ಮತ್ತೊಂದು ಸುತ್ತಿನ ದರ ಹೆಚ್ಚಳದ ಸುಳಿವು ನೀಡಿದ Vodafone Idea CEO ರವೀಂದರ್ ಟಕ್ಕರ್!

By Suvarna News  |  First Published Jan 25, 2022, 12:37 PM IST

ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಈ ವರ್ಷವೂ ಮೊಬೈಲ್ ಸೇವೆಗಳ ದರಗಳನ್ನು ಹೆಚ್ಚಿಸಬಹುದು ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ


Tech Desk: ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (Vodafone Idea VI)  ಡಿಸೆಂಬರ್ 2021 ರ ಮೂರನೇ ತ್ರೈಮಾಸಿಕಕ್ಕೆ ತನ್ನ ಏಕೀಕೃತ ನಷ್ಟವನ್ನು ರೂ.7,230.9 ಕೋಟಿ ಎಂದು ತಿಳಿಸಿತ್ತು. ಈ ಮಧ್ಯೆ ನಷ್ಟದಲ್ಲಿರುವ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ಈ ವರ್ಷವೂ ಮೊಬೈಲ್ ಸೇವೆಗಳ ದರಗಳನ್ನು ಹೆಚ್ಚಿಸಬಹುದು ಆದರೆ ಕಂಪನಿಯು ನವೆಂಬರ್‌ನಲ್ಲಿ ಮಾಡಿದ ದರ ಹೆಚ್ಚಳಕ್ಕೆ ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಅವಲಂಬಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ ಎಂದು ಗ್ಯಾಜೆಟ್‌ 360 ವರದಿ ಮಾಡಿದೆ. 

"2022 ರಲ್ಲಿ ಮತ್ತೊಂದು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ನಾವು ನಿರೀಕ್ಷಿಸುತ್ತೇವೆ ಆದರೆ ಖಂಡಿತವಾಗಿಯೂ ಒಂದು ಹಂತದಲ್ಲಿ ಬೆಲೆ ಏರಿಕೆ ನಡೆಯುತ್ತದೆ. ಕೊನೆಯ ಬಾರಿ ಬೆಲೆ ಬದಲಾವಣೆ ಸುಮಾರು 2 ವರ್ಷಗಳ ಹಿಂದೆ ನಡೆದಿತ್ತು. ಈಗಾಗಲೇ ಬೆಲೆ ಏರಿಕೆ ಮಾಡಿ ಬಹಳ ಸಮಯವಾಗಿದೆ ಎಂದು ನಾನು ನಂಬುತ್ತೇನೆ. ನಾವು ಖಂಡಿತವಾಗಿಯೂ ಎರಡು ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಬೆಲೆ ಏರಿಕೆಯನ್ನು ನಿರೀಕ್ಷಿಸುತ್ತೇವೆ. ಆದರೆ 2022 ರಲ್ಲಿ ಈ ಬೆಲೆಗಳು ಎಷ್ಟು ಬೇಗನೆ ಬದಲಾಗುತ್ತವೆ ಎಂಬುದನ್ನು ನಾವು ನೋಡಬೇಕಾಗಿದೆ. ಬಹುಶಃ, ಇದು 2023ರಲ್ಲೂ ಆಗುವ ಸಾಧ್ಯತೆ ಇದೆ, " ಎಂದು ಟಕ್ಕರ್ ಹೇಳಿದ್ದಾರೆ.

Tap to resize

Latest Videos

undefined

ವೋಡಾಫೋನ್ ಐಡಿಯಾ ಎಂಡಿ ಮತ್ತು ಸಿಇಒ ರವೀಂದರ್ ಟಕ್ಕರ್ (Ravinder Takkar) ಅವರು Earnings call (ಕಂಪನಿಯು ಹಣಕಾಸಿನ ಫಲಿತಾಂಶಗಳನ್ನು ಚರ್ಚೆ) ಸಮಯದಲ್ಲಿ "ಕಂಪನಿಯ ಒಂದು ತಿಂಗಳ ಅವಧಿಯ 4G ಸೇವೆಗಳನ್ನು ಬಳಸುತ್ತಿರುವವರಿಗೆ  ನಿಗದಿಪಡಿಸಿದ ಕನಿಷ್ಠ ಬೆಲೆ ರೂ.99  ಪ್ಯಾಕ್‌ ದುಬಾರಿ ಬೆಲೆಯಲ್ಲ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Vodafone Idea ಚಂದಾದಾರರ ಸಂಖ್ಯೆ 20 ಮಿಲಿಯನ್ ಕುಸಿತ: Q3 FY22ರಲ್ಲಿ ಕಂಪನಿಗೆ ರೂ.7,231 ಕೋಟಿ ನಷ್ಟ!

ಚಂದಾದರ ಸಂಖ್ಯೆ ಕುಸಿತ: ಕಂಪನಿಯು ದರ  ಹೆಚ್ಚಳದಿಂದಾಗಿ ವೊಡಾಫೋನ್ ಐಡಿಯಾದ ಚಂದಾದಾರರ ಮೂಲವು ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿದ್ದ 26.98 ಕೋಟಿಯಿಂದ 24.72 ಕೋಟಿಗೆ ಕುಸಿದಿದೆ. ದರ ಹೆಚ್ಚಳದ ಹೊರತಾಗಿಯೂ, ARPU 2022ರ ಹಣಕಾಸು ವರ್ಷದ (FY) ಎರಡನೇ ತ್ರೈಮಾಸಿಕ (Q2) ನಲ್ಲಿ ರೂ.109ಗಿಂತ   5.2 ರಷ್ಟು ಏರಿಕೆಯಾಗಿ Rs 115 ಕ್ಕೆ ಸುಧಾರಿಸಿದೆ. Q2, FY'22 ರಲ್ಲಿ ದರ ಬದಲಾವಣೆ ಮಧ್ಯಸ್ಥಿಕೆಗಳಿಂದಾಗಿ ಚಂದಾದಾರರ ಮೂಲವು 247.2 ಮಿಲಿಯನ್ ವಿರುದ್ಧ 253.0 ಮಿಲಿಯನ್‌ಗೆ ಕುಸಿಯಿತು ಎಂದು ಕಂಪನಿ ತಿಳಿಸಿತ್ತು.

ಇದನ್ನೂ ಓದಿ: Vodafone Idea : ಸರ್ಕಾರದ ಪಾಲಿಗೆ ಶೇ. 35.8 ಷೇರು, ಮುಂದೇನಾಗಬಹುದು?

ಸಾಲದ ಸುಳಿಯಲ್ಲಿ ಟೆಲಿಕಾಂ: ಸಾಲದ ಸುಳಿಯಲ್ಲಿ ಸಿಲುಕಿರುವ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ (Vodafone Idea VI)  ಡಿಸೆಂಬರ್ 2021 ರ ಮೂರನೇ ತ್ರೈಮಾಸಿಕಕ್ಕೆ ತನ್ನ ಏಕೀಕೃತ ನಷ್ಟವನ್ನು ರೂ.7,230.9 ಕೋಟಿ ಎಂದು ಶುಕ್ರವಾರ ತಿಳಿಸಿದೆ. ಕಂಪನಿಯು  ಹಿಂದಿನ ವರ್ಷ ಇದೇ ಅವಧಿಯಲ್ಲಿ ರೂ.4,532.1 ಕೋಟಿ  ನಷ್ಟ ಅನುಭವಿತ್ತು. ಕಾರ್ಯಾಚರಣೆಗಳಿಂದ (Operations) ಕ್ರೋಢೀಕೃತ ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ ರೂ.10,894.1 ಕೋಟಿಗಿಂತ ಶೇಕಡಾ 10.8 ರಷ್ಟು ಕುಸಿದು ರೂ.9,717.3 ಕೋಟಿಗೆ ಇಳಿಕೆ ಕಂಡಿದೆ ಎಂದು ಕಂಪನಿ ತಿಳಿಸಿದೆ.

ರೂ. 4,000 ಕೋಟಿ  ಉಳಿತಾಯದ ಗುರಿಯೊಂದಿಗೆ, ವರದಿಯಾದ ತ್ರೈಮಾಸಿಕದ ಅಂತ್ಯದ ವೇಳೆಗೆ ರನ್-ರೇಟ್ ಆಧಾರದ ಮೇಲೆ ಸುಮಾರು 90 ಪ್ರತಿಶತ ವಾರ್ಷಿಕ ಉಳಿತಾಯವನ್ನು ಸಾಧಿಸಿದೆ ಎಂದು VIL ಹೇಳಿದೆ.  ಡಿಸೆಂಬರ್ 31, 2021 ರಂತೆ ಒಟ್ಟು ಸಾಲ, ಲೀಸ್ ಹೊಣೆಗಾರಿಕೆಗಳನ್ನು ಹೊರತುಪಡಿಸಿ ಮತ್ತು ಸಂಚಿತ ಆದರೆ ಬಾಕಿ ಇರುವ ಬಡ್ಡಿ ಸೇರಿದಂತೆ ರೂ. 1,98,980 ಕೋಟಿ ಇದೆ ಎಂದು ವರದಿಯಾಗಿದೆ

click me!