ವಾಟ್ಸಪ್ ಫೀಚರ್‌ನಲ್ಲಿ ಮಹತ್ವದ ಬದಲಾವಣೆ; 2 ಹೊಸ ಸೌಲಭ್ಯಗಳು

By Web DeskFirst Published Mar 26, 2019, 12:49 PM IST
Highlights

2009ರಲ್ಲಿ ಆರಂಭವಾದ ವಾಟ್ಸಪ್, ಕಳೆದ 10 ವರ್ಷಗಳಲ್ಲಿ ಜಗತ್ತಿನಾದ್ಯಂತ 1.5 ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಅವುಗಳ ಪೈಕಿ ಭಾರತದಲ್ಲಿ ಅತೀ ಹೆಚ್ಚು, ಅಂದರೆ 200 ಮಿಲಿಯನ್ ಬಳಕೆದಾರರಿದ್ದಾರೆ. ಬಳಕೆದಾರರ ಸೌಲಭ್ಯಕ್ಕಾಗಿ ವಾಟ್ಸಪ್ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಾ ಬಂದಿದೆ. 

ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶಗಳಲ್ಲಿ ಸುಳ್ಳು ಸುದ್ದಿಗಳನ್ನು ನಿಯಂತ್ರಿಸುವುದು ಸೋಶಿಯಲ್ ಮೀಡಿಯಾ ಕಂಪನಿಗಳ ಎದುರಿಗಿರುವ ದೊಡ್ಡ ಸವಾಲಾಗಿದೆ. ಸೋಶಿಯಲ್ ಮೀಡಿಯಾ ಕಂಪನಿಗಳು ಈ ನಿಟ್ಟಿನಲ್ಲಿ ಆದ್ಯತೆ ಮೇರೆಗೆ ಕೆಲಸ ಮಾಡುತ್ತಿವೆ. ಹಾಗಾಗಿ ಹೊಸ ಹೊಸ ಫೀಚರ್ ಗಳನ್ನು ಜಾರಿಗೊಳಿಸಲು ಕಾರ್ಯಮಗ್ನವಾಗಿವೆ.

ಜನಪ್ರಿಯ ಮೆಸೇಜಿಂಗ್ ತಾಣ ವಾಟ್ಸಪ್ ಇದೀಗ ಹೊಸ ಫೀಚರ್ ತರಲು ಮುಂದಾಗಿದೆ.  ಕಳೆದ ವರ್ಷ ‘ಫಾರ್ವರ್ಡೆಡ್’ ಎಂಬ ಲೇಬಲ್ ಪರಿಚಯಿಸಿದ್ದ, ವಾಟ್ಸಪ್ ಫಾರ್ವರ್ಡ್ ಮೆಸೇಜ್ ಗಳಿಗೆ ಹೊಸ ಸ್ವರೂಪ ನೀಡಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: 1 ಕೋಟಿ ಸೋಶಿಯಲ್ ಮೀಡಿಯಾ ಖಾತೆಗಳ ಮೇಲೆ ಕಣ್ಣು; ಯಾಮಾರಿದ್ರೆ ಕಥೆ ಅಷ್ಟೇ!

ವಾಟ್ಸಪ್ ಇನ್ಮುಂದೆ ಫಾರ್ವರ್ಡ್ ಮೆಸೇಜ್ ಗಳನ್ನು 2 ರೀತಿಯಲ್ಲಿ ಗುರುತಿಸಲಿದೆ. ಒಂದು ಫಾರ್ವರ್ಡೆಡ್ ಇನ್ಫೋ [Forwarded Info] ,  ಇನ್ನೊಂದು ಫ್ರೀಕ್ವೆಂಟ್ಲಿ ಫಾರ್ವರ್ಡೆಡ್ [Frequently Forwarded -ಸತತವಾಗಿ ಫಾರ್ವರ್ಡ್ ಮಾಡಲಾದ] ಎಂಬ ಲೇಬಲ್ ಕಾಣಿಸಿಕೊಳ್ಳಲಿದೆ.    

ಫಾರ್ವರ್ಡೆಡ್ ಇನ್ಫೋ:
ಈ ಫೀಚರ್ ಮೂಲಕ ಬಳಕೆದಾರರಿಗೆ ತಾವು ಕಳುಹಿಸಿದ ಸಂದೇಶ ಎಷ್ಟು ಬಾರಿ ಫಾರ್ವರ್ಡ್ ಮಾಡಲಾಗಿದೆ ಎಂಬ ಮಾಹಿತಿಯನ್ನು ಒದಗಿಸಲಿದೆ. ಆದರೆ ಇದು ಸೆಂಟ್ [ಕಳುಹಿಸಿದ] ಸಂದೇಶಗಳಿಗೆ ಮಾತ್ರ ಅನ್ವಯವಾಗುತ್ತದೆ.  ಸ್ವೀಕರಿಸಿದ ಸಂದೇಶವನ್ನು ಬೇರೆಯವರಿಗೆ ಫಾರ್ವರ್ಡ್ ಮಾಡಿದರೆ, ಅದರ ಮಾಹಿತಿ ಕೂಡಾ ತಿಳಿದುಕೊಳ್ಳಬಹುದಾಗಿದೆ.

ಫ್ರೀಕ್ವೆಂಟ್ಲಿ ಫಾರ್ವರ್ಡೆಡ್:
ಯಾವುದೇ ಸಂದೇಶವು ನಾಲ್ಕಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್ ಆದಲ್ಲಿ,   ಫ್ರೀಕ್ವೆಂಟ್ಲಿ ಫಾರ್ವರ್ಡೆಡ್ ಎಂಬ ಲೇಬಲ್ ಕಾಣಿಸಿಕೊಳ್ಳಲಿದೆ.  ಆ ಮೂಲಕ ಜನಪ್ರಿಯ ಮೆಸೇಜ್ ಯಾವುದೆಂದು ಬಳಕೆದಾರರು ತಿಳಿಯಬಹುದು.

ಇದನ್ನೂ ಓದಿ: Whatsapp ಗ್ರೂಪ್ ಅಡ್ಮಿನ್ ಗಳೇ ಇತ್ತ ಗಮನಿಸಿ... ಸ್ವಲ್ಪ ಯಾಮಾರಿದ್ರೂ ದಂಡ, ಜೈಲು ಗ್ಯಾರಂಟಿ!

click me!