ಹೇಗಿದೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಮೋಟೋ E5 ಸ್ಮಾರ್ಟ್ ಫೋನ್?

 |  First Published Jul 19, 2018, 4:49 PM IST
  • 14 ಗಂಟೆಗಳವರೆಗೆ ಸಿನಿಮಾ ವೀಕ್ಷಣೆ ಅವಕಾಶ, 13 ಎಂಪಿ ಕ್ಯಾಮರಾ!
  •  200+ ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅಥವಾ 20+ ಗಂಟೆಗಳ ತಡೆರಹಿತ ವೆಬ್ ಸರ್ಫಿಂಗ್!

ವಿಡಿಯೋ ಮತ್ತು ಗೇಮ್ ಪ್ರಿಯರಿಗಾಗಿ ದೀರ್ಘ ಬಾಳಿಕೆಯ ಬ್ಯಾಟರಿ ಸಾಮರ್ಥ್ಯದ ಫೋನ್‌ಗಳನ್ನು ಮೋಟರೋಲಾ ಮಾರುಕಟ್ಟೆಗೆ ತಂದಿದೆ. ಮೋಟೊ E5 ಮತ್ತು E5 ಪ್ಲಸ್ ಮೊಬೈಲ್‌ಗಳು ತಮ್ಮ ಸರಣಿಯಲ್ಲೇ ಅತಿ ಹೆಚ್ಚು ಅಂದರೆ 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿವೆ.

ದೊಡ್ಡ ಸ್ಕ್ರೀನ್ (6 ಇಂಜು), ರಿಫ್ಲೆಕ್ಟಿವ್ ವೇವ್ ಪ್ಯಾಟ್ರನ್ ಹೊಂದಿದ್ದು, 18 ಗಂಟೆಗಳ ವಿಡಿಯೋ ಪ್ಲೇ ಬ್ಯಾಕ್, 200+ ಗಂಟೆಗಳ ಮ್ಯೂಸಿಕ್ ಪ್ಲೇ ಬ್ಯಾಕ್ ಅಥವಾ 20+ ಗಂಟೆಗಳ ತಡೆರಹಿತ ವೆಬ್ ಸರ್ಫಿಂಗ್ ಸೇವೆ ಪಡೆಯಬಹುದಾಗಿದೆ.

Tap to resize

Latest Videos

ವಿಶೇಷಗಳು:
12 ಎಂಪಿ ಕ್ಯಾಮರಾ, 1.25 ಯುಎಂ ಪಿಕ್ಸೆಲ್ ಗಳೊಂದಿಗೆ ಲೇಸರ್ ಆಟೊಫೋಕಸ್
ಫಿಂಗರ್‌ಪ್ರಿಂಟ್ ರೀಡರ್ ಮೇಲೆ ಒಂದು ಸ್ಪರ್ಶದ ಮೂಲಕ ಕೂಡಲೇ ಅನ್‌ಲಾಕ್ ಮಾಡಬಹುದು.

ಬೆಲೆ ಮತ್ತು ಲಭ್ಯತೆ:
ಮೊಟೊ E5 ಪ್ಲಸ್ ವಿಶೇಷವಾಗಿ ಅಮೆಜಾನ್‌ನಲ್ಲಿ ಮತ್ತು 600+ ಮೊಟೊ ಹಬ್ ಸ್ಟೋರ್‌ಗಳಲ್ಲಿ ದೇಶಾದ್ಯಂತ ಲಭ್ಯ. ಎರಡು ಬಣ್ಣದ ಮಾದರಿಗಳು (ಫೈನ್ ಗೋಲ್ಡ್ ಮತ್ತು ಬ್ಲಾಕ್) ಬೆಲೆ ₹11999
ಮೊಟೊ E5 ಹೊಸ ಮೊಟೊ E5 ಮೊಬೈಲ್ 5.7 ಮ್ಯಾಕ್ಸ್ ವಿಷನ್ ಡಿಸ್‌ಪ್ಲೇ, 4000 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. 
14 ಗಂಟೆಗಳವರೆಗೆ ಸಿನಿಮಾ ವೀಕ್ಷಣೆ ಅವಕಾಶ, 13 ಎಂಪಿ ಕ್ಯಾಮರಾ ಇದೆ.

ಬೆಲೆ ₹9999 

ಇದನ್ನೂ ಓದಿ: ಇನ್‌ಫಿನಿಕ್ಸ್‌ನಿಂದ ಹಾಟ್ ಪ್ರೋ; ಹೇಗಿದೆ? ಬೆಲೆ ಎಷ್ಟು?

click me!