8000 ಕೋಟಿ ಕಟ್ಟಿದ ಟೆಲಿಕಾಂ ಕಂಪನಿಗಳು!

By Kannadaprabha News  |  First Published Mar 4, 2020, 1:23 PM IST

8000 ಕೋಟಿ ಕಟ್ಟಿದ ಟೆಲಿಕಾಂ ಕಂಪನಿಗಳು|  ವೊಡಾಪೋನ್‌- ಐಡಿಯಾ 3043 ಕೋಟಿ ರು., ಭಾರ್ತಿ ಏರ್‌ಟೆಲ್‌ 1950 ಕೋಟಿ ರು., ರಿಲಯನ್ಸ್‌ ಜಿಯೋ 1053 ಕೋಟಿ ರು. ಮತ್ತು ಟಾಟಾ ಟೆಲಿ ಸವೀರ್‍ಸಸ್‌ 2000 ಕೋಟಿ ರು


ನವದೆಹಲಿ[ಫೆ.04]: ಖಾಸಗಿ ವಲಯದ ನಾಲ್ಕು ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತಾವು ಪಾವತಿಸಬೇಕಿದ್ದ ಸ್ಪೆಕ್ಟ್ರಂ ಶುಲ್ಕದ ಪೈಕಿ 8000 ಕೋಟಿ ರು. ಬಾಕಿಯನ್ನು ಮಂಗಳವಾರ ಪಾವತಿ ಮಾಡಿವೆ.

ವೊಡಾಪೋನ್‌- ಐಡಿಯಾ 3043 ಕೋಟಿ ರು., ಭಾರ್ತಿ ಏರ್‌ಟೆಲ್‌ 1950 ಕೋಟಿ ರು., ರಿಲಯನ್ಸ್‌ ಜಿಯೋ 1053 ಕೋಟಿ ರು. ಮತ್ತು ಟಾಟಾ ಟೆಲಿ ಸವೀರ್‍ಸಸ್‌ 2000 ಕೋಟಿ ರು. ಪಾವತಿಸಿವೆ. ಸ್ಪೆಕ್ಟ್ರಂ ಶುಲ್ಕವನ್ನು ಹಂತಹಂತವಾಗಿ ಮಾಡಲು ಕೇಂದ್ರ ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಅವಕಾಶ ನೀಡಿತ್ತು.

Latest Videos

ಆ ಪೈಕಿ ಮಂಗಳವಾರ ಪಾವತಿ ಮಾಡಿದ್ದು ಕಡೆಯ ಕಂತಾಗಿದೆ. ಇದು ಎಜಿಆರ್‌ (ಆದಾಯ ಹಂಚಿಕೆ ಪಾಲು) ಶುಲ್ಕಕ್ಕೆ ಹೊರತಾದ ಮೊತ್ತವಾಗಿದೆ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!