ಜಿಯೋನಿಂದ 10GB ಉಚಿತ ಡೇಟಾ! ಯಾರಿಗುಂಟು? ಯಾರಿಗಿಲ್ಲ?

Published : Jan 29, 2019, 09:10 PM ISTUpdated : Jan 29, 2019, 09:16 PM IST
ಜಿಯೋನಿಂದ 10GB ಉಚಿತ ಡೇಟಾ! ಯಾರಿಗುಂಟು? ಯಾರಿಗಿಲ್ಲ?

ಸಾರಾಂಶ

ತಮ್ಮ ಚಂದಾದಾರರನ್ನು ಹಿಡಿದಿಟ್ಟುಕೊಳ್ಳಲು ಟೆಲಿಕಾಂ ಕಂಪನಿಗಳು ವಿವಿಧ ರೀತಿಯ ಆಫರ್‌ಗಳನ್ನು ನೀಡುತ್ತವೆ. ಅವುಗಳಲ್ಲಿ ಸರ್ಪ್ರೈಸ್ ಆಫರ್‌ಗಳು ಕೂಡಾ ಒಂದು. ಜಿಯೋ 10GB ಡೇಟಾ ನೀಡುತ್ತಿದೆ.  ಅದನ್ನು ಪಡೆಯುವುದು ಹೇಗೆ? ಇಲ್ಲಿದೆ ವಿವರ...

ಕೆಲವರು ಇರುವ ಡೇಟಾವನ್ನು ಬಳಸಲಾಗದೇ ಇದ್ದರೆ, ಇನ್ನು ಕೆಲವರಿಗೆ ಎಷ್ಟು ಡೇಟಾವಿದ್ದರೂ ಸಾಲದು. ಅಂತಹದ್ದರಲ್ಲಿ ಹೆಚ್ಚುವರಿ ಡೇಟಾ ಸಿಕ್ಕರೆ ಖುಷಿಗೆ ಪಾರವೇ ಇರಲ್ಲ. ಅಂತಹ ಆಫರ್‌ವೊಂದನ್ನು Reliance Jio ಪರಿಚಯಿಸಿದೆ..

Reliance Jio ಈಗ ಸೆಲೆಬ್ರೇಷನ್ಸ್ ಪ್ಯಾಕ್‌ಬಿಡುಗಡೆ ಮಾಡಿದೆ. ಈ ಪ್ಯಾಕ್‌ನಲ್ಲಿ 10GB ಡೇಟಾ ಉಚಿತವಾಗಿ ಸಿಗಲಿದೆ. ಪ್ರತಿ ದಿನ 2GBಯಂತೆ, ಸತತ 5 ದಿನಗಳವರೆಗೆ ಈ ಪ್ಯಾಕನ್ನು ಬಳಸಬಹುದು. ಈ ಪ್ಯಾಕ್ ಜಿಯೋ ಪ್ರೈಮ್ ಬಳಕೆದಾರರಿಗೆ ಮಾತ್ರ ಲಭ್ಯ.

ಇದನ್ನೂ ಓದಿ: ಈ ಫೋನ್‌ಗೆ ದಾಳಿ ಮಾಡಿದೆ ಅಜ್ಞಾತ ಬಗ್! ನಿಮಗೂ ಈ ಸಮಸ್ಯೆ ಕಾಡುತ್ತಿದೆಯಾ?

ಅಂದ ಹಾಗೇ, ಇನ್ನಿತರ ಪ್ಲಾನ್‌ಗಳಂತೆ ಈ ಸೆಲೆಬ್ರೇಷನ್ ಪ್ಯಾಕ್ ಜಿಯೋ ವೆಬ್‌ಸೈಟ್‌ನಲ್ಲಿ ಸಿಗಲ್ಲ. ಇದು ಸಾರ್ವತ್ರಿಕವಾಗಿ ಸಿಗೋದು ಇಲ್ಲ, ಬಳಕೆದಾರರು ಮೈಜಿಯೋ ಆ್ಯಪ್‌ನಲ್ಲಿ ಚೆಕ್ ಮಾಡುತ್ತಿರಬೇಕು.  ಆಗ ಅದು ತಮಗೆ ಲಭ್ಯವಿದೆಯೇ ಇಲ್ಲವೋ ಎಂದು ತಿಳಿಯುತ್ತದೆ.

ಸೆಲೆಬ್ರೇಷನ್ ಪ್ಯಾಕ್ ಬಗ್ಗೆ ಚೆಕ್ ಮಾಡಲು ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್‌ನಿಂದ ಮೈಜಿಯೋ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.  ನಿಮ್ಮ ಜಿಯೋ ನಂ. ಬಳಸಿ ಲಾಗಿನ್ ಆಗಬೇಕು. ನಿಮಗೆ ಬಂದ OTPಯನ್ನು ದಾಖಲಿಸಿ, ಆ್ಯಪ್‌ನ ’ಮೈ ಪ್ಲಾನ್ಸ್’ ವಿಭಾಗಕ್ಕೆ ಹೋಗಿ, ಅಲ್ಲಿ ಜಿಯೋ ಸೆಲೆಬ್ರೇಷನ್ ಪ್ಲ್ಯಾನ್ ಇದೆಯೋ ಇಲ್ಲವೋ ಎಂದು ನೊಡಬಹುದು.

ಇದನ್ನೂ ಓದಿ: ಎಚ್ಚರ! ನಿಮ್ಮ ವಾಟ್ಸಪ್ ಚಟುವಟಿಕೆ ನೋಡ್ತಿದ್ದಾನೆ ಒಬ್ಬ!

ಕಳೆದ ವರ್ಷ ಸಪ್ಟೆಂಬರ್‌ನಲ್ಲೂ, ಜಿಯೋ ತನ್ನ 2ನೇ ವಾರ್ಷಿಕೋತ್ಸವದ ಪ್ರಯುಕ್ತ ಸೆಲೆಬ್ರೇಷನ್ ಪ್ಯಾಕನ್ನು ಬಿಡುಗಡೆ ಮಾಡಿತ್ತು.
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

Elon Musk’s Bold Forecast: ಪವರ್ ಪಾಯಿಂಟ್: 20 ವರ್ಷ ಬಳಿಕ ನೀವು ಬೇಕಿದ್ದರೆ ಕೆಲಸ ಮಾಡಬಹುದು! -ಎಲಾನ್ ಮಸ್ಕ್
ವ್ಯಾಟ್ಸಾಪ್‌ಗೆ ಠಕ್ಕರ್, ಚಾಟ್‌ಜಿಪಿಟಿಯಿಂದ ಗ್ರೂಪ್ ಚಾಟ್ ಫೀಚರ್ ಲಾಂಚ್, ಬಳಕೆ ಹೇಗೆ?