ಅಲ್ಲಲ್ಲಿ ಮೊಬೈಲ್ ಚಾರ್ಜಿಗಿಟ್ಟಾಗ ಸ್ಫೋಟಗೊಂಡ ಸುದ್ದಿಯನ್ನು ಓದುತ್ತಲೇ ಇರುತ್ತೇವೆ. ಅದ್ಯಾವ ಕಾರಣದಿಂದ ಹೀಗಾಗುತ್ತೋ ಗೊತ್ತಿಲ್ಲ. ಆದರೆ, ಹೀಗಾಗದಂತೆ ತಡೆಯಲು ಇಲ್ಲಿವೆ ಸಿಂಪಲ್ ಟಿಪ್ಸ್...
ಮೊಬೈಲ್ ಬಳಸೋದು ಹೆಚ್ಚಾದಂತೆ ಅದರ ದರ್ಬಳಕೆಯೂ ಹೆಚ್ಚುತ್ತಿದೆ. ಆರೋಗ್ಯ, ಮನಸ್ಸಿನ ಮೇಲೆ ಪ್ರಭಾವ ಬೀರೋ ಈ ಮೊಬೈಲ್ ಅಂತೂ ಮಕ್ಕಳನ್ನು ಇನ್ನಿಲ್ಲದಂತೆ ಮೋಡಿ ಮಾಡಿ ಬಿಟ್ಟಿದೆ. ಸದಾ ಮೊಬೈಲ್ ಹಿಡಿದೇ ಕೂರುವ ಮಕ್ಕಳ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.
ಆದರೆ, ಕೆಲ ಕಾಲ ಬಳಸಿದಂತೆಯೇ ಬಹಳ ಹೀಟ್ ಆಗೋ ಅಥವಾ ಚಾರ್ಜಿಗಿಟ್ಟಾಗಲೂ ಕೈ ಸುಡುವ ಮೊಬೈಲ್ ಅನ್ನು ಕೇರ್‌ಫುಲ್ ಆಗಿ ಮ್ಯಾನೇಜ್ ಮಾಡಬೇಕು. ಹೇಗೆ?
ಫುಲ್ ಚಾರ್ಜ್ ಆದ್ಮೇಲೆ, ಪ್ಲಗ್ ರಿಮೂವ್ ಮಾಡಿ. ಇಲ್ಲದಿದ್ದರೆ ಪೋನ್ ಹೆಚ್ಚು ಬಿಸಿಯಾಗಿ ಸ್ಪೋಟಗೊಳ್ಳುವಂತೆ ಮಾಡುತ್ತದೆ.
ಮೊಬೈಲ್ ಮೇಲೆ ಏನೂ ಇಡಬೇಡಿ. ವಿಶೇಷವಾಗಿ ಚಾರ್ಜ್ ಮಾಡುವಾಗ ಯಾವುದೇ ರೀತಿಯ ವಸ್ತುಗಳನ್ನೂ ಇಡಬಾರದು. ದಿಂಬಿನ ಕೆಳಗೂ ಮೊಬೈಲ್ ಇಡಬೇಡಿ.
ಮೊಬೈಲ್ ಚಾರ್ಚ್‌ಗೆ ಇಟ್ಟುವಾಗ ಬಳಸ ಬೇಡಿ. ಇದರಿಂದ ಹೀಟ್ ಹೆಚ್ಚಾಗಿ, ಸ್ಫೋಟಗೊಳ್ಳಬಹುದು.
ಚಾರ್ಜಿಗಿಟ್ಟ ಮೊಬೈಲ್‌ಗೆ ಇಯರ್ ಅಥವಾ ಹೆಡ್‌ಫೋನ್ ಹಾಕ್ಗೊಂಡು, ಬಳಸಬೇಡಿ. ಸ್ಫೋಟಗೊಂಡರೆ, ಕಿವಿಯೇ ಸಿಡಿಯುತ್ತದೆ.
ಚಾರ್ಜಿಗಿಟ್ಟ ಮೊಬೈಲ್‌ಗೆ ಕರೆ ಬಂದರೆ, ಪ್ಲಗ್ ತೆಗೆದು ಮಾತನಾಡಿ.
ಎಕ್ಸ್‌ಟೆನ್ಷನ್ ಪಾಯಿಂಟ್‌ಗೆ ತೊಂದರೆಯಾಗದಂತೆ ಗಮನ ಹರಿಸಿ. ಯಾವುದಾದರೂ ಒಂದಕ್ಕೆ ತೊಂದರೆಯಾದರೂ ಡೇಂಜರ್.
ಬಿಸಿಲಿನಿಂದ ದೂರವಿಡಿ. ಚಲಿಸುವಾಗ ಮೊಬೈಲ್ ಚಾರ್ಜ್ ಮಾಡೋದು ಕಡಿಮೆ ಮಾಡಿ. ಅಕಸ್ಮಾತ್ ಚಾರ್ಜ್ ಮಾಡುವುದು ಅನಿವಾರ್ಯವಾದರೆ, ಬಿಸಿಲಿಗೆ ತಾಗದಂತೆ ಎಚ್ಚರವಹಿಸಿ. ಕಾರಿನೊಳಗೆ ತಾಪಮಾನ 45 ಡಿಗ್ರಿ ಸೆ.ಗಿಂತ ಕಡಿಮೆ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಫೋನ್ ಕೇಸ್ ತೆಗೆದು, ಚಾರ್ಜ್‌ಗಿಡಿ. ಫೋನ್ ಬಿಡುಗಡೆ ಮಾಡುವ ಹೀಟ್, ಫೋನಿಗೆ ತೊಂದರೆ ನೀಡುವ ಸಾಧ್ಯತೆ ಇರುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.