
ಸೋಶಿಯಲ್ ಮೀಡಿಯಾ (Social media) ಬರೀ ಮನರಂಜನೆಗೆ ಸೀಮಿತವಾಗಿಲ್ಲ. ಇದನ್ನೇ ವೃತ್ತಿ ಮಾಡ್ಕೊಂಡು ಲಕ್ಷ ಲಕ್ಷ ಸಂಪಾದನೆ ಮಾಡುವ ಜನರಿದ್ದಾರೆ. ನೋಡುಗರಿಗೆ ಮನರಂಜನೆ ನೀಡ್ತಾ, ಮಾಹಿತಿ ರವಾನೆ ಮಾಡ್ತಾ ಹಣ ಗಳಿಸೋದು ಸುಲಭವಾಗಿ ಕಂಡ್ರೂ ತೆರೆ ಮರೆಯಲ್ಲಿ ಸಾಕಷ್ಟು ಪ್ರಯತ್ನವಿರುತ್ತೆ. ನೋಡುಗನ ಇಚ್ಛೆ, ಆತನ ಆಸಕ್ತಿ, ಆತನ ಮೂಡ್ ಮೇಲೆ ನಮ್ಮ ವಿಡಿಯೋ ಬದಲಾಗ್ತಿರಬೇಕು. ಬರೀ ಇಷ್ಟು ಮಾತ್ರವಲ್ಲ ನೋಡುಗನ ಟೈಂ ಕೂಡ ಇಲ್ಲಿ ಮುಖ್ಯವಾಗುತ್ತೆ. ನಿಮಗೆ ಮನಸ್ಸು ಬಂದಾಗ ಇನ್ಸ್ಟಾಗ್ರಾಮ್ ಗೆ ವಿಡಿಯೋ ಪೋಸ್ಟ್ ಮಾಡಿದ್ರೆ ಜನ ನೋಡೋದಿಲ್ಲ. ಜನರಿಗೆ ಯಾವಾಗ ಟೈಂ ಇದೆ, ಯಾವ ಟೈಂನಲ್ಲಿ ಜನರು ಹೆಚ್ಚು ಮೊಬೈಲ್ ನೋಡ್ತಾರೆ, ರೀಲ್ಸ್ ಓಡೋ ಟೈಂ ಯಾವ್ದು ಅಂತ ನೀವು ತಿಳಿದಿದ್ರೆ ನಿಮ್ಮ ವಿಡಿಯೋಕ್ಕೂ ಲಕ್ಷ ವೀವ್ಸ್ ತರಬಹುದು.
ಟೈಂ ಯಾಕೆ ಮುಖ್ಯ? : ಇನ್ಸ್ಟಾಗ್ರಾಮ್ (Instagram) ನಲ್ಲಿ ನೀವು ಒಂದು ವಿಡಿಯೋ ಪೋಸ್ಟ್ ಮಾಡಿದ್ದೀರಿ. ಸರಿಯಾದ ಟೈಂಗೆ ಅದನ್ನು ಪೋಸ್ಟ್ ಮಾಡಿಲ್ಲ ಅಂದ್ರೆ ನೋಡುಗರ ಸಂಖ್ಯೆ ಕಡಿಮೆ ಆಗುತ್ತೆ. ಅದೇ ಸೂಕ್ತ ಟೈಂಗೆ ಪೋಸ್ಟ್ ಮಾಡಿದ್ರೆ ಹೆಚ್ಚಿನ ಜನರು ಅದನ್ನು ನೋಡ್ತಾರೆ, ಕಮೆಂಟ್ ಮಾಡ್ತಾರೆ, ಶೇರ್ ಮಾಡ್ತಾರೆ. ಇನ್ಸ್ಟಾಗ್ರಾಮ್ ನಿಮ್ಮ ವಿಡಿಯೋ ಎಂಗೇಜ್ಮೆಂಟ್ ಹೆಚ್ಚಾದಾಗ ಇನ್ಸ್ಟಾಗ್ರಾಮ್ ನ ಅಲ್ಗಾರಿದಮ್ ನಿಮ್ಮ ಫೋಸ್ಟನ್ನು ಹೆಚ್ಚು ಫೀಡ್ ನಲ್ಲಿ ತೋರಿಸುತ್ತೆ. ಅಂದ್ರೆ ಮತ್ತಷ್ಟು ಜನರಿಗೆ ನಿಮ್ಮ ವಿಡಿಯೋ ತಲುಪುತ್ತೆ. ಆಗ ವಿಡಿಯೋ ವೈರಲ್ ಆಗೋ ಸಾಧ್ಯತೆ ಹೆಚ್ಚಿರುತ್ತೆ. ಜೊತೆಗೆ ನಿಮ್ಮ ಫಾಲೋವರ್ಸ್ ಹೆಚ್ಚಾಗ್ತಾರೆ.
ಇನ್ಸ್ಟಾ ವಿಡಿಯೋವನ್ನು ಯಾವ ಟೈಂಗೆ ಪೋಸ್ಟ್ ಮಾಡ್ಬೇಕು? : ಸೋಶಿಯಲ್ ಮೀಡಿಯಾ ತಜ್ಞರ ಪ್ರಕಾರ, ಬೆಳಿಗ್ಗೆ 6 ರಿಂದ 9 ರವರೆಗೆ ವಿಡಿಯೋ ಪೋಸ್ಟ್ ಮಾಡ್ಬಹುದು. ಜನರು ದಿನದ ಆರಂಭದಲ್ಲಿ ತಮ್ಮ ಫೋನ್ಗಳನ್ನು ನೋಡ್ತಾರೆ. ಇನ್ನು ಮಧ್ಯಾಹ್ನ 12 ಗಂಟೆ ಟೈಂಗೆ ನೀವು ವಿಡಿಯೋ ಪೋಸ್ಟ್ ಮಾಡಿದ್ರೆ ಹೆಚ್ಚು ವೀವ್ಸ್ ಪಡೆಯಬಹುದು. ಯಾಕೆಂದ್ರೆ ಅದು ಊಟದ ವಿರಾಮ. ಊಟದ ಬ್ರೇಕ್ ನಲ್ಲಿ ಜನರು ಮೊಬೈಲ್ ಸ್ಕ್ರೋಲ್ ಮಾಡ್ತಾರೆ. ಇದಲ್ದೆ ನೀವು ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ವಿಡಿಯೋವನ್ನು ಪೋಸ್ಟ್ ಮಾಡ್ಬಹುದು. ಜನರು ಕೆಲಸ ಅಥವಾ ಓದಿಗೆ ಸ್ವಲ್ಪ ಬ್ರೇಕ್ ನೀಡುವ ಟೈಂ ಇದು. ರೆಸ್ಟ್ ಅಂದ ತಕ್ಷಣ ಜನರು ಕೈನಲ್ಲಿ ಮೊಬೈಲ್ ಹಿಡಿತಾರೆ. ನೀವು ರಾತ್ರಿ 9 ರಿಂದ 12 ರವರೆಗೆ ವಿಡಿಯೋ ಪೋಸ್ಟ್ ಮಾಡಿದ್ರೂ ಹೆಚ್ಚು ವೀವ್ಸ್ ಪಡೆಯಬಹುದು. ಈ ಟೈಂನಲ್ಲಿ ಅನೇಕರ ಕೈನಲ್ಲಿ ಮೊಬೈಲ್ ಇರುತ್ತೆ. ಇನ್ಸ್ಟಾ ರೀಲ್ಸ್ ಸ್ಕ್ರೋಲ್ ಆಗ್ತಿರುತ್ತೆ.
ನೀವು ಯಾವ ರೀತಿ ವಿಡಿಯೋ ಮಾಡ್ತಿದ್ದೀರಿ ಎಂಬುದನ್ನು ಗಮನದಲ್ಲಿಟ್ಕೊಂಡು ಟೈಂ ಸೆಟ್ ಮಾಡ್ಕೊಳ್ಬೇಕು. ಇನ್ಸ್ಟಾಗ್ರಾಮ್ ಪ್ರೊಪೇಶನಲ್ ಡ್ಯಾಶ್ಬೋರ್ಟ್ಗೆ ಹೋಗಿ, ನಿಮ್ಮ ಫಾಲೋವರ್ಸ್ ಯಾವಾಗ ಸಕ್ರಿಯವಾಗಿರ್ತಾರೆ ಅಂತ ನೀವು ಚೆಕ್ ಮಾಡ್ಬಹುದು. ಇನ್ಸ್ಟಾಗ್ರಾಮ್ ನಲ್ಲಿ Your Audience ಗೆ ಹೋದ್ರೆ ನಿಮಗೆ ಮಾಹಿತಿ ಸಿಗುತ್ತೆ.
ಇದ್ರ ಬಗ್ಗೆಯೂ ಗಮನ ಇರಲಿ : ಸರಿಯಾದ ಸಮಯ ಮಾತ್ರವಲ್ಲ, ಸಿಂಪಲ್ ಹಾಗೂ ಆಕರ್ಷಕ ಹೆಡ್ಲೈನ್, ಟ್ರೆಂಡಿಂಗ್ ಮ್ಯೂಸಿಕ್, ಟ್ರೆಂಡಿಂಗ್ ವಿಷ್ಯ ಮುಖ್ಯ. ಪ್ರತಿ ವಾರ 3-4 ಬಾರಿ ವಿಡಿಯೋ ಹಾಕುವ ಪ್ರಯತ್ನ ಮಾಡ್ಬೇಕು. ಹ್ಯಾಶ್ಟ್ಯಾಗ್ ಇಲ್ಲಿ ಮುಖ್ಯವಾಗುತ್ತದೆ. ವಿಡಿಯೋ ಗುಣಮಟ್ಟ ಮತ್ತು ಕ್ಯಾಮರಾ ಬಗ್ಗೆಯೂ ಗಮನ ಇರಲಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.