ಇದು 30 ಕ್ಕೂ ಹೆಚ್ಚು ಯೂಟ್ಯೂಬರ್‌ಗಳ ಮೇಲೆ ಪರಿಣಾಮ ಬೀರುವುದರಿಂದ ಇದು ಯೂಟ್ಯೂಬ್‌ನಲ್ಲಿ ಹೈಜಾಕಿಂಗ್ ದಾಳಿಯಾಗಿದೆ" ಎಂದು ಗು ಬರೆದಿದ್ದಾರೆ. ಈ ಮಧ್ಯೆ ಭಾರತೀಯ ವಿನಿಮಯ ಕೇಂದ್ರಗಳಾದ Unocoin ಮತ್ತು WazirX ಸಹ ತಮ್ಮ ಚಾನಲ್‌ಗಳು ಹ್ಯಾಕ್‌ ಆಗಿರುವ ಬಗ್ಗೆ ದೃಢಪಡಿಸಿದ್ದು ಚಾನೆಲ್‌  ಮರುಸ್ಥಾಪಿಸಲಾಗಿದೆ ಎಂದು ತಿಳಿಸಿವೆ.

ಇದನ್ನೂ ಓದಿ: I&B Ministry‌: ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವೀಟರ್‌ ಖಾತೆ ಹ್ಯಾಕ್!

“ನಮ್ಮ ಖಾತೆಯಲ್ಲಿ ಯಾವುದೇ ಬಾಹ್ಯ ಲಾಗಿನ್ ಅಥವಾ ಚಟುವಟಿಕೆ ಇಲ್ಲ ಎಂದು ನಾವು ನೋಡಬಹುದು. ಯೂಟ್ಯೂಬ್ ಹ್ಯಾಕ್ ಆಗಿರುವಂತೆ ಅಥವಾ ಯಾವುದೋ ಯೂಟ್ಯೂಬ್  ಉದ್ಯೋಗಿ ಉದ್ದೇಶಪೂರ್ವಕವಾಗಿ ಇದನ್ನು ಮಾಡಿರಬಹುದು ಅಥವಾ ಅವರ ಕಂಪ್ಯೂಟರ್‌ಗೆ ಹ್ಯಾಕ್‌ ಆಗಿರುವ ಸಾಧ್ಯತೆಯೂ ಇದೆ ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ, ”ಎಂದು Unocoin ಸಿಇಒ ಸಾಥ್ವಿಕ್ ವಿಶ್ವನಾಥ್ ತಿಳಿಸಿದ್ದಾರೆ ಎಂದು ಗ್ಯಾಜೆಟ್ಸ್ 360 ವರದಿ ಮಾಡಿದೆ.

ಇನ್ನು ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆಯೇ ಎಂಬ ವಿವರಗಳು ತಿಳಿದಿಲ್ಲ. ಜನರು ಯಾವುದೇ ಕ್ರಿಪ್ಟೋ ಟೋಕನ್‌ಗಳನ್ನು ಹ್ಯಾಕರ್‌ಗಳ ವ್ಯಾಲೆಟ್ ವಿಳಾಸಕ್ಕೆ ವರ್ಗಾಯಿಸಿದ್ದಾರೆಯೇ ಎಂಬುದರ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಈ ಘಟನೆಯ ಕುರಿತು ಯೂಟ್ಯೂಬ್ ಇನ್ನೂ ಯಾವುದೇ ಹೇಳಿಕೆಯನ್ನು ನೀಡಿಲ್ಲ.

2020ರಲ್ಲಿ ಕ್ಯಾರಿ ಮಿನಾತಿ ಯೂಟ್ಯೂಬ್‌ ಹ್ಯಾಕ್: ಅನುಮಾನಾಸ್ಪದ ಹೂಡಿಕೆದಾರರನ್ನು ಗುರಿಯಾಗಿಸಲು ಸೈಬರ್ ಅಪರಾಧಿಗಳು ವೀಡಿಯೊ-ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಸೈಬರ್‌ ಅಟ್ಯಾಕ್‌ ಮಾಡಿರುವುದು ಇದೇ ಮೊದಲಲ್ಲ. ಜುಲೈ 2020 ರಲ್ಲಿ, ಭಾರತದ ಅತ್ಯಂತ ಜನಪ್ರಿಯ ಯೂಟ್ಯೂಬರ್‌ಗಳಲ್ಲಿ ಒಬ್ಬರಾದ ಅಜೇಯ್ ನಗರ್ (CarryMinati)  ಯೂಟ್ಯೂಬ್‌ನಲ್ಲಿನ ಅವರ ಎರಡು ಚಾನಲ್‌ಗಳಲ್ಲಿ ಒಂದನ್ನು ಹ್ಯಾಕ್ ಮಾಡಲಾಗಿತ್ತು ಮತ್ತು ಅವರ ಅನುಯಾಯಿಗಳಿಗೆ ಅನುಮಾನಾಸ್ಪದ ಬಿಟ್‌ಕಾಯಿನ್ ಲಿಂಕ್‌ಗಳನ್ನು ಪ್ರದರ್ಶಿಸಲಾಗಿತ್ತು ಎಂದು ತಿಳಿಸಿದ್ದರು.

 

My channel Carryislive has been hacked, need immediate assistance.

— Ajey Nagar (@CarryMinati)

 

ಸೆಪ್ಟೆಂಬರ್ 2020 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾದ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಮತ್ತು ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ ಕ್ರಿಪ್ಟೋ ದೇಣಿಗೆಗಳನ್ನು ನೀಡುವಂತೆ ಕೇಳಲಾಗಿತ್ತು. ಇನ್ನು  ಡಿಸೆಂಬರ್ 2021 ರಲ್ಲಿ, ಪಿಎಂ ಮೋದಿ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು ಬಿಟ್‌ಕಾಯಿನ್ ಅನ್ನು ಭಾರತದ ಕಾನೂನು ಟೆಂಡರ್ ಆಗಿ ಅಳವಡಿಸಲಾಗಿದೆ ಎಂದು ಟ್ವೀಟ್‌ ಮಾಡಲಾಗಿತ್ತು. 

2021 ರಲ್ಲಿ ಭಾರತದಿಂದ 9.6 ಮಿಲಿಯನ್ ಜನರು ನಕಲಿ ಕ್ರಿಪ್ಟೋ ವೆಬ್‌ಸೈಟ್‌ಗಳು ಭೇಟಿ ನೀಡಿದ್ದಾರೆ ಎಂದು ಚೈನಾಲಿಸಿಸ್ ವರದಿ ತಿಳಿಸಿದೆ. ಕಳೆದ ವರ್ಷ ಹೂಡಿಕೆದಾರರಿಂದ  $7.7 ಶತಕೋಟಿ (ಸುಮಾರು ರೂ. 58,697 ಕೋಟಿ) ಕ್ರಿಪ್ಟೋ ವಂಚನೆಗಳು ನಡೆದಿವೆ  ಎಂದು ಚೈನಾಲಿಸಿಸ್ ವರದಿಯು ಡಿಸೆಂಬರ್‌ನಲ್ಲಿ ಬಹಿರಂಗಪಡಿಸಿದೆ.

click me!