ಫೇಸ್‌ಬುಕ್‌ನಿಂದ ಸುರಕ್ಷೆಯ ಸಲಹೆ: ಅಶ್ಲೀಲ ವಿಷಯ ಸೇರಿದಂತೆ ಹಲವು ಮಾಹಿತಿ

By Suvarna Web DeskFirst Published Feb 8, 2018, 4:19 PM IST
Highlights

ಇದರಿಂದ ಮುಂದಿನ ದಿನಗಳಲ್ಲಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಇನ್ನಷ್ಟು ಸುರಕ್ಷೆಯ ಖಾತರಿ ನೀಡಿದಂತಾಗಿದೆ. ಫೇಸ್‌ಬುಕ್‌ನ ಈ ಹೊಸ ನೀತಿಯಿಂದ ಮುಂದೆ ಚಿಕ್ಕ ಮಕ್ಕಳು ಅಶ್ಲೀಲವಾದ ಚಿತ್ರಗಳನ್ನು ನೋಡುವುದು ತಕ್ಕಮಟ್ಟಿಗೆ ಕಡಿಮೆಯಾಗಬಹುದು.

ಫೆ. 6 ‘ಸುರಕ್ಷಾ ಇಂಟರ್‌ನೆಟ್ ದಿನ’ ಇದರ ಅಂಗವಾಗಿ ಫೇಸ್'ಬುಕ್ ತನ್ನ ಬಳಕೆದಾರರಿಗೆ ಆನ್'ಲೈನ್ ಸುರಕ್ಷತೆಯ ಬಗ್ಗೆ ಪಾಠ ಮಾಡಿದೆ. ವಿಶೇಷವಾಗಿ ಮಕ್ಕಳನ್ನು ಕೇಂದ್ರವಾಗಿರಿಸಿಕೊಂಡು ಸಲಹೆ ನೀಡಿರುವ ಫೇಸ್‌ಬುಕ್ ‘ಪೋಷಕರು ಮಕ್ಕಳ ಬಗ್ಗೆ ಹೆಚ್ಚು ನಿಗಾ ಇಡಬೇಕು. ಯಾವ ರೀತಿಯ ವಿಚಾರಗಳನ್ನು ಮಕ್ಕಳು ಆನ್‌ಲೈನ್‌ನಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ನಾವು ಎಲ್ಲಾ ವರ್ಗಕ್ಕೂ ಅಗತ್ಯವಾದ ಸುರಕ್ಷಾ ಇಂಟರ್‌ನೆಟ್ ಸೇವೆ ನೀಡಲು ಸದಾ ಮುಂದಾಗಿದ್ದೇವೆ.
ಮುಂದಿನ ದಿನಗಳಲ್ಲಿ ಮಕ್ಕಳನ್ನೇ ಮುಖ್ಯವಾಗಿಟ್ಟುಕೊಂಡು ವಿವಿಧ ಟೂಲ್ಸ್‌ಗಳನ್ನು ಪರಿಚಯಿಸುತ್ತಿದ್ದೇವೆ. ಇದರಿಂದ ಮಕ್ಕಳ ಮೇಲೆ ನಿಗಾ ಇಡಲು ಇನ್ನಷ್ಟು ಅನುಕೂಲವಾಗುತ್ತದೆ’ ಎಂದು ಹೇಳಿಕೊಂಡಿದೆ. ಇದರಿಂದ ಮುಂದಿನ ದಿನಗಳಲ್ಲಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಇನ್ನಷ್ಟು ಸುರಕ್ಷೆಯ ಖಾತರಿ ನೀಡಿದಂತಾಗಿದೆ. ಫೇಸ್‌ಬುಕ್‌ನ ಈ ಹೊಸ ನೀತಿಯಿಂದ ಮುಂದೆ ಚಿಕ್ಕ ಮಕ್ಕಳು ಅಶ್ಲೀಲವಾದ ಚಿತ್ರಗಳನ್ನು ನೋಡುವುದು ತಕ್ಕಮಟ್ಟಿಗೆ ಕಡಿಮೆಯಾಗಬಹುದು. ಅದೂ ಅಲ್ಲದೇ 14 ವರ್ಷಗಳು ಭ್ರಮದಲ್ಲಿರುವ ಫೇಸ್‌ಬುಕ್ ರಂಭದಿಂದಲೂ ಬಳಕೆದಾರರ ಅನುಕೂಲಕ್ಕಾಗಿ ಹಲವಾರು ಪ್ರಯೋಗಗಳನ್ನು ಮಾಡುತ್ತಲೇ ಬಂದಿದೆ. ಇಂದು ಸಾಕಷ್ಟು ಸುಧಾರಣೆ ಕಂಡಿರುವ ಇದು ಮುಂದಿನ ದಿನಗಳಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲೂ ಹೆಜ್ಜೆಗಳನ್ನು ಇಡಲಿದೆ ಎನ್ನುವುದು ಈ ಮೂಲಕ ಗೊತ್ತಾಗಿದೆ.

click me!