
ಇಂದು ಭಾರತದಲ್ಲಿ Vivo ತನ್ನ ಹೊಸ ಸ್ಮಾರ್ಟ್‌ಫೋನ್ Vivo T4 Ultra ಲಾಂಚ್ ಮಾಡುತ್ತಿದೆ. ಈ ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಹೊಸ ಅನುಭವವನ್ನು ನೀಡಲಿದೆ ವಿವೋ ವಿಶ್ವಾಸವನ್ನು ವ್ಯಕ್ತಪಡಿಸಿದೆ. ಒಳ್ಳೆಯ ಕ್ವಾಲಿಟಿಯ ಕ್ಯಾಮೆರಾ, ಹೆಚ್ಚು ಸಾಮಾರ್ಥ್ಯದ ಬ್ಯಾಟರಿ ಜೊತೆಯಲ್ಲಿ ಸೈಲಿಶ್ ಡಿಸೈನ್ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿದೆ. Vivo T4 Ultra ಬಿಡುಗಡೆ ಮುನ್ನವೇ ಸ್ಮಾರ್ಟ್‌ಫೋನಿನ ಪ್ರಮುಖ ವೈಶಿಷ್ಟ್ಯಗಳು ಲೀಕ್ ಆಗಿವೆ. ಪ್ರಮುಖ ವೆಬ್‌ಸೈಟ್‌ಗಳು Vivo T4 Ultra ಕುರಿತ ಸಂಪೂರ್ಣ ಮಾಹಿತಿಯನ್ನು ಪ್ರಕಟಿಸಿವೆ. ಈ ಹೊಸ ಸ್ಮಾರ್ಟ್‌ಫೋನ್ ಮಿಡ್ ರೇಂಜ್ ಸೆಗ್‌ಮೆಂಟ್‌ನಲ್ಲಿ ತೀವ್ರ ಸ್ಪರ್ಧೆ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಪ್ರೊಸೆಸರ್ ಮತ್ತು ಆಪರೇಟಿಂಗ್ ಸಿಸ್ಟಮ್
Vivo T4 Ultra ಸ್ಮಾರ್ಟ್‌ಫೋನ್ MediaTek Dimensity 9300+ ಪ್ರೊಸೆಸರ್ ಒಳಗೊಂಡಿದ್ದರಿಂದ ಫರ್ಫಾಮೆನ್ಸ್ ಅತ್ಯುತ್ತಮವಾಗಿರಲಿದೆ ಎಂದು ಭಾವಿಸಲಾಗಿದೆ. ಇದರಲ್ಲಿ ARM Cortex X4 Prime CPU ಜೊತೆಯಲ್ಲಿ 3.4 GHz ಹೈ ಸ್ಪೀಡ್ ಸಿಗಲಿದೆ. ಈ ವಿವೋ ಹೊಸ ಸ್ಮಾರ್ಟ್‌ಫೋನ್ Android 15 ಆಧರಿತವಾಗಿದ್ದು, FuntouchOS 15ನಲ್ಲಿ ಕೆಲಸ ಮಾಡಲಿದೆ.
ಡಿಸ್‌ಪ್ಲೇ ಮತ್ತು ಮನೋಹರವಾದ ಡಿಸೈನ್
Vivo T4 Ultraನ 6.67 ಇಂಚಿನ OLED ಸ್ಕ್ರೀನ್‌ನೊಂದಿಗೆ ಲಭ್ಯವಿರಲಿದೆ. ಇದು 120Hz ರಿಫ್ರೆಶ್ ರೇಟ್ ಜೊತೆ ಗ್ರಾಹಕರಿಗೆ ಈ ಸ್ಮಾರ್ಟ್‌ಫೋನ್ ಸಿಗಲಿದೆ. ವಿಶೇಷವಾಗಿ ಡಿಸ್‌ಪ್ಲೇನಲ್ಲಿ ಸಣ್ಣದಾದ ಕರ್ವ್ಡ್ ಎಡ್ಜ್ ನೀಡಲಾಗಿದ್ದು, ಸ್ಮಾರ್ಟ್‌ಫೋನ್‌ಗೆ ಪ್ರೀಮಿಯಂ ಲುಕ್ ಒದಗಿಸಲಿದೆ. ಈ ಫೋನ್ 1.5K ರೆಸ್ಯೂಲೇಷನ್ ಮತ್ತು 5000 ನಿಟ್ಸ್‌ನ ಪೀಕ್ ಬ್ರೈಟ್‌ನೆಸ್ ಹೊಂದಿರಲಿದೆ. ವಿವೋ ಹೊಸ ಸ್ಮಾರ್ಟ್‌ಫೋನ್ 192 ಗ್ರಾಂ ತೂಕ ಮತ್ತು 7.43 ಮಿಮಿ ದಪ್ಪವಿರಲಿದೆ ಎಂದು ವರದಿಯಾಗಿದೆ. Vivo T4 Ultra ಗ್ರಾಹಕರಿಗೆ ಬ್ಲ್ಯಾಕ್ ಮತ್ತು ವೈಟ್ ಬಣ್ಣದಲ್ಲಿ ಸಿಗಲಿದೆ.
ಕ್ಯಾಮೆರಾ ಸೆಟ್ಅಪ್
ಇನ್ನು ಫೋಟೋಗ್ರಾಫಿ ಪ್ರಿಯರಿಗೆ ಈ ಸ್ಮಾರ್ಟ್‌ಫೋನ್ ಒಳ್ಳೆಯ ಆಯ್ಕೆಯಾಗಿರಲಿದೆ. ಇದು 50MP Sony IMX 921 ಪ್ರೈಮರಿ ಕ್ಯಾಮೆರಾ ಇರಲಿದೆ ಎಂದು ವರದಿಯಾಗಿದೆ. ಇದು OIS (ಆಪ್ಟಿಕಲ್ ಇಮೇಹ್ ಸ್ಟೈಬಲೈಜೇಷನ್) ಸಪೋರ್ಟ್ ಮಾಡಲಿದೆ. ಇಷ್ಟು ಮಾತ್ರವಲ್ಲದೇ 50MP ಟೆಲಿಫೋ ಲೆನ್ಸ್ ಸಹ ನಿಮಗೆ ಸಿಗಲಿದ್ದು, ಇದರಿಂದಾಗಿ 3x ಆಪ್ಟಿಕಲ್ ಜೂಮ್ ಮಾಡಬಹುದು. ಇದೆಲ್ಲದರ ಜೊತೆ 8MP ಸಾಮರ್ಥ್ಯದ ಅಲ್ಟ್ರಾವೈಡ್ ಕ್ಯಾಮೆರಾವೂ ಸಿಗಲಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ವಿವೋ ಕಂಪನಿಯ ಹೊಸ ಸ್ಮಾರ್ಟ್‌ಫೋನ್ 5,500mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಹೊಂದಿದ್ದು, 90W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತಿದೆ. ಕೇವಲ 30 ನಿಮಿಷದಲ್ಲಿಯೇ ಫೋನಿನ ಬ್ಯಾಟರಿ ಚಾರ್ಜ್ ಫುಲ್ ಆಗುತ್ತದೆ..
ಬೆಲೆ ಎಷ್ಟು?
ವರದಿಗಳ ಪ್ರಕಾರ, ವಿವೋ ಟಿ4 ಅಲ್ಟ್ರಾ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು ₹35,000 ಆಗಿರಬಹುದು. ಈ ಹಿಂದೆ ಬಿಡುಗಡೆಯಾದ ಟಿ3 ಅಲ್ಟ್ರಾ ಬೆಲೆ ₹ 31,999 ಆಗಿತ್ತು. ಹಾಗಾಗಿ ಹೊಸ ಮಾದರಿಯ ಬೆಲೆ ಹಳೆಯ ರೂಪಾಂತರಕ್ಕಿಂತ ಸುಮಾರು ₹ 3,000 ಹೆಚ್ಚಿರಬಹುದು ಎಂದು ಅಂದಾಜಿಸಲಾಗಿದೆ.
ಇತರೆ ಫೀಚರ್ಸ್
ವರದಿಗಳ ಪ್ರಕಾರ Vivo T4 Ultra ಸ್ಮಾರ್ಟ್‌ಫೋನ್ IP64 ರೇಟಿಂಗ್ ಎಂದು ಹೇಳಲಾಗುತ್ತಿದೆ. ಇದು ಲಘು ನೀರು ಮತ್ತು ಧೂಳಿನ ಹೊಡೆತಗಳಿಂದ ರಕ್ಷಣೆ ನೀಡುತ್ತದೆ. ಈ ಹಿಂದಿನ ಮಾಡೆಲ್ T3 ಅಲ್ಟ್ರಾ IP68 ರೇಟಿಂಗ್ ಪಡೆದುಕೊಂಡಿದೆ. ಹೊಸ ಮಾಡೆಲ್ ಹಳೆಯದಕ್ಕಿಂತ ಉತ್ತಮವಾಗಿರಲಿದೆ ಎಂದು ಹೇಳಲಾಗುತ್ತಿದೆ. ಆದರೆ T4 ಅಲ್ಟ್ರಾದ ಇತರ ವೈಶಿಷ್ಟ್ಯಗಳನ್ನು ನೋಡಿದರೆ, ಈ ನ್ಯೂನತೆಯು ದೊಡ್ಡದಾಗಿ ಕಾಣುತ್ತಿಲ್ಲ.
ಒಂದೇ ಫೋನ್‌ನಲ್ಲಿ ಹೈ ಕ್ವಾಲಿಟಿಯ ಕ್ಯಾಮೆರಾ, ಫಾಸ್ಟ್ ಚಾರ್ಜಿಂಗ್ ಬ್ಯಾಟರಿ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಬಯಸುವ ಬಳಕೆದಾರರಿಗೆ Vivo T4 ಅಲ್ಟ್ರಾ ಉತ್ತಮ ಆಯ್ಕೆಯಾಗಿದೆ. ಬೆಲೆ ಸ್ವಲ್ಪ ಹೆಚ್ಚಿರಬಹುದು, ಆದರೆ ಅದರ ವೈಶಿಷ್ಟ್ಯಗಳು ಅದನ್ನು ಚೆನ್ನಾಗಿ ಕಾರ್ಯನಿರ್ವಹಿಸುತ್ತವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.