ಮೊಬೈಲ್ ಮಾರುಕಟ್ಟೆಗೆ ಅಗ್ಗ ಬೆಲೆಯಲ್ಲಿ Xiaomiಯಿಂದ ಮತ್ತೊಂದು ಪೋನ್; ಬಿಡುಗಡೆಯಾದ ಕ್ಷಣದಲ್ಲಿ ಸ್ಟಾಕ್ ಕಂಪ್ಲೀಟ್ ಮಾರಾಟ; Xiaomiಯ Redmi Y3 ಫೋನ್ ಬೆಲೆ, ಫೀಚರ್ಸ್, ಮಾರಾಟ ದಿನಾಂಕ ಮತ್ತಿತರ ವಿವರ ಇಲ್ಲಿದೆ...
ಭಾರತೀಯ ಮೊಬೈಲ್ ಬಳಕೆದಾರರ ಮನಗೆದ್ದಿರುವ ಚೀನಾದ ಜನಪ್ರಿಯ Xiaomi ಕಂಪನಿಯು ಇದೀಗ ಹೊಸ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಟ್ಟಿದೆ.
16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದ್ದ Redmi Y1ನ್ನು Xiaomi ಯು 2017 ನವೆಂಬರ್‌ನಲ್ಲಿ ಬಿಡುಗಡೆ ಮಾಡಿತ್ತು. ಅದಾದ 7 ತಿಂಗಳುಗಳ ಬಳಿಕ Redmi Y2ನ್ನು ಹೊರ ತಂದಿತ್ತು. ಇದೀಗ ಅದರ ಮುಂದುವರಿದ ಭಾಗವಾಗಿ, ಹೊಸತಾಗಿ ಅಭಿವೃದ್ಧಿಪಡಿಸಿದ Redmi Y3 ಮೊಬೈಲನ್ನು ಮಾರುಕಟ್ಟೆಗೆ ಪರಿಚಯಿಸಿದೆ.
undefined
ಇದನ್ನೂ ಓದಿ: ಸೈಬರ್ ವಂಚನೆ ಬಗ್ಗೆ ಆನ್‌ಲೈನಲ್ಲೇ ದೂರು: ಕಂಪ್ಲೇಂಟ್ ಸ್ವೀಕಾರ ಹೇಗೆ?
ಮೇಲ್ದರ್ಜೆಗೇರಿಸಿದ ಪರದೆ, ಸೆಲ್ಫಿ ಸ್ನ್ಯಾಪರ್, 32 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಹಾಗೂ ದೊಡ್ಡ ಬ್ಯಾಟರಿ ಈ ಹೊಸ ಫೋನಿನ ವಿಶೇಷತೆ. ಡ್ಯುಯಲ್ ಸಿಮ್, Android 9.0 Pie ಆಪರೇಟಿಂಗ್ ಸಿಸ್ಟಮ್, 6.26 ಇಂಚಿನ HD ಪರದೆ, 19:9 ಆ್ಯಸ್ಪೆಕ್ಟ್ ರೇಶ್ಯೋ, ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 632 ಪ್ರೊಸೆಸರ್, ಮತ್ತು 3GB/ 4GB RAM ಹೊಸ Redmi Y3ಯಲ್ಲಿವೆ.
ಹಿಂಬದಿ 12 ಮತ್ತು 2 ಮೆಗಾ ಪಿಕ್ಸೆಲ್‌ನ ಎರಡು ಕ್ಯಾಮೆರಾಗಳಿದ್ದರೆ, 32 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದೆ. Redmi Y3 ಫೋನ್ 32GB, 64 GB ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಮೈಕ್ರೋ SD ಕಾರ್ಡ್ ಮೂಲಕ 512 GB ವರೆಗೂ ವಿಸ್ತರಿಸಬಹುದಾಗಿದೆ. ಫಿಂಗರ್ ಪ್ರಿಂಟ್ ಸೆನ್ಸರ್ ಫೀಚರ್ ಕೂಡಾ ಈ ಫೋನ್ ಒಳಗೊಂಡಿದ್ದು, 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
3GB ವೇರಿಯಂಟ್ ಫೋನಿನ ಬೆಲೆ ₹9999 ಹಾಗೂ 4GB ವೇರಿಯಂಟ್ ಫೋನಿನ ಬೆಲೆ ₹11999 ಆಗಿದೆ. ಕೆಂಪು, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನ್, ಮಂಗಳವಾರ ನಡೆದ ಮೊದಲ ಅಮೇಜಾನ್ ಮಾರಾಟದಲ್ಲಿ ಬರೇ 12 ಸೆಕೆಂಡ್‌ಗಳಲ್ಲಿ ಸಂಪೂರ್ಣ ಸ್ಟಾಕ್ ಸೋಲ್ಡ್ ಔಟ್ ಆಗಿದೆ. ಆದರೆ ಎಷ್ಟು ಯೂನಿಟ್ ಗಳು ಮಾರಾಟವಾಗಿವೆ ಎಂಬ ಬಗ್ಗೆ ಕಂಪನಿ ಮಾಹಿತಿ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: ಅತಿ ಹೆಚ್ಚು ಹ್ಯಾಕ್ ಆದ 20 ಪಾಸ್‌ವರ್ಡ್‌ಗಳು: ತಪ್ಪಿಯೂ ಇದನ್ನು ಬಳಸಬೇಡಿ
ಮುಂದಿನ ಮಾರಾಟ ಅಮೆಜಾನ್‌ನಲ್ಲಿ ಮೇ 3ಕ್ಕೆ ನಿಗದಿಯಾಗಿದ್ದು, ಕೇವಲ ಪ್ರೈಮ್ ಮೆಂಬರ್‌ಶಿಪ್ ಇರುವವರಿಗೆ ಮಾತ್ರ ಸೀಮಿತವಾಗಿದೆ. ಇತರ ಖರೀದಿದಾರರಿಗೆ ಮೇ 4 ರಿಂದ 7ರ ವರೆಗೆ ಈ ಫೋನ್ ಖರೀದಿಸುವ ಅವಕಾಶ ಇದೆ.