
WhatsApp Latest Features: ಮೆಟಾ ಒಡೆತನದ ಮೇಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಕಳೆದ ಕೆಲವು ದಿನಗಳಿಂದ ತನ್ನ ಬಳಕೆದಾರರಿಗೆ ನಿರಂತರವಾಗಿ ಹೊಸ ಅಪ್ಡೇಟ್‌ಗಳನ್ನು ನೀಡುತ್ತಿದೆ. ಇತ್ತೀಚೆಗೆ ವಾಟ್ಸಾಪ್ ತನ್ನ ಮಲ್ಟಿ ಡಿವೈಸ್ ಸಪೋರ್ಟ್ ವೈಶಿಷ್ಟ್ಯವನ್ನು ಬಿಡುಗಡೆ ಮಾಡಿತ್ತು. ಈಗ ವಾಟ್ಸಾಪ್ ಮತ್ತೊಂದು ಹೊಸ ಅಪ್ಡೇಟ್ ಮೇಲೆ ಕೆಲಸ ಮಾಡುತ್ತಿದ್ದು, ಇದು ಜಾಗತಿಕವಾಗಿ ಬಿಡುಗಡೆಯಾದರೆ ವಾಟ್ಸಾಪ್ ಬಳಕೆದಾರರಿಗೆ ಬಂಪರ್ ಆಫರ್ ಸಿಕ್ಕಂತಾಗಲಿದೆ. ವಾಟ್ಸಾಪ್ ಹೊಸ ಅಪ್ಡೇಟ್‌ನಲ್ಲಿ 2GBಯಷ್ಟು ದೊಡ್ಡ ಮೀಡಿಯಾ ಫೈಲ್‌ಗಳನ್ನು ಕಳುಹಿಸಲು ಅನುಮತಿ ನೀಡಲಿದೆ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ಟೆಲಿಗ್ರಾಮ್‌ನಲ್ಲಿ 1.5GB ಗಾತ್ರದ ದೊಡ್ಡ ಫೈಲ್‌ಗಳನ್ನು ಸುರಕ್ಷಿತ ಮತ್ತು ಉಚಿತವಾಗಿ ಹಂಚಿಕೊಳ್ಳಬಹುದು. ಆದರೆ ವಾಟ್ಸಾಪ್ ಬಳಕೆದಾರರು 100MB ಗಾತ್ರದವರೆಗಿನ ಫೈಲ್‌ಗಳನ್ನು ಮಾತ್ರ ಕಳುಹಿಸಬಹುದು. ವಾಟ್ಸಾಪ್ ತನ್ನ ಎಲ್ಲಾ ಬಳಕೆದಾರರಿಗಾಗಿ ಈ ವೈಶಿಷ್ಟ್ಯವನ್ನು ಪ್ರಾರಂಭಿಸಲು ನಿರ್ಧರಿಸಿದರೆ, ಇದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಲಿದೆ. ಈ ಮೂಲಕ ವಾಟ್ಸಾಪ್ ಟೆಲಿಗ್ರಾಂಗೆ ಸೆಡ್ಡು ಹೊಡೆಯಲಿದೆ.
ಇದನ್ನೂ ಓದಿ: WhatsApp Multi Device Support ಬಿಡುಗಡೆ: ಲಿಂಕ್ ಮಾಡುವುದು ಹೇಗೆ?
ಇತ್ತೀಚಿನ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ರೆಸಲ್ಯೂಶನ್‌ಗಳನ್ನು ನಿರಂತರವಾಗಿ ಸುಧಾರಿಸುವುದರೊಂದಿಗೆ, ಫೋಟೋ ವಿಡಿಯೋ ಫೈಲ್‌ಗಳ ಸೈಝ್ ಕೂಡ ಹೆಚ್ಚಾಗುತ್ತಿವೆ, ಇದರಿಂದಾಗಿ ಬಳಕೆದಾರರು ಈ ಫೈಲ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಕಷ್ಟವಾಗುತ್ತದೆ. ವಾಟ್ಸಾಪ್ ಹೊಸ ವೈಶಿಷ್ಟ್ಯ ಬಿಡುಗಡೆಯಾದರೆ ಬಳಕೆದಾರರು ಸುಲಭವಾಗಿ ವಾಟ್ಸಾಪ್ ಮೂಲಕವೇ ದೊಡ್ಡ ಫೈಲ್‌ಗಳನ್ನು ಕಳುಹಿಸಬಹುದು ಮತ್ತು ಅದಕ್ಕಾಗಿ ಅವರು ಇತರ ಪ್ಲಾಟ್‌ಫಾರ್ಮ್‌ಗಳು ಅಥವಾ ಸಾಫ್ಟ್‌ವೇರನ್ನು ಅವಲಂಬಿಸಬೇಕಾಗಿಲ್ಲ.
ದೊಡ್ಡ ಫೈಲ್ಸ್ ಕಳುಹಿಸುವುದು ಸುಲಭ: ಅಪ್ಲಿಕೇಶನ್ ಮೂಲಕ ಫೋಟೋ ಅಥವಾ ವಿಡಿಯೋ ಕಳುಹಿಸಿದಾಗ ವಾಟ್ಸಾಪ್ ಸಾಮಾನ್ಯವಾಗಿ ಮೀಡಿಯಾ ಫೈಲ್‌ಗಳನ್ನು ಸಂಕುಚಿತಗೊಳಿಸುತ್ತದೆ. ಹೀಗಾಗಿ ವಾಟ್ಸಾಪ್ ಬಳಕೆದಾರರು ಪೂರ್ಣ ರೆಸಲ್ಯೂಶನ್‌ಗಳಲ್ಲಿ ಚಿತ್ರಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆಯೇ ಎಂಬುದರ ಬಗ್ಗೆ ವಾಟ್ಸಾಪ್ ಇನ್ನೂ ಸ್ಪಷ್ಟನೆ ನೀಡಿಲ್ಲ.
ಫೋಟೊ ಅಥವಾ ವಿಡಿಯೋದ ಮೂಲ ಗುಣಮಟ್ಟವನ್ನು ಉಳಿಸಿಕೊಳ್ಳಲು ಚಿತ್ರಗಳನ್ನು ಡಾಕ್ಯುಮೆಂಟ್‌ಗಳಾಗಿ ಕಳುಹಿಸಲು ಬಳಕೆದಾರರನ್ನು ವಾಟ್ಸಾಪ್ ಒತ್ತಾಯಿಸುತ್ತದೆ. ಅಲ್ಲದೇ ಕ್ವೀಕ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಡಾಕ್ಯುಮೆಂಟ್‌ಗಳಾಗಿ ಕಳುಹಿಸಲಾದ ಮಾಧ್ಯಮ ಫೈಲ್‌ಗಳಿಗೆ ಪೂರ್ವವೀಕ್ಷಣೆಗಳನ್ನು (Previews) ತೋರಿಸುವುದನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ, ಆಂಡ್ರಾಯ್ಡ್ ವಾಟ್ಸಾಪ್ ಬೀಟಾ ಪರೀಕ್ಷಕರಿಗೆ ಧ್ವನಿ ಸಂದೇಶಗಳನ್ನು ರೆಕಾರ್ಡ್ ಮಾಡುವಾಗ ವಿರಾಮಗೊಳಿಸುವ ಮತ್ತು ಪುನರಾರಂಭಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ವಾಟ್ಸಾಪ್ ಮೂಲತಃ ಐಓಎಸ್‌ನಲ್ಲಿ ಈ ವೈಶಿಷ್ಟ್ಯವನ್ನು ನೀಡಿತ್ತು. ಆಂಡ್ರಾಯ್ಡ್ ಬೀಟಾ ಬಳಕೆದಾರರಿಗಾಗಿ ವಾಟ್ಸಾಪ್ ಧ್ವನಿ ಸಂದೇಶ ರೆಕಾರ್ಡಿಂಗನ್ನು ಪಾಸ್ (Pause) ಮಾಡುವ ಮತ್ತು ಪುನರಾರಂಭಿಸುವ ವೈಶಿಷ್ಟ್ಯ ಬಿಡುಗಡೆಯ ವರದಿಯ ಕೆಲ ದಿನಗಳ ಬಳಿಕ ಈ ಸುದ್ದಿ ಬಂದಿದೆ.
ಇದನ್ನೂ ಓದಿ: ಅತೀ ಕಡಿಮೆ ಮೊಬೈಲ್ ಡೇಟಾದಲ್ಲಿ ಮಾಡಬಹುದು WhatsApp ಕಾಲ್, ಇಲ್ಲಿದೆ 5 ಟಿಪ್ಸ್!
ಬೀಟಾ ಟೆಸ್ಟಿಂಗ್ ಪ್ರಾರಂಭ: ಪ್ರಸ್ತುತ ವಾಟ್ಸಾಪ್ ಅದರ ಕೆಲವು ಬೀಟಾ ಬಳಕೆದಾರರೊಂದಿಗೆ ಈ ಫೀಚರನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಬೃಹತ್ ಮೀಡಿಯಾ ಫೈಲನ್ನು ಹಂಚಿಕೊಳ್ಳುವ ಈ ಸಾಮರ್ಥ್ಯವನ್ನು ಐಓಎಸ್ (iOS) ಮತ್ತು ಆಂಡ್ರಾಯ್ಡ್ (Android) ಎರಡರಲ್ಲೂ ಪರೀಕ್ಷಿಸಲಾಗುತ್ತಿದೆ.
ವಾಟ್ಸಾಪ್-ಸಂಬಂಧಿತ ಅಪ್‌ಡೇಟ್‌ಗಳನ್ನು ಸಾರ್ವಜನಿಕರಿಗೆ ಹೊರತರುವ ಮೊದಲು ಟ್ರ್ಯಾಕ್ ಮಾಡುವ WABetainfo,ಅರ್ಜೆಂಟೀನಾದಲ್ಲಿ ಆಂಡ್ರಾಯ್ಡ್ ವಾಟ್ಸಾಪ್ ಮತ್ತು ಐಓಎಸ್ ವಾಟ್ಸಾಪ್‌ನ ಕೆಲವು ಬೀಟಾ ಬಳಕೆದಾರರು 2GB ಯಷ್ಟು ದೊಡ್ಡ ಗಾತ್ರದ ಮೀಡಿಯಾ ಫೈಲ್‌ಗಳನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ಪಡೆಯುತ್ತಿದ್ದಾರೆ ಎಂದು ವರದಿ ಮಾಡಿದೆ.
ಆಂಡ್ರಾಯ್ಡ್‌ನಲ್ಲಿ ವಾಟ್ಸಾಪ್ ಬೀಟಾ ಆವೃತ್ತಿಗಳು 2.22.8.5, 2.22.8.6 ಮತ್ತು 2.22.8.7 ಮತ್ತು ಐಓಎಸ್‌ನಲ್ಲಿ ಬೀಟಾ ಆವೃತ್ತಿ 22.7.0.76 ಅನ್ನು ಹೊಂದಾಣಿಕೆಯ ನವೀಕರಣಗಳಾಗಿ ಗುರುತಿಸಲಾಗಿದೆ ಎಂದು ವರದಿ ಹೇಳುತ್ತದೆ. ಇದು ಪರೀಕ್ಷೆಯಾಗಿರುವುದರಿಂದ, ಮೆಟಾ-ಮಾಲೀಕತ್ವದ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಇದೀಗ ಸಾಮನ್ಯ ಬಳಕೆದಾರರಿಗೆ ವೈಶಿಷ್ಟ್ಯವನ್ನು ಹೊರತರದಿರುವ ಸಾಧ್ಯತೆಯಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.