
ನಮ್ಮ ಮೊಬೈಲ್ ನಂಬರ್ ಸರಿಯಾಗಿ 10 ನಂಬರ್‌ಗಳು ಮಾತ್ರ ಇರುತ್ತವೆ. ಈ ರೀತಿ 10 ನಂಬರ್‌ಗಳೇ ಇರಬೇಕು ಎಂದು ಯಾರು ನಿರ್ಧಾರ ಮಾಡುತ್ತಾರೆ? ಹತ್ತು ಅಂಕಿಗಳು ಮಾತ್ರ ಯಾಕೆ ಇರುತ್ತದೆ? ಇದರ ಹಿಂದಿನ ಭಾರೀ ಗಣಿತ ಲೆಕ್ಕಾಚಾರಗಳು ಹೇಗಿದೆ? ನಮ್ಮ ದೇಶದ ಜನಸಂಖ್ಯೆ ಇದಕ್ಕೆ ಹೇಗೆ ಕಾರಣವಾಗುತ್ತದೆ.
ನಾವು ಪ್ರತಿದಿನ ಹಲವು ಮಂದಿಗೆ ಫೋನ್ ಮಾಡುತ್ತೇವೆ. ಫೋನ್ ನಂಬರ್ ಒಂದು ನಂಬರ್ ಕಡಿಮೆಯಾದರೂ, ಕರೆ ಕನೆಕ್ಟ್ ಆಗೋದಿಲ್ಲ. ನಂಬರ್ ತಪ್ಪಾಗಿದೆ ಎಂದು ತೋರಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಮೊಬೈಲ್ ನಂಬರ್ 08 ಅಥವಾ 09 ಅಂಕಿಗಳು ಅಲ್ಲದೇ, 10 ಅಂಕಿಗಳು ಮಾತ್ರ ಯಾಕೆ? ಇದರ ನಿರ್ಣಯ ಯಾರು ಮಾಡಿದ್ದಾರೆ ಗೊತ್ತಾ? ಇದು ಸಾಮಾನ್ಯವಾಗಿ ತೆಗೆದುಕೊಂಡ ನಿರ್ಧಾರ ಅಲ್ಲ? ಇದರ ಹಿಂದೆ ಗಣಿತದ ಭಾರೀ ಲೆಕ್ಕಾಚಾರಗಳು ಇರುತ್ತವೆ. ನಮ್ಮ ದೇಶದ ಜನರ ಸಂಖ್ಯೆ ಅಗತ್ಯಗಳನ್ನು, ಸ್ಪಷ್ಟವಾದ ಟೆಲಿಕಾಂ ಯೋಜನೆಗಳಿದೆ.
ಸಾಮಾನ್ಯವಾಗಿ ಯಾವುದೇ ದೇಶದ ಆದರೂ ತಮ್ಮ ಜನಸಂಖ್ಯೆಯ ಪ್ರಮಾಣ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಫೋನ್ ನಂಬರ್ ಉದ್ದವನ್ನು ನಿರ್ಣಯಿಸಲಾಗುತ್ತದೆ. ಇದರ ಹಿಂದಿನ ಪ್ರಮುಖ ಲೆಕ್ಕಾಚಾರಗಳನ್ನು ಗಮನಿಸಿದರೆ, 10 ಅಂಕಿಗಳ ನಂಬರ್ ವಿಧಾನದ ಮೂಲಕ ಗರಿಷ್ಠ 1,000 ಕೋಟಿ ವಿಭಿನ್ನ ಕಾಂಬಿನೇಷನ್ ನಂಬರ್‌ಗಳನ್ನು ರೂಪಿಸುವ ಅವಕಾಶ ಇರುತ್ತದೆ. ಒಂದು ವೇಳೆ ಭಾರತದಲ್ಲಿ 09 ಅಂಕಿಗಳ ನಂಬರ್ ಇದ್ದರೆ, ಕೇವಲ 100 ಕೋಟಿ ನಂಬರ್ ಮಾತ್ರವೇ ಸಾಧ್ಯವಾಗುತ್ತದೆ. ನಮ್ಮ ದೇಶದ ಜನಸಂಖ್ಯೆ 140 ಕೋಟಿ ದಾಟಿ ಮುನ್ನಡೆದಿರುವುದೇ ಅಲ್ಲದೇ, ಹಲವರು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಈ ಕಾರಣದಿಂದ ಕೇವಲ 09 ಅಂಕಿಗಳ ವಿಧಾನ ಸಾಕಾಗುವುದಿಲ್ಲ. ಅಲ್ಲದೇ, 11 ಅಂಕಿಗಳು ಇಟ್ಟರೆ, 10,000 ಕೋಟಿ ವಿಭಿನ್ನ ನಂಬರ್‌ಗಳನ್ನು ರೂಪಿಸಬಹುದು. ಸದ್ಯಕ್ಕೆ ಇದು ಅಗತ್ಯವಿಲ್ಲ. ಆದ್ದರಿಂದಲೇ 10 ಅಂಕಿಗಳ ವಿಧಾನವನ್ನು ಆಯ್ಕೆ ಮಾಡಿಕೊಂಡಿದೆ.
10 ಅಂಕಿಗಳ ಮೊಬೈಲ್ ನಂಬರ್ ಕೇವಲ ಒಂದು ಗುರುತಿನ ಸಂಖ್ಯೆ ಮಾತ್ರ ಅಲ್ಲ, ನೆಟ್‌ವರ್ಕ್ ವ್ಯವಸ್ಥೆಗೆ ಸಂಬಂಧಿಸಿದ ಒಂದು ವಿಳಾಸವಾಗಿ ಇರಲಿದೆ. ಇದರಲ್ಲಿ ಮೊದಲ 4 ಅಥವಾ 5 ಅಂಕಿಗಳು ಟೆಲಿಕಾಂ ಸರ್ಕಿಲ್ (ರಾಜ್ಯ/ಪ್ರದೇಶ), ಆಪರೇಟರ್ (ಜಿಯೋ, ಏರ್‌ಟೆಲ್ ಸೇರಿದಂತೆ ಹಲವು ಸಂಸ್ಥೆಗಳಿದೆ), ಉಳಿದ 5 ಅಥವಾ 6 ಅಂಕಿಗಳು ಸಿಮ್ ಬಳಕೆ ಮಾಡುವ ವ್ಯಕ್ತಿಯ ಗುರಿತನ ಸಂಖ್ಯೆಯಾಗಿ ಬಳಕೆ ಮಾಡಲಾಗುತ್ತದೆ.
1990ರ ಅವಧಿಯಲ್ಲಿ ನಮ್ಮ ದೇಶದಲ್ಲಿ ಲ್ಯಾಂಡ್ ಲೈನ್ ನಂಬರ್ 6 ರಿಂದ 7 ಅಂಕಿಗಳು ಮಾತ್ರವೇ ಇದೆ. ಆದರೆ 2000 ಇಸವಿಗೆ ಬಂದ ಬಳಿಕ ದೇಶದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿತ್ತು. ಬಳಕೆದಾರರ ಸಂಖ್ಯೆ ಭಾರೀ ಪ್ರಯಾಣದಲ್ಲಿ ಹೆಚ್ಚಾದ ಕಾರಣ ಹಳೆಯ ವಿಧಾನ ಸಾಕಾಗುವುದಿಲ್ಲ. ಇದರಿಂದ ಭಾರತದ ಟೆಲಿಕಾಂ ನಿಯಂತ್ರಣ ಸಂಸ್ಥೆ (ಟ್ರಾಯ್) 'ನೇಷನಲ್ ನಂಬರಿಂಗ್ ಪ್ಲ್ಯಾನ್ 2003'ರ ಅನ್ವಯ ದೇಶದಾದ್ಯಂತ 10 ಅಂಕಿಗಳ ಮೊಬೈಲ್ ನಂಬರ್ ವಿಧಾನವನ್ನು ಅಧಿಕೃತವಾಗಿ ಜಾರಿಗೆ ಬಂತು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.