ಟ್ರಾಯ್‌ಗೂ ಬಗ್ಗದ ಚಾನೆಲ್‌ಗಳು: ಮಾ.1 ರಿಂದ ದರ ಇಳಿಕೆ ಆಗಲಿಲ್ಲ

Kannadaprabha News   | Asianet News
Published : Mar 03, 2020, 02:11 PM IST
ಟ್ರಾಯ್‌ಗೂ ಬಗ್ಗದ ಚಾನೆಲ್‌ಗಳು:  ಮಾ.1 ರಿಂದ ದರ ಇಳಿಕೆ ಆಗಲಿಲ್ಲ

ಸಾರಾಂಶ

ಮಾ.1 ರಿಂದ ಜಾರಿಗೆ ಬರುವಂತೆ ಎಲ್ಲಾ ಕೇಬಲ್‌ ಟೀವಿ ಮತ್ತು ಡಿಟಿಎಚ್‌ ಸಂಸ್ಥೆಗಳು ತಮ್ಮ ಎನ್‌ಸಿಎಫ್‌ (ನೆಟ್‌ವರ್ಕ್ ಕೆಪಾಸಿಟಿ ಫೀ) ಕಡಿಮೆ ಮಾಡಬೇಕು ಮತ್ತು ಚಾನೆಲ್‌ಗಳು ದರ ಇಳಿಕೆ ಮಾಡಬೇಕೆಂಬ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಟ್ರಾಯ್‌ನ ಆದೇಶ ಭಾಗಶಃ ಮಾತ್ರ ಜಾರಿಯಾಗಿದೆ.

ನವದೆಹಲಿ (ಮಾ. 03): ಮಾ.1 ರಿಂದ ಜಾರಿಗೆ ಬರುವಂತೆ ಎಲ್ಲಾ ಕೇಬಲ್‌ ಟೀವಿ ಮತ್ತು ಡಿಟಿಎಚ್‌ ಸಂಸ್ಥೆಗಳು ತಮ್ಮ ಎನ್‌ಸಿಎಫ್‌ (ನೆಟ್‌ವರ್ಕ್ ಕೆಪಾಸಿಟಿ ಫೀ) ಕಡಿಮೆ ಮಾಡಬೇಕು ಮತ್ತು ಚಾನೆಲ್‌ಗಳು ದರ ಇಳಿಕೆ ಮಾಡಬೇಕೆಂಬ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರ ಟ್ರಾಯ್‌ನ ಆದೇಶ ಭಾಗಶಃ ಮಾತ್ರ ಜಾರಿಯಾಗಿದೆ.

ಕೆಲ ಡಿಟಿಎಚ್‌ ಮತ್ತು ಕೇಬಲ್‌ ಸಂಸ್ಥೆಗಳು ಮಾ.1ರಿಂದ ಜಾರಿಗೆ ಬರುವಂತೆ ಈ ಹಿಂದಿನ ಮಾಸಿಕ 153 (ಕನಿಷ್ಠ 130 ರು. ಮತ್ತು ಜಿಎಸ್‌ಟಿ) ರು.ಗೆ 100 ಚಾನೆಲ್‌ ಬದಲಾಗಿ 200 ಚಾನೆಲ್‌ಗಳನ್ನು ನೀಡುವ ಸೌಲಭ್ಯ ಆರಂಭಿಸಿವೆ. ಜೊತೆಗೆ ಹೆಚ್ಚುವರಿ ಚಾನೆಲ್‌ಗಳಿಗೆ ವಿಧಿಸುತ್ತಿದ್ದ ಸ್ಲಾ್ಯಬ್‌ ಶುಲ್ಕವನ್ನೂ ತೆಗೆದುಹಾಕಿವೆ. ಹೀಗಾಗಿ 100 ಉಚಿತ ಚಾನೆಲ್‌ಗಳ ಬಳಿಕ ಪ್ರತಿ 20 ಚಾನೆಲ್‌ಗಳಿಗೆ 25 ರು.ನಂತೆ ಹೆಚ್ಚುವರಿ ಸ್ಲಾ್ಯಬ್‌ ಶುಲ್ಕದ ಹೊರೆ ಗ್ರಾಹಕರಿಗೆ ಕಡಿಮೆಯಾಗಿದೆ.

ಜಿಯೋ ಗ್ರಾಹಕರಿಗೆ ಮತ್ತಷ್ಟು ಸ್ಪೀಡ್ ನೆಟ್..!

ಆದರೆ ಒಂದು ಚಾನೆಲ್‌ಗೆ ಗರಿಷ್ಠ 12 ರು. ಮಾತ್ರ ವಿಧಿಸಬಹುದು ಎಂಬುದು ಸೇರಿದಂತೆ ಚಾನೆಲ್‌ಗಳ ಮೇಲೆ ಹೇರಿದ್ದ ದರ ಇಳಿಕೆ ಸೂಚನೆಯನ್ನು ಈವರೆಗೆ ಯಾವುದೇ ಚಾನೆಲ್‌ಗಳು ಪಾಲಿಸಿಲ್ಲ. ಹೀಗಾಗಿ ಗ್ರಾಹಕರು ಈಗಲೇ ಹಿಂದಿನಂತೆಗೇ ತಮ್ಮ ನೆಚ್ಚಿನ ಚಾನೆಲ್‌ಗಳಿಗೆ ಗರಿಷ್ಠ 19 ರು.ಮತ್ತು ಜಿಎಸ್‌ಟಿ ಸೇರಿ 22 ರು.ವರೆಗೆ ಪಾವತಿಸುವಂತಾಗಿದೆ. ಹೀಗಾಗಿ ನಿಯಮ ಪಾಲಿಸದ ಚಾನೆಲ್‌ಗಳಿಗೆ ಟ್ರಾಯ್‌ ದಂಡ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಐಟಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಆ್ಯಂಥ್ರೋಪಿಕ್‌ ಸಿಟಿಒ ಕನ್ನಡಿಗ ರಾಹುಲ್ ಪಾಟೀಲ್
Epstein Filesನಲ್ಲಿ ರಾಹುಲ್​ ಗಾಂಧಿ ಹೆಸರು, ವಿಡಿಯೋ: ಹಲ್​ಚಲ್​ ಸೃಷ್ಟಿಸ್ತಿರೋ ಇದರ ಅಸಲಿಯತ್ತೇನು?