ಮತ್ತೆ 100 ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬ್ಯಾನ್! ನಿಮ್ಮ ಫೋನಲ್ಲೂ ಇದೆಯಾ?

By Web Desk  |  First Published Apr 30, 2019, 8:42 PM IST

ಬಳಕೆದಾರರ ಮಾಹಿತಿ ಹಾಗೂ ಸೈಬರ್ ಸುರಕ್ಷತೆ ದೃಷ್ಟಿಯಿಂದ ಗೂಗಲ್ ಅಗ್ಗಾಗೆ ತನ್ನ ಪ್ಲೇ ಸ್ಟೋರ್‌ನಿಂದ ನಿಯಮಗಳನ್ನು ಉಲ್ಲಂಘಿಸುವ ಆ್ಯಪ್‌ಗಳನ್ನು ತೆಗೆದು ಹಾಕುತ್ತದೆ. ಈಗ ಒಂದೇ ಕಂಪನಿಯ ಸುಮಾರು 100 ಆ್ಯಪ್‌ಗಳನ್ನು ಡಿಲೀಟ್ ಮಾಡಲು ಮುಂದಾಗಿದೆ.


ಸೈಬರ್ ದಾಳಿ, ಮಾಹಿತಿ ಕಳ್ಳತನದ ಹಿನ್ನೆಲೆಯಲ್ಲಿ ಸುಮಾರು 100 ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲು ಗೂಗಲ್ ಮುಂದಾಗಿದೆ. ವಿಶೇಷವೆಂದರೆ ಈ ಎಲ್ಲಾ ಆ್ಯಪ್‌ಗಳು ಚೀನಾದ ಒಂದೇ ಕಂಪನಿಯಿಂದ ಸಿದ್ಧಪಡಿಸಲಾಗಿದೆ. 

DO Global ಎಂಬ ಕಂಪನಿಯ ಆ 100 ಆ್ಯಪ್‌ಗಳು ವಿಶ್ವದಾದ್ಯಂತ ಸುಮಾರು 600 ಮಿಲಿಯನ್ ಫೋನ್‌ಗಳಲ್ಲಿ ಇನ್ಸ್ಟಾಲ್ ಆಗಿದೆ. ಈ ಕಂಪನಿಯು 2018ರವರೆಗೆ ಚೀನಾದ ಸರ್ಚ್ ಇಂಜಿನ್ Baidu ಕಂಪನಿಯ ಸಹ ಸಂಸ್ಥೆಯಾಗಿತ್ತು. ಈಗ ಬೇರ್ಪಟ್ಟಿವೆಯಾದರೂ Baidu, ಈ ಕಂಪನಿಯಲ್ಲಿ 34 ಶೇ. ಪಾಲನ್ನು ಹೊಂದಿದೆ. 

Latest Videos

undefined

ಇದನ್ನೂ ಓದಿ: ALERT: ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....

ಈ ನೂರು ಆ್ಯಪ್‌ಗಳ ಪೈಕಿ 46ನ್ನು ಈಗಾಗಲೇ ಪ್ಲೇಸ್ಟೋರ್‌ನಿಂದ ಅಳಿಸಿ ಹಾಕಲಾಗಿದೆ. ಬಾಕಿ ಉಳಿದವುಗಳನ್ನು ತೆಗೆದು ಹಾಕುವ ಕೆಲಸ ಮುಂದುವರಿದಿದೆ ಎಂದು ವರದಿಯಾಗಿದೆ.

ಸಂಶಯಾಸ್ಪದ ಕಾರ್ಯಾಚರಣೆ, ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ಇಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂಬುವುದು ಪ್ಲೇ ಸ್ಟೋರ್ ಅಧಿಕಾರಿಗಳ ಖಡಕ್ ಮಾತು.

ಮೇಲೆ ಹೇಳಲಾದ ಕಂಪನಿಯ ಜಾಹೀರಾತುಗಳನ್ನು ಕೂಡಾ ಗೂಗಲ್ ಪ್ಲಾಟ್ ಫಾರ್ಮಿನಿಂದ ತೆಗೆದು ಹಾಕಲಾಗುವುದು ಎಂದು ಹೇಳಲಾಗಿದೆ. ತಾವು 250 ಮಿಲಿಯನ್‌ಗೂ ಅಧಿಕ ಸಕ್ರಿಯ ಬಳಕೆದಾರರು, 800 ಮಿಲಿಯನ್  ಇನ್ಸ್ಟಾಲೇಶನ್‌ಗಳನ್ನು ಹೊಂದಿದ್ದೇವೆ ಎಂದು ಆ ಕಂಪನಿಯು ಹೇಳಿಕೊಂಡಿದೆ.     

ಇದನ್ನೂ ಓದಿ: ಎಚ್ಚರ...ಪ್ಲೇಸ್ಟೋರ್‌ನಲ್ಲಿ ನಕಲಿ Appಗಳು! ಗುರುತಿಸುವುದು ಹೀಗೆ!

ಗಲ್ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆ್ಯಪನ್ನು ನಿಷೇಧಿಸಿರುವುದು ಇದೇ ಮೊದಲ ಬಾರಿ.  ಈ ಹಿಂದೆಯೂ ಬೇರೆ ಬೇರೆ ಕಾರಣದಿಂದ ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ಹಲವಾರು ಆ್ಯಪ್‌ಗಳನ್ನು ಅಳಿಸಿ ಹಾಕಿದೆ.

click me!