ಹೊಸ ಹೊಸ ಫೀಚರ್‌ಗಳನ್ನು ಬಿಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿರುವ ವಾಟ್ಸಾಪ್, ಈಗ ಮೆಸೇಜ್ ಡಿಲೀಟ್ ಮಾಡುವ ಆಯ್ಕೆಯನ್ನು ಬಿಟ್ಟಿದೆ.
ಮುಂಬೈ (ನ. 06): ಸಂದೇಶ ಕಳಿಸಿದ ಮೇಲೆ ಅದು ನಿರ್ದಿಷ್ಟಸಮಯದಲ್ಲಿ ಅಳಿಸಿಹೋಗುವಂತಹ ಹೊಸ ವ್ಯವಸ್ಥೆಯನ್ನು ವಾಟ್ಸ್‌ಆ್ಯಪ್ ಆರಂಭಿಸಿದೆ. ಗುರುವಾರದಿಂದಲೇ ಇದು ಬಳಕೆದಾರರಿಗೆ ಲಭ್ಯವಾಗುತ್ತಿದ್ದು, ವಾಟ್ಸ್‌ಆ್ಯಪ್ ಅಪ್‌ಡೇಟ್ ಮೂಲಕ ಎಲ್ಲರಿಗೂ ಈ ತಿಂಗಳ ಅಂತ್ಯದೊಳಗೆ ಸಿಗಲಿದೆ. ಈ ಆಯ್ಕೆಯನ್ನು ಎನೇಬಲ್ ಮಾಡಿಕೊಂಡರೆ ನಾವು ಸಂದೇಶ ಕಳಿಸಿದ 7 ದಿನಗಳ ನಂತರ ಅದು ತನ್ನಿಂತಾನೇ ಅಳಿಸಿಹೋಗುತ್ತದೆ.
ಆದರೆ, ಈ ‘ಡಿಸೆಪಿಯರಿಂಗ್ ಮೆಸೇಜಸ್’ ವ್ಯವಸ್ಥೆ ಟೆಲಿಗ್ರಾಂ, ಸ್ನಾಪ್‌ಚಾಟ್ ಅಥವಾ ಮೆಸೆಂಜರ್ ಆ್ಯಪ್‌ನಲ್ಲಿರುವಂತಹ ಮಾದರಿಯಲ್ಲಿ ಇಲ್ಲ. ಆ ಆ್ಯಪ್‌ಗಳಲ್ಲಿ ನಾವು ಸಂದೇಶ ಕಳಿಸಿದ ಎಷ್ಟುಸಮಯದ ನಂತರ ಅದು ಡಿಲೀಟ್ ಆಗಬೇಕು ಎಂಬುದನ್ನು ನಾವೇ ಮೊದಲು ಸೆಟ್ ಮಾಡಬಹುದು. ಆದರೆ, ವಾಟ್ಸ್‌ಆ್ಯಪ್‌ನ ಡಿಸೆಪಿಯರಿಂಗ್ ಮೆಸೇಜ್‌ನಲ್ಲಿ ಆ ಆಯ್ಕೆಯಿಲ್ಲ. ಇಲ್ಲಿ ನಾವು ಸಂದೇಶ ಕಳಿಸಿದ 7 ದಿನಗಳ ನಂತರವೇ ಅವು ಡಿಲೀಟ್ ಆಗುತ್ತವೆ. ವೈಯಕ್ತಿಕವಾಗಿ ಕಳಿಸಿದ ಅಥವಾ ಗ್ರೂಪ್ ಚಾಟ್‌ನಲ್ಲಿ ಕಳಿಸಿದ ಸಂದೇಶಗಳೆರಡಕ್ಕೂ ಇದು ಅನ್ವಯಿಸುತ್ತದೆ.
undefined
QR ಕೋಡ್ ಮೂಲಕ ಕಾಂಟ್ಯಾಕ್ಟ್ ಲಿಸ್ಟ್‌ಗೆ ನಂಬರ್ ಸೇರಿಸುವುದು ಹೇಗೆ?
ಶೀಘ್ರದಲ್ಲೇ ಆ್ಯಂಡ್ರಾಯ್ಡ್, ಐಒಎಸ್, ಲೈನಕ್ಸ್‌ನ ಕೈಒಎಸ್ ಉಪಕರಣಗಳು, ವಾಟ್ಸ್‌ಆ್ಯಪ್ ವೆಬ್ ಹಾಗೂ ಡೆಸ್ಕ್‌ಟಾಪ್ ಹೀಗೆ ಎಲ್ಲಾ ಬಳಕೆದಾರರಿಗೂ ಈ ಅಪ್‌ಡೇಟ್ ಸಿಗಲಿದೆ ಎಂದು ಕಂಪನಿ ತಿಳಿಸಿದೆ.