ಸ್ವಿಚ್ ಆನ್ ಮಾಡುವ ವೇಳೆ ಸುಟ್ಟು ಕರಕಲಾದ ರೆಡ್ ಮಿ ಮೊಬೈಲ್

By Kannadaprabha News  |  First Published May 1, 2019, 12:57 PM IST

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಮಾಡುವಾಗ ಇದ್ದಕ್ಕಿಂದ್ದಂತೆ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. 


ಬಾಗಲಕೋಟೆ :  ಸ್ವಿಚ್ ಆನ್ ಮಾಡುವ ವೇಳೆ ಮೊಬೈಲ್ ನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಬಗಲಕೋಟೆಯಲ್ಲಿ ನಡೆದಿದೆ. 

ಬಾಗಲಕೋಟೆಯ ಕಿಲ್ಲಾ ಗಲ್ಲಿ ಪ್ರದೇಶದ ರಾಘವೇಂದ್ರ ಕುಲಕರ್ಣಿ ಎಂಬುವವರಿಗೆ ಸೇರಿದ ರೆಡ್ ಮಿ ಕಂಪನಿಯ ಮೊಬೈಲಲ್ಲಿ ಬೆಂಕಿ ಕಂಡು ಬಂದಿದ್ದು, ಇದ್ದಕ್ಕಿದ್ದಂತೆ ಮೊಬೈಲ್ ಸುಟ್ಟು ಕರಕಲಾಗಿದೆ. 

Tap to resize

Latest Videos

ಸ್ವಿಚ್ ಆಫ್ ಆಗಿದ್ದ ಮೊಬೈಲ್ ಆನ್ ಮಾಡುವಾಗ ಬೆಂಕಿ ಕಂಡು ಬಂದು ಸಂಪೂರ್ಣ ಕರಕಲಾಘಿದೆ. ಅದೃಷ್ಟವಶಾತ್ ಈ  ಘಟನೆಯಲ್ಲಿ ಯಾವುದೇ ರೀತಿ ಹಾನಿಯಾಗಿಲ್ಲ. 

ಈ ಹಿಂದೆಯೂ ಕೂಡ ರೆಡ್ ಮಿ ಕಂಪನಿಯ ಹಲವು ಮೊಬೈಲ್ ಸ್ಫೋಟ ಪ್ರಕಣಗಳು ವರದಿಯಾಗಿದ್ದವು.

click me!