ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಜನಪ್ರಿಯ ಮೆಸೇಜಿಂಗ್ ಅಪ್ಲಿಕೆಶನ್ ವಾಟ್ಸಪ್, ತನ್ನ ಸೇವೆಯಲ್ಲಿ ಬದಲಾವಣೆ ಮಾಡಿಕೊಂಡು ಬಂದಿದೆ. ಕಳೆದ ಕೆಲ ತಿಂಗಳುಗಳ ಹಿಂದೆ ಮೆಸೇಜ್ ಕಳುಹಿಸಿದ ಬಳಿಕ ಅದನ್ನು ಡಿಲೀಟ್ ಮಾಡುವ ಸೌಲಭ್ಯವನ್ನು ವಾಟ್ಸಪ್ ಕಲ್ಪಿಸಿತ್ತು. ಆದರೆ ಇದೀಗ ಆ ಸೌಲಭ್ಯದಲ್ಲೂ ವಾಟ್ಸಪ್ ಸಣ್ಣದಾದ, ಆದರೆ ಮಹತ್ವದ ಬದಲಾವಣೆಯನ್ನು ತಂದಿದೆ.
‘ಡಿಲೀಟ್ ಫಾರ್ ಎವ್ರಿಒನ್’ ಸೌಲಭ್ಯವನ್ನು ಮೊದಲ ಬಾರಿಗೆ ಪರಿಚಯಿಸಿದಾಗ, ಬಳಕೆದಾರರಿಗೆ ಡಿಲೀಟ್ ಮಾಡಲು 1 ನಿಮಿಷಕ್ಕಿಂತಲೂ ಕಡಿಮೆ ಕಾಲಾವಕಾಶವಿತ್ತು. ಬಳಿಕ ಕಾಲಮಿತಿಯನ್ನು 1 ಘಂಟೆ 8 ನಿಮಿಷ 16 ಸೆಕೆಂಡ್‌ಗಳಿಗೆ ಏರಿಸಲಾಗಿತ್ತು.
ಇದೀಗ ಹೊಸ ಆವೃತ್ತಿಯಲ್ಲಿ ಈ ಕಾಲಮಿತಿಯನ್ನು 13 ಘಂಟೆ 8 ನಿಮಿಷ 16 ಸೆಕೆಂಡ್‌ಗಳಿಗೆ ಏರಿಕೆಯಾಗಲಿದೆ ಎಂದು WABetaInfo ಟ್ವೀಟ್ ಮಾಡಿದೆ.
..(2/2)
This is a protection against modded users that revoked messages sent weeks, months and years ago.
You can still delete a message for everyone within 1h, 8m, 16s as long as the recipient will receive your revoke request within 13h, 8m, 16s.
ಆದರೆ ಈ ಹೊಸ ಡಿಲೀಟ್ ಫೀಚರ್‌ಗೆ ಒಂದು ಶರತ್ತು ಕೂಡಾ ಇದೆ. ಮೆಸೇಜ್ ಕಳುಹಿಸಿದವರಿಗೆ ಆ ಆಯ್ಕೆ ಲಭ್ಯವಾದಲ್ಲಿ ಮಾತ್ರ ಡಿಲೀಟ್ ಮಾಡಲು ಸಾಧ್ಯ. ಯಾವುದೇ ಕಾರಣದಿಂದ ಆ ಆಯ್ಕೆ ನಿಮಗೆ ಬರದೇ ಇದ್ದರೆ, ನೀವು ‘ಡಿಲೀಟ್ ಫಾರ್ ಎವ್ರಿ ಒನ್’ಮಾಡುವ ಹಾಗಿಲ್ಲ!
ಉದಾಹರಣೆಗೆ, ನೀವು ಯಾರಿಗಾದರೂ ರಾತ್ರಿ 11 ಘಂಟೆಗೆ ಸಂದೇಶವನ್ನು ಕಳುಹಿಸುತ್ತೀರಿ ಎಂದಿಟ್ಟುಕೊಳ್ಳಿ. ಆತ/ಆಕೆ ಆ ಮೆಸೇಜನ್ನು ರಿಸೀವ್ ಮಾಡುತ್ತಾರೆ. ಆದರೆ ಆ ಮೆಸೇಜನ್ನು ನೋಡುವ ಮೊದಲು ಅವರು ತಮ್ಮ ಫೋನ್ ಸ್ವಿಚ್ ಆಫ್ ಮಾಡ್ತಾರೆ ಎಂದು ಭಾವಿಸಿ. ಮೆಸೇಜ್ ಕಳುಹಿಸಿದ 2 ಘಂಟೆ ಬಳಿಕ ನೀವು ‘ಡಿಲೀಟ್ ಫಾರ್ ಎವ್ರಿಒನ್’ಆಯ್ಕೆ ಮಾಡಿಕೊಂಡಲ್ಲಿ, ಮೆಸೇಜ್ ರಿಸೀವ್ ಮಾಡಿದವರ ಫೋನ್ ಸ್ವಿಚ್ ಆನ್ ಆಗಿದ್ದರೆ, ನೀವು ಉದ್ದೇಶಿಸಿರುವ ಮೆಸೇಜ್ ಡಿಲೀಟ್ ಆಗುತ್ತೆ. ಒಂದು ವೇಳೆ ಮೆಸೇಜ್ ರಿಸೀವ್ ಮಾಡಿದವರ ಫೋನ್ ಮರುದಿನ 1 ಘಂಟೆಯವರೆಗೂ [13 ಘಂಟೆಗಳ ಕಾಲ] ಸ್ವಿಚ್ ಆನ್ ಆಗದಿದ್ದಲ್ಲಿ ಆ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ ನಿಮಗೆ ಲಭಿಸುವುದಿಲ್ಲ.