ಹುಚ್ಚೆಬ್ಬಿಸಿದೆ 64MP ಕ್ಯಾಮೆರಾದ ಹೊಸ ಪೋನ್; ಒಂದೇ ದಿನದಲ್ಲಿ ಒಂದು ಮಿಲಿಯನ್ ಬುಕಿಂಗ್!

By Web Desk  |  First Published Aug 24, 2019, 7:44 PM IST

ಕೈಗೆಟಕುವ, ಉತ್ತಮ ಕ್ಯಾಮೆರಾ ಕ್ವಾಲಿಟಿ ಹೊಂದಿರುವ ಮೊಬೈಲ್ ಫೋನ್‌ಗಳಿಗೆ ಶ್ಯೋಮಿ ಹೆಸರುವಾಸಿ. ಹಾಗಾಗಿ ಅದು ಬಿಡುಗಡೆ ಮಾಡುವ ಮೊಬೈಲ್‌ಗಳಿಗೆ ಭಾರೀ ಪ್ರತಿಕ್ರಿಯೆ ಸಿಗುತ್ತದೆ. ಶ್ಯೋಮಿಯ 2 ಹೊಸ ಫೋನ್‌ ಬಿಡುಗಡೆಗೆ ಸಿದ್ಧವಾಗಿದ್ದು, ಆಗಾಗಲೇ ಮೊಬೈಲ್ ಪ್ರಿಯರ ನಿದ್ದೆಗೆಡಿಸಿದೆ.


ಶ್ಯೋಮಿ ಮೊಬೈಲ್ ಫೋನ್‌ಗಳೇ ಹಾಗೇ... ಉತ್ತಮ ಕ್ವಾಲಿಟಿ ಜೊತೆ ಕೈಗೆಟಕುವ ಬೆಲೆಗೆ ಶ್ರೀಸಾಮಾನ್ಯ ಸುಲಭವಾಗಿ ಮಾರು ಹೋಗುತ್ತಾನೆ. ತನ್ನ ಹೊಸ ಮೊಬೈಲ್ ಬಗ್ಗೆ ಶ್ಯೋಮಿ ಪ್ರಕಟಿಸಿದ್ದೇ ತಡ, ಜನ ಪ್ರೀ ರಿಜಿಸ್ಟ್ರೇಶನ್‌ಗಾಗಿ ಮುಗಿ ಬಿದ್ದಿದ್ದಾರೆ.

Redmi Note 8 ಸೀರಿಸ್ ಗಾಗಿ ಚೀನಾದಲ್ಲಿ ಪ್ರೀ ರಿಜಿಸ್ಟ್ರೇಶನ್ ಆರಂಭವಾಗಿದೆ. ಒಂದೇ ದಿನದಲ್ಲಿ ಸುಮಾರು 10 ಲಕ್ಷ ಮಂದಿ ನೋಂದಾಯಿಸಿಕೊಂಡಿದ್ದಾರೆ ಎಂದು ಶ್ಯೋಮಿ ಹೇಳಿದೆ.

Tap to resize

Latest Videos

undefined

ಶ್ಯೋಮಿ ವೆಬ್‌ಸೈಟ್‌ನಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಒಟ್ಟು 1.51 ಮಿಲಿಯನ್ ಮಂದಿ ಫೋನ್‌ಗೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ | ಇದು ಬಡವರ ಬಾದಾಮಿ ‘ಸ್ಮಾರ್ಟ್‌ಫೋನ್‌’! ಕಡಿಮೆ ಕಾಸಿಗೆ ಲಕ್ಷುರಿ ಫೋನು

Redmi Note 8 ಮತ್ತು Redmi Note 8 Pro ಎಂಬ ಎರಡು ನಮೂನೆಯ ಫೋನ್‌ಗಳು ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಆ. 29ರಂದು ಮಾರುಕಟ್ಟೆಗೆ ಬರಲಿವೆ.

Redmi Note 8 ಫೋನ್ Redmi Note 7ರ  ಅಡ್ವಾನ್ಸ್ಡ್ ವರ್ಶನ್ ಆಗಿದ್ದರೆ,  Redmi Note 8 Pro 4 ಕ್ಯಾಮೆರಾಗಳನ್ನು ಹೊಂದಿದೆ. 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದರ ಪ್ರಮುಖ ವಿಶೇಷತೆ. 4500 mAh ಸಾಮರ್ಥ್ಯದ ಬ್ಯಾಟರಿ, 18W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಇನ್ನಿತರ ಪ್ರಮುಖ ಫೀಚರ್‌ಗಳು.

ಶ್ಯೋಮಿ ಫೋನ್‌ಗಳಿಗೆ ಇಂತಹ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿರುವುದು ಇದೇ ಮೊದಲೇನಲ್ಲ. ರೆಡ್‌ಮಿ 7 ಫೋನ್‌ಗಳು ವಿಶ್ವದಾದ್ಯಂತ 20 ಮಿಲಿಯನ್ ಯೂನಿಟ್‌ಗಳು ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿತ್ತು.

ಚೀನಾದಲ್ಲಿ ಬಿಡುಗಡೆಯಾದ ಬಳಿಕ ಭಾರತಕ್ಕೆ ಈ ಫೋನ್‌ಗಳು ಕಾಲಿಡಲಿವೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

click me!