ಫೋನ್‌ನಿಂದ ಮಾಯವಾಗುತ್ತೆ ಈ ಫೀಚರ್ಸ್...

By Web DeskFirst Published Oct 4, 2018, 5:11 PM IST
Highlights

ಹೊಸ ಹೊಸ ಮಾಡೆಲ್ ಫೋನ್ ಮಾರ್ಕೆಟ್‌ಗೆ ಕಾಲಿಟ್ಟ ನಂತರ ಹೇಗೆ ಹಳೇ ಪೋನ್‌ಗಳು ಹೇಳ ಹೆಸರಿಲ್ಲದಂತೆ ಮಾಯವಾಗುತ್ತೋ, ಹಾಗೆಯೇ ಫೋನಿನ ಕೆಲವು ಫೀಚರ್ಸ್ ಸಹ ಔಟ್‌ಡೇಟೆಡ್ ಆಗುತ್ತೆ. 

'ಫೋನ್ ಹಾಗೂ ಹೆಣ್ಣನ್ನು ಯಾಕಾದ್ರೋ ಇಷ್ಟು ಬೇಗ ಆರಿಸಿಕೊಂಡ್ವೋ? ಇನ್ನು ಸ್ವಲ್ಪ ಕಾಯ್ದಿದ್ದರೆ ಒಳ್ಳೆ ಮಾಡೆಲ್ ಸಿಗುತ್ತಿತ್ತೇನೋ...' ಎಂದು ಗಂಡು ಯೋಚಿಸುತ್ತಾನಂತೆ. ದಿನಕ್ಕೊಂದು ಮಾಡೆಲ್ ಮೊಬೈಲ್ ಮಾರುಕಟ್ಟೆಗೆ ಪ್ರವೇಶಿಸುತ್ತಲೇ ಇರುತ್ತದೆ. ಹೊಸದು ಪ್ರವೇಶಿಸದ ನಂತರ ಹಳೆಯದು ತನ್ನಿತಾನೇ ಔಟ್‌ಡೇಟೆಡ್ ಆಗುವುದು ಈ ತಾಂತ್ರಿಕ ಯುಗದ ದುರಂತ.

ಕೇವಲ ಫೋನ್‌ಗಳು ಮಾತ್ರವಲ್ಲ, ಫೋನಿನಲ್ಲಿರೋ ಫೀಚರ್ಸ್ ಸಹ ತನ್ನಿತಾನೇ ಮಾಯವಾಗುವುದೂ ಕಾಮನ್. ಅದರಲ್ಲಿಯೂ ತೀರಾ ಅಡಿಕ್ಟ್ ಆದ, ಅಚ್ಚುಮೆಚ್ಚಿನ ಫೀಚರ್ಸ್ ಹೋದರೆ ಏನನ್ನೋ ಕಳೆದು ಕೊಳ್ಳುವಂತೆ ಭಾಸವಾಗಿ ಬಿಡುತ್ತದೆ. ಇಂಥ ಕೆಲವು ಜನಪ್ರಿಯ ಫೀಚರ್ಸ್ ಮುಂದೆ ಬರುವ ಫೋನಿನಿಂದ ಮಾಯವಾಗಬಹುದು. ಯಾವವು ಅವು?

  • ಫಿಂಗರ್ ಪ್ರಿಂಟ್ ಲಾಗ್ ಇನ್
  • ಹೆಡ್‌ ಫೋನ್ ಜಾಕ್
  • ಸಿಮ್ ಕಾರ್ಡ್ ಸ್ಲಾಟ್ 
  • ಮೈಕ್ರೋ ಎಸ್‌ಡಿ ಕಾರ್ಡ್
  • ಮೊಬೈಲ್ ಚಾರ್ಜರ್
  • ಪವರ್ ಬಟನ್ ಇರೋಲ್, ವಾಲ್ಯೂಮ್ ಬಟನ್ ಮಾತ್ರ ಇರುತ್ತೆ. 
  • ಸಿಂಗಲ್ ಲೆನ್ಸ್ ಹೋಗಿ, ಎರಡು ಅಥವಾ ಮೂರು ಲೆನ್ಸ್ ಇರಲಿದೆ.
click me!