ಡಾರ್ಕ್‌ಮೋಡ್ ಫೀಚರ್‌ ಪರಿಚಯಿಸಿದ ವಾಟ್ಸಾಪ್‌!

Published : Mar 05, 2020, 09:47 AM ISTUpdated : Mar 05, 2020, 05:09 PM IST
ಡಾರ್ಕ್‌ಮೋಡ್ ಫೀಚರ್‌ ಪರಿಚಯಿಸಿದ ವಾಟ್ಸಾಪ್‌!

ಸಾರಾಂಶ

ಡಾರ್ಕ್ಮೋಡ್‌ ಫೀಚರ್‌ ಪರಿಚಯಿಸಿದ ವಾಟ್ಸಾಪ್‌| ಅಪ್‌ಡೇಟ್‌ ಸಿಗದಿದ್ದರೆ, ಸೆಟ್ಟಿಂಗ್‌ ಬದಲಾಯಿಸಿಕೊಳ್ಳಿ

ನವದೆಹಲಿ: ಜನಪ್ರಿಯ ಸಂದೇಶ ವಿನಿಮಯ ಆ್ಯಪ್‌ ವಾಟ್ಸಾಪ್‌ ಬಹುನಿರೀಕ್ಷಿತ ಡಾರ್ಕ್ಮೋಡ್‌ ಅನ್ನು ಸಾರ್ವಜನಿಕರಿಗೆ ಪರಿಚಯಿಸಿದೆ. ಆ್ಯಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ವಾಟ್ಸಾಪ್‌ ಅನ್ನು ಅಪ್‌ಡೇಟ್‌ ಮಾಡಿದರೆ ಹೊಸ ಫೀಚರ್‌ ಲಭ್ಯವಾಗಲಿದೆ. ಒಂದು ವೇಳೆ ಈ ಅಪ್‌ಡೇಟ್‌ ಲಭ್ಯವಾಗದೇ ಇದ್ದಲ್ಲಿ ಫೋನ್‌ನ ಸೆಟ್ಟಿಂಗ್ಸ್‌ನಲ್ಲಿ ಡಾರ್ಕ್ಮೋಡ್‌ ಅನ್ನು ಆನ್‌ ಮಾಡಿಕೊಳ್ಳುವ ಮೂಲಕವೂ ವಾಟ್ಸಾಪ್‌ ಹೊಸ ಅಪ್‌ಡೇಟ್‌ ಪಡೆದುಕೊಳ್ಳಬಹುದಾಗಿದೆ. ಆದರೆ ಭಾರತೀಯ ಬಳಕೆದಾರರಿಗೆ ಇನ್ನೂ ಈ ಸೌಲಭ್ಯ ಲಭ್ಯವಾಗಿಲ್ಲ

ಡಾರ್ಕ್ಮೋಡ್‌ನಲ್ಲಿ ಹಿಂಬದಿ ಪರದೆ ಪೂರ್ಣವಾಗಿ ಕಪ್ಪುಬಣ್ಣದಲ್ಲಿ ಇರದೆ, ಗಾಢ ಬೂದುಬಣ್ಣದಲ್ಲಿದ್ದು, ಅಕ್ಷಯ ಬಿಳಿಯ ಬಣ್ಣದಲ್ಲಿ ಕಾಣಸಿಗಲಿದೆ.

ಡಾರ್ಕ್ ಮೋಡ್‌ ಏಕೆ?

ಡಾರ್ಕ್ಮೋಡ್‌ನಲ್ಲಿ ಕಡಿಮೆ ಪ್ರಮಾಣದ ಬೆಳಕು ಮೊಬೈಲ್‌ನಿಂದ ಬಿಡುಗಡೆ ಆಗುವ ಕಾರಣ, ಸಂದೇಶಗಳನ್ನು ಓದುವಾಗ ಕಣ್ಣುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದೆ. ಜೊತೆಗೆ ರಾತ್ರಿಯ ವೇಳೆ ಸಂದೇಶಗಳು ಬಂದಾಗ ನಿಮ್ಮ ಫೋನ್‌ನಿಂದ ಬೆಳಕು ಬಂದು ಇತರಿರಿಗೆ ತೊಂದರೆ ಆಗುವ ಪ್ರಮೇಯವನ್ನು ತಪ್ಪಿಸಬಹುದಾಗಿದೆ. ಅಲ್ಲದೇ ಸಂದೇಶವನ್ನು ಸುಲಭವಾಗಿ ಓದುವುದಕ್ಕೂ ಸಹಾಯವಾಗಲಿದೆ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ChatGPT ಅಥವಾ Grok ಜೊತೆಗೆ ಈ 10 ರಹಸ್ಯವಾದ ಸಂಗತಿಗಳನ್ನು ಎಂದಿಗೂ ಹಂಚಿಕೊಳ್ಳಬೇಡಿ!
ಸೊಗಸಾದ ಬಜೆಟ್‌ ಫ್ರೆಂಡ್ಲಿ ಸ್ಮಾರ್ಟ್‌ಫೋನು ಬೇಕಾ? ಇಲ್ಲಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ17 5ಜಿ!