ವಾಟ್ಸಪ್ ಹೊಸ ಸೇವೆಗೆ ಶೀಘ್ರದಲ್ಲೇ ಭಾರತದಲ್ಲಿ ಗ್ರೀನ್ ಸಿಗ್ನಲ್?

Published : Jul 22, 2019, 08:30 PM IST
ವಾಟ್ಸಪ್ ಹೊಸ ಸೇವೆಗೆ ಶೀಘ್ರದಲ್ಲೇ ಭಾರತದಲ್ಲಿ ಗ್ರೀನ್ ಸಿಗ್ನಲ್?

ಸಾರಾಂಶ

ಫೆಬ್ರವರಿ 2018ರಲ್ಲಿ ಪರೀಕ್ಷಾರ್ಥವಾಗಿ ಆರಂಭಿಸಲಾಗಿದ್ದ ವಾಟ್ಸಪ್ ಪೇ ಇನ್ನೂ ಪರೀಕ್ಷೆಯ ಹಂತದಲ್ಲಿದೆ. ರಿಸರ್ವ್ ಬ್ಯಾಂಕ್ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ವಾಟ್ಸಪ್ ಪೇ

ಬಳಕೆದಾರರ ಅನುಕೂಲ ಹಾಗೂ ಅವಶ್ಯಕತೆಗೆ ತಕ್ಕಂತೆ ವಾಟ್ಸಪ್ ಹೊಸ ಸೌಲಭ್ಯವನ್ನು ನೀಡುತ್ತಾ ಬಂದಿದೆ.  ಟೆಕ್ಸ್ಟ್ ಸಂದೇಶದಿಂದ ಆರಂಭವಾದ ಈ ಸೇವೆ ಹಣಪಾವತಿಯವರೆಗೂ ಬಂದು ನಿಂತಿದೆ.

ವಾಟ್ಸಪ್ ಭಾರತದಲ್ಲಿ ತನ್ನ ‘ವಾಟ್ಸಪ್ ಪೇ’ ಪಾವತಿ ಸೇವೆಯನ್ನು ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸುತ್ತಿದ್ದು, ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಮತಿ ಸಿಕ್ಕಿಲ್ಲ. National Payment Corporation of India (NPCI)ವು ಕಠಿಣ ನಿಯಮಗಳು ರೂಪಿಸಿರುವ ಹಿನ್ನೆಲೆಯಲ್ಲಿ, ಅಂತಿಮ  ಆವೃತ್ತಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ | ಇನ್ನೊಂದು ಟೆನ್ಶನ್ ಕಮ್ಮಿ! ಬರ್ತಿದೆ WhatsApp ಹೊಸ ಫೀಚರ್

ಕಳೆದ ವರ್ಷ ಫೆಬ್ರವರಿಯಲ್ಲೇ ಬೀಟಾ ವರ್ಶನ್ ಬಿಡುಗಡೆಯಾಗಿದ್ದರೂ, ಸುಮಾರು 1 ಮಿಲಿಯನ್ ಬಳಕೆದಾರರು ಪರೀಕ್ಷಾರ್ಥವಾಗಿ ಬಳಸಿದ್ದಾರೆ.  ರಿಸರ್ವ್ ಬ್ಯಾಂಕ್ ನಿಯಮಾವಳಿಗಳು ಸಂಪೂರ್ಣವಾಗಿ ಪಾಲನೆಯಾಗುವವರೆಗೆ ಅನುಮತಿಗಾಗಿ ಕಾಯಬೇಕಾಗಿದೆ.

ಈ ನಿಟ್ಟಿನಲ್ಲಿ ಬೇಕಾಗಿರುವ ಅಗತ್ಯ ದಾಖಲೆಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವಾಟ್ಸಪ್ ಕಂಪನಿಯು ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ.  

ಒಂದು ಅಂದಾಜಿನ ಪ್ರಕಾರ ಫೇಸ್ಬುಕ್ ಒಡೆತನದ ವಾಟ್ಸಪ್ ಭಾರತದಲ್ಲಿ ಸುಮಾರು 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ
ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲ ಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌