ನೀವಿನ್ನು ವಾಟ್ಸಾಪ್ ಮೂಲಕವೂ ಹಣ ಕಳಿಸಬಹುದು : ಭಾರತದಲ್ಲಿ ಆರಂಭವಾಗುತ್ತಿದೆ ಹೊಸ ಸೇವೆ..!

By Suvarna Web DeskFirst Published Feb 9, 2018, 1:41 PM IST
Highlights

ಶೀಘ್ರದಲ್ಲೇ ಭಾರತದಲ್ಲಿ ವಾಟ್ಸಾಪ್ ತನ್ನ ನೂತನ ಸೇವೆಯೊಂದನ್ನು ಆರಂಭ ಮಾಡುತ್ತಿದೆ. ದೇಶದಲ್ಲಿ ಇನ್ನುಮುಂದೆ ನೀವು ವಾಟ್ಸಾಪ್ ಮೂಲಕವೇ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.

ನವದೆಹಲಿ : ಶೀಘ್ರದಲ್ಲೇ ಭಾರತದಲ್ಲಿ ವಾಟ್ಸಾಪ್ ತನ್ನ ನೂತನ ಸೇವೆಯೊಂದನ್ನು ಆರಂಭ ಮಾಡುತ್ತಿದೆ. ದೇಶದಲ್ಲಿ ಇನ್ನುಮುಂದೆ ನೀವು ವಾಟ್ಸಾಪ್ ಮೂಲಕವೇ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ.

ಪೇಮೆಂಟ್ ಲಿಂಕ್ ಆಯ್ಕೆ ಮಾಡಿಕೊಂಡು ಗ್ರಾಹಕರು ಯುಪಿಐ ಅಕೌಂಟ್ ಮೂಲಕ ಹಣವನ್ನು ಕಳಿಸಬಹುದು. ಯುಪಿಐ ಅಕೌಂಟ್ ಇಲ್ಲದವರು ಗೂಗಲ್ ಪ್ಲೇಸ್ಟೋರ್’ನಲ್ಲಿ ಡೌನ್’ಲೋಡ್ ಮಾಡಿಕೊಂಡು ಅಥವಾ ಬ್ಯಾಂಕ್ ವೆಬ್ ಸೈಟ್ ಮೂಲಕ  ವಾಟ್ಸಾಪ್’ನಲ್ಲಿ ಹಣವನ್ನು ವರ್ಗಾವಣೆ ಮಾಡಲು ಅವಕಾಶವನ್ನು ನೀಡಲಾಗುತ್ತದೆ.

ಐಒಎಸ್ ಹಾಗೂ ಆಂಡ್ರಾಯ್ಡ್ ಮೊಬೈಲ್’ಗಳಲ್ಲಿ ವಾಟ್ಸಾಪ್ ಬಳಕೆ ಮಾಡುವವರು ತಮ್ಮ ವಾಟ್ಸಾಪ್ ಮೂಲಕವೇ ಹಣವನ್ನು ವರ್ಗಾವಣೆ ಮಾಡಬಹುದಾದ ಅವಕಾಶ ನೀಡಲಾಗುತ್ತಿದೆ.  ಈ ಮೂಲಕ ವಾಟ್ಸಾಪ್ ಪೇಟಿಎಂ ಹಾಗೂ ಫೋನ್ ಪೇ, ಗೂಗಲ್ ಟೆಜ್, ಮೊಬಿಕ್ವಿಕ್’ಗಳಿಗೆ ಸ್ಪರ್ಧೆ ಒಡ್ಡಲು ಸಜ್ಜಾಗಿದೆ.

ವಾಟ್ಸಾಪ್ ಗ್ರಾಹಕರನ್ನೇ ಪ್ರಮುಖವಾಗಿರಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಸೇವೆಗಳನ್ನು ನೀಡುತ್ತಿದ್ದು, ಸದ್ಯ 200 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ಮೂಲಕ ಹಣದ ವರ್ಗಾವಣೆಗೆ ಅವಕಾಶ  ನೀಡುವುದು ಅತ್ಯಂತ ಅಗತ್ಯವಾದ ಸೇವೆಯಾಗಿದೆ ಎಂದು ಚಿಂತಕರು ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕವಾಗಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಭಾರತದಲ್ಲಿ ತನ್ನ ಬಳಕೆದಾರರಿಗಾಗಿ ವಾಟ್ಸಾಪ್ ಬ್ಯುಸಿನೆಸ್ ಆರಂಭಿಸಲು ನಿರ್ಧರಿಸಿತ್ತು. ಇದೀಗ ಅದರಂತೆ ಪೇಮೆಂಟ್ ವ್ಯವಸ್ಥೆಯನ್ನು ಜಾರಿ ತರಲು ಕೂಡ ತೀರ್ಮಾನ ಮಾಡಿದೆ.

click me!