ಇಂದಿನ ಯುವ ಪೀಳಿಗೆ ಮೊಬೈಲ್ ಆಯ್ದುಕೊಳ್ಳುವಾಗ ಮೊದಲು ನೋಡೋದು ಕ್ಯಾಮೆರಾ. ವಿವೋ ಮೊಬೈಲ್‌ಗಳ ಪ್ಲಸ್ ಪಾಯಿಂಟ್ ಅದರ ಕ್ಯಾಮೆರಾ. ವಿವೋ ಹೊಸ ಪೋನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇಲ್ಲಿದೆ ಹೆಚ್ಚಿನ ವಿವರ
ಅತ್ಯಾಧುನಿಕ ಕ್ವಾಲ್ಕಂ ಸ್ನಾಪ್‌ಡ್ರ್ಯಾಗನ್ 712 ಪ್ರೊಸೆಸರ್ ಹೊಂದಿರುವ Z1 ಪ್ರೊ ಮೊಬೈಲ್‌ಅನ್ನು Vivo ಕಂಪೆನಿ ಹೊರತಂದಿದೆ. ಇದು Vivoದ Z ಸೀರೀಸ್‌ನ ಮೊದಲ ಸ್ಮಾರ್ಟ್‌ಫೋನ್.
ಇದರಲ್ಲಿರುವ 32 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ ಅತ್ಯಂತ ನಿಖರ ಚಿತ್ರ ಕ್ಲಿಕ್ಕಿಸುವ ಸಾಮರ್ಥ್ಯ ಹೊಂದಿದ್ದು ಮುಖದ ಸೂಕ್ಷ್ಮ ವಿವರಗಳನ್ನೂ ಸೆರೆಹಿಡಿಯುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.
ಇದನ್ನೂ ಓದಿ | ಇನ್ನೊಂದು ಟೆನ್ಶನ್ ಕಮ್ಮಿ! ಬರ್ತಿದೆ WhatsApp ಹೊಸ ಫೀಚರ್
ಜೊತೆಗೆ 16 ಎಂಪಿ, 8 ಎಂಪಿ ಹಾಗೂ 2 ಎಂಪಿ ಸಾಮರ್ಥ್ಯದ ಟ್ರಿಪಲ್ ರಿಯರ್ ಕ್ಯಾಮೆರಾಗಳಿವೆ. 4 ಜಿಬಿ ರಾರಯಮ್- 64 ಜಿಬಿ ರೋಮ್ ಮತ್ತು 6 ಜಿಬಿ ರಾರಯಮ್ ಹಾಗೂ 64 ಜಿಬಿ ರೋಮ್ ಮಾದರಿಗಳಲ್ಲಿ ಮೊಬೈಲ್ ಲಭ್ಯ.
5000 ಎಂಇಎಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದೆ. 6.53 ಇಂಚಿನ ಡಿಸ್ಪ್ಲೇ ಇದೆ. ವಿವೋ ಶಾಪ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಮೊಬೈಲ್‌ಗಳು ಲಭ್ಯ.
ಬೆಲೆ: 14,990 ರು., 16,990 ರು. ಹಾಗೂ 17,990 ರು.