ಭಾರತದ ಟೆಲಿಕಾಂ ಜಗತ್ತಿನ ದೈತ್ಯ ಕಂಪನಿಗಳಾಗಿರುವ ಏರ್‌ಟೈಲ್ ಮತ್ತು ರಿಲಯನ್ಸ್ ಜಿಯೋ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಬೆಲೆ ಏರಿಕೆ ಮಾಡಿದ್ದ ಮುಕೇಶ್ ಅಂಬಾನಿ ರಣತಂತ್ರದಲ್ಲಿ ಏರ್‌ಟೈಲ್ ಸಿಲುಕಿದೆಯಾ?
ನವದೆಹಲಿ: ಭಾರತದ ಟೆಲಿಕಾಂ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ಹೊಸ ಹೊಸ ಯೋಜನೆಗಳನ್ನು ಪರಿಚಯಿಸುವ ಕೆಲಸ ಮಾಡುತ್ತಿವೆ. ಜುಲೈ ಆರಂಭದಿಂದಲೇ ಜಿಯೋ ಮತ್ತು ಏರ್‌ಟೈಲ್ ತನ್ನ ರೀಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿಕೊಂಡಿವೆ. ಜಿಯೋ ಬೆನ್ನಲ್ಲೇ ಇತರೆ ಟೆಲಿಕಾಂ ಕಂಪನಿಗಳು ತಮ್ಮ ಟ್ಯಾರಿಫ್ ಪ್ಲಾನ್‌ನಲ್ಲಿ ಬದಲಾವಣೆಯನ್ನು ತಂದಿವೆ. ಇತರೆ ಕಂಪನಿಗಳು ಬೆಲೆ ಏರಿಕೆ ಮಾಡಿದ ಬೆನ್ನಲ್ಲೇ ಜಿಯೋ ತನ್ನ ಬಳಕೆದಾರರಿಗೆ ರಿಯಾಯ್ತಿ ದರದಲ್ಲಿ ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸುತ್ತಿದೆ. ಈ ಮೂಲಕ ತನ್ನ ಗ್ರಾಹಕರನ್ನು ತನ್ನಲ್ಲಿಯೇ ಉಳಿಸಿಕೊಳ್ಳುವುದರ ಜೊತೆಯಲ್ಲಿ ಹೊಸ ಬಳಕೆದಾರರನ್ನು ಸೆಳೆಯುತ್ತಿದೆ.
ಜಿಯೋ ಮತ್ತು ಏರ್‌ಟೆಲ್ ಎರಡೂ ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಗಳಾಗಿವೆ. ಇದೀಗ ಏರ್‌ಟೈಲ್ ಮತ್ತು ಜಿಯೋ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು, ಎರಡೂ ಕಂಪನಿಗಳು 249 ರೂ. ಪ್ಲಾನ್ ಪರಿಚಯಿಸಿವೆ. ಬೆಲೆ ಒಂದಾಗಿದ್ದರೂ ರೀಚಾರ್ಜ್ ಪ್ಲಾನ್ ಲಾಭಗಳು ಭಿನ್ನವಾಗಿವೆ. ಜಿಯೋ ಬಳಕೆದಾರರ ಸಂಖ್ಯೆ 48 ಕೋಟಿಯಾಗಿದ್ರೆ, 38 ಕೋಟಿ ಬಳಕೆದಾರರನ್ನು ಏರ್‌ಟೆಲ್ ಹೊಂದಿದೆ. ಇದೀಗ ಎರಡೂ ಕಂಪನಿಗಳು 249 ರೂಪಾಯಿ ರೀಚಾರ್ಜ್ ಪ್ಲಾನ್ ನೀಡುತ್ತಿವೆ. ಈ ಪ್ಲಾನ್ ಒಂದೇ ಆಗಿದ್ದು, 1GB ದೈನಂದಿನ ಡೇಟಾ, ಅನಿಯಮಿತ ಕರೆ ಮತ್ತು 100 SMS ಅನ್ನು ನೀಡುತ್ತವೆ.
undefined
ಏನು ವ್ಯತ್ಯಾಸ?
ಜಿಯೋ ಸಿಮ್ ಬಳಕೆದಾರರು 249 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ವ್ಯಾಲಿಡಿಟಿ 28 ದಿನಗಳಾಗಿದೆ. ಆದ್ರೆ ಏರ್‌ಟೆಲ್ 249 ರೂಪಾಯಿ ರೀಚಾರ್ಜ್ ವ್ಯಾಲಿಡಿಟಿ 24 ದಿನಗಳಾಗಿದೆ. ಅಂದ್ರೆ ಜಿಯೋ ಬಳಕೆದಾರರಿಗೆ ಹೆಚ್ಚುವರಿಯಾಗಿ ನಾಲ್ಕು ದಿನದ ಜೊತೆಯಲ್ಲಿ 400 ಎಸ್‌ಎಂಎಸ್, 4 ಜಿಬಿ ಡೇಟಾ ಸಿಗುತ್ತದೆ. ಹಾಗಾಗಿ ಜಿಯೋ ಉತ್ತಮ ಎಂದು ಬಳಕೆದಾರರು ಭಾವಿಸಬಹುದು. ವ್ಯತ್ಯಾಸ ಚಿಕ್ಕದಾದರೂ ಇದರ ಪರಿಣಾಮ ದೊಡ್ಡಮಟ್ಟದಲ್ಲಿ ಆಗುತ್ತೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಣೆ ಮಾಡುತ್ತಾರೆ.
ಅಂಬಾನಿ ತಂತ್ರದಲ್ಲಿ ಸಿಲುಕಿತಾ ಏರ್‌ಟೈಲ್?
ಜಿಯೋ ಬೆಲೆ ಏರಿಕೆ ಬೆನ್ನಲ್ಲೇ ಮಧ್ಯಮ ವರ್ಗ ಸ್ನೇಹಿ ಪ್ಲಾನ್‌ಗಳನ್ನು ಘೋಷಣೆ ಮಾಡುತ್ತಿದೆ. ಇತ್ತ ತನ್ನ ಎಲ್ಲಾ ಪ್ಲಾನ್‌ಗಳನ್ನು ಬದಲಾವಣೆ ಮಾಡಿಕೊಂಡಿರುವ ಏರ್‌ಟೆಲ್ ಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ. ಮುಕೇಶ್ ಅಂಬಾನಿ ರಚಿಸಿದ ರಣವ್ಯೂಹದಲ್ಲಿ ಏರ್‌ಟೆಲ್ ಸಿಲುಕಿದೆಯಾ ಎಂಬ ಚರ್ಚೆಗಳು ಮಾರುಕಟ್ಟೆಯಲ್ಲಿ ಆರಂಭಗೊಂಡಿವೆ. ದೀರ್ಘಕಾಲದ ಅಂದ್ರೆ ಹೆಚ್ಚು ವ್ಯಾಲಿಡಿಟಿ ಇರೋ ಪ್ಲಾನ್‌ಗಳನ್ನು ಮಧ್ಯಮ ವರ್ಗದ ಜನರು ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗಾಗಿಯೇ ಸ್ಪರ್ಧಿ ಏರ್‌ಟೆಲ್ ಗಿಂತ ಜಿಯೋ ತನ್ನ ವ್ಯಾಲಿಡಿಟಿಯನ್ನು ಹೆಚ್ಚಳ ಮಾಡಿಕೊಂಡಿದೆ ಎನ್ನಲಾಗಿದೆ.
ಜಿಯೋದಿಂದ ಸೂಪರ್ ಪ್ಲಾನ್ - ಜಸ್ಟ್ 175 ರೂಪಾಯಿಗೆ ಡೇಟಾ ಜೊತೆ 12 OTT ಪ್ಲಾಟ್‌ಫಾರಂಗೆ ಎಂಟ್ರಿ
ರಿಲಯನ್ಸ್ ಜಿಯೋ - Reliance Jio Rs 249 Plan
ರಿಲಯನ್ಸ್ ಜಿಯೋ ನೀಡಿರುವ 249 ರೂಪಾಯಿಯ ರೀಚಾರ್ಜ್ ಪ್ಲಾನ್ 28 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕಾಲ್, ಪ್ರತಿದಿನ 100 ಎಸ್‌ಎಂಎಸ್ ಮತ್ತು 1 ಜಿಬಿ ಡೇಟಾ ಸಿಗುತ್ತದ. ಆ ದಿನದ ಡೇಟಾ ಕೊನೆಯಾಗುತ್ತಿದ್ದಂತೆ ಇಂಟರ್‌ನೆಟ್ ಸ್ಪೀಡ್ 64Kbps ಆಗುತ್ತದೆ. ಜಿಯೋ ಟಿವಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೋಡಬಹುದಾಗಿದೆ.
ಏರ್‌ಟೈಲ್ - Airtel Rs 249 Plan
249 ರೂಪಾಯಿಯ ಏರ್‌ಟೈಲ್ ರೀಚಾರ್ಜ್ ಪ್ಲಾನ್ 24 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1 ಜಿಬಿ ಡೇಟಾ ಸಿಗಲಿದ್ದು, ಒಟ್ಟು 24 ಜಿಬಿ ಡೇಟಾ ಲಭ್ಯವಾಗುತ್ತದೆ. ಇದರೊಂದಿಗೆ Wynk Musicನ ಫ್ರೀ ಸಬ್‌ಸ್ಕ್ರಿಪ್ಷನ್ ಗ್ರಾಹಕರಿಗೆ ಸಿಗುತ್ತದೆ.