ಜು.16ಕ್ಕೆ ಭಾಗಶಃ ಚಂದ್ರಗ್ರಹಣ ಕಣ್ತುಂಬಿಕೊಳ್ಳುವ ಅವಕಾಶ

By Web Desk  |  First Published Jun 26, 2019, 6:51 PM IST

ಇದೇ ಜು.16ರಂದು ಭಾಗಶಃ ಚಂದ್ರಗ್ರಹಣ| ಒಟ್ಟು 3 ಗಂಟೆಗಳ ಅವಧಿಯ ಚಂದ್ರಗ್ರಹಣ| ಚಂದ್ರಗ್ರಹಣದ ಸುಂದರ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ| ಜು.16ರ ರಾತ್ರಿ ಸುಮಾರು 9-30ಕ್ಕೆ ಚಂದ್ರಗ್ರಹಣ ಪ್ರಾರಂಭ| ಉತ್ತರ ಅಮೆರಿಕ ಹೊರತುಪಡಿಸಿ ಪ್ರಪಂಚದ ಉಳಿದೆಲ್ಲಾ ಭಾಗದಲ್ಲಿ ಗೋಚರ|


ಬೆಂಗಳೂರು(ಜೂ.26): ಇದೇ ಜು.16ರಂದು ಭಾಗಶಃ ಚಂದ್ರಗ್ರಹಣ ಸಂಭವಿಸಲಿದ್ದು, ಒಟ್ಟು 3 ಗಂಟೆಗಳ ಅವಧಿಯ ಚಂದ್ರಗ್ರಹಣದ ಸುಂದರ ದೃಶ್ಯವನ್ನು ಭಾರತೀಯರು ಕಣ್ತುಂಬಿಕೊಳ್ಳಬಹುದಾಗಿದೆ.

ಜು.16ರ ರಾತ್ರಿ ಸುಮಾರು 9-30ಕ್ಕೆ ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬರುವುದರಿಂದ, ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ . ಜು.17ರ ಮಧ್ಯರಾತ್ರಿ 3-01ಕ್ಕೆ ಭಾಗಶಃ ಚಂದ್ರಗ್ರಹಣ ಮುಕ್ತಾಯಗೊಳ್ಳಲಿದೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ.

Latest Videos

ಇದಕ್ಕೂ ಮೊದಲು ಜು.02ರಂದು ಸೂರ್ಯಗ್ರಹಣ ಸಂಭವಿಸಲಿದ್ದು, ಭಾರತದಲ್ಲಿ ಇದನ್ನು ನೋಡಲು ಸಾಧ್ಯವಿಲ್ಲ ಎನ್ನಲಾಗಿದೆ.  ಆದರೆ ಭಾಗಶಃ ಚಂದ್ರಗ್ರಹಣ ಉತ್ತರ ಅಮೆರಿಕ ಹೊರತುಪಡಿಸಿ ಪ್ರಪಂಚದ ಉಳಿದೆಲ್ಲಾ ಭಾಗದಲ್ಲಿ ಸ್ಪಷ್ಟವಾಗಿ ಗೋಚರವಾಗಲಿದೆ.
 

click me!