
ನವದೆಹಲಿ: ಜನಪ್ರಿಯ ಮೊಬೈಲ್ ಸಾಮಾಜಿಕ ಮಾಧ್ಯಮವಾದ ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಗ್ರೂಪ್ ಕಾಲಿಂಗ್ (ಸಮೂಹ ಸಂಭಾಷಣೆ) ವ್ಯವಸ್ಥೆ ಕಲ್ಪಿಸಲಾಗಿದೆ. ಐಫೋನ್ ಹಾಗೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಈ ಸೌಲಭ್ಯ ಲಭಿಸಲಿದೆ.
ಒಂದೇ ಸಲಕ್ಕೆ 4 ಜನರು ವಿಡಿಯೋ ಹಾಗೂ ಆಡಿಯೋ ಕಾಲಿಂಗ್ ನಲ್ಲಿ ಸಂಭಾಷಣೆ ನಡೆಸುವ ವ್ಯವಸ್ಥೆಯನ್ನು ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್ ಸಂಸ್ಥೆ ತನ್ನ ಗ್ರಾಹಕರಿಗೆ ಕಲ್ಪಿಸಿದೆ. ಗ್ರೂಪ್ ಕಾಲ್ ಮಾಡಲು ಚಂದಾದಾರರು ಮಾಡಬೇಕಾಗಿದ್ದಿಷ್ಟೇ. ವಿಡಿಯೋ ಕಾಲ್ ಆಪ್ಷನ್‌ಗೆ ಹೋಗಿ ಬಲಭಾಗದ ಮೂಲೆಯಲ್ಲಿರುವ ‘ಆ್ಯಡ್ ಪಾರ್ಟಿಸಿಪಂಟ್’ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಗ ಗರಿಷ್ಠ 4 ಜನರು ಗ್ರೂಪ್ ಕಾಲಿಂಗ್ ನಡೆಸಬಹುದಾಗಿದೆ. ‘ಈ ಸಂಭಾಷಣೆಗಳು ಗೌಪ್ಯವಾಗಿ ಇರಲಿದ್ದು, ಯಾವುದೇ ಸೋರಿಕೆಯ ಪ್ರಶ್ನೆ ಇರದು. ಐಫೋನ್ ಹಾಗೂ ಹಾಗೂ ಆ್ಯಂಡ್ರಾಯ್ಡ್ ವರ್ಷನ್‌ಗಳಲ್ಲಿ ಇದು ಲಭ್ಯವಿರಲಿದೆ’ ಎಂದು ವಾಟ್ಸಾಪ್ ಹೇಳಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.