1986ರ ಲ್ಯಾಪ್‌ಟಾಪ್‌ನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಂಟೇಜ್ ಸೋನಿ ಲ್ಯಾಪ್‌ಟಾಪ್‌ನ ವಿನ್ಯಾಸ ಮತ್ತು ವೈಶಿಷ್ಟ್ಯಗಳು ತಂತ್ರಜ್ಞಾನದ ವಿಕಾಸವನ್ನು ಎತ್ತಿ ತೋರಿಸುತ್ತವೆ. ಹಳೆಯ ಮತ್ತು ಹೊಸ ಲ್ಯಾಪ್‌ಟಾಪ್‌ಗಳ ನಡುವಿನ ವ್ಯತ್ಯಾಸವು ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.
ಇಂದು ಲ್ಯಾಪ್‌ಟಾಪ್ ಇಲ್ಲದೆ ಯಾವುದೇ ಕೆಲಸ ಆಗಲ್ಲ. ಆದರೆ, ಲ್ಯಾಪ್‌ಟಾಪ್ ಕೆಲವೊಂದು ವರ್ಷಗಳ ಹಿಂದೆ ಹೇಗಿತ್ತು ಅನ್ನೋದ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. 1986ರಲ್ಲಿ ಲ್ಯಾಪ್‌ಟಾಪ್‌ಗಳು ಹೇಗಿದ್ದವು ಅನ್ನೋದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಂಟೇಜ್ ಸೋನಿ ಲ್ಯಾಪ್‌ಟಾಪ್‌ಅನ್ನು ಆ ವಿಡಿಯೋದಲ್ಲಿ ತೋರಿಸಲಾಗಿದ್ದು, ಟೆಕ್ ಉತ್ಸಾಹಿಗಳು ಹಳೆಯ ಲ್ಯಾಪ್‌ಟಾಪ್‌ನ ಡಿಸೈನ್‌ಗಳನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಈ ಕ್ಲಿಪ್ ಸಖತ್ ವೈರಲ್ ಆಗಿದೆ. ಆರಂಭದಲ್ಲಿ ಪೋರ್ಟಬಲ್ ಕಂಪ್ಯೂಟರ್ ಯಾವ ರೀತಿ ಇತ್ತು ಅನ್ನೋದರ ಆಕರ್ಷಕ ನೋಟವನ್ನು ಈ ವಿಡಿಯೋ ನೀಡಿದ್ದು ಮಾತ್ರವಲ್ಲದೆ, ತಂತ್ರಜ್ಞಾನ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದಿದೆ ಎನ್ನುವುದರ ಸಣ್ಣ ನೋಟವನ್ನೂ ನೀಡಿದೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸೋನಿ ಲ್ಯಾಪ್‌ಟಾಪ್‌ನ ಮೂಲ ಹಾಗೂ ಆಕರ್ಷ ವೈಶಿಷ್ಟ್ಯಗಳನ್ನು ಬಹಳ ಎಚ್ಚರಿಕೆಯಿಂದ ವೀಕ್ಷಕರಿಗೆ ನೀಡಿದ್ದಾರೆ. ಆ ಸಮಯದಲ್ಲಿ ಪೋರ್ಟಬಲ್ ಕಂಪ್ಯೂಟರ್ ತಂತ್ರಜ್ಞಾನದ ಪರಾಕಷ್ಠೆ ಎನಿಸಿತ್ತು. ಅದರ ಭಾರೀ ವಿನ್ಯಾಸದಿಂದ ಮಾತ್ರವಲ್ಲದೆ, ಏಕವರ್ಣದ ಡಿಸ್ಪ್ಲೇ ಮತ್ತು ಮೂಲ ಇಂಟರ್ಫೇಸ್, ಲ್ಯಾಪ್ಟಾಪ್ ನಾವು ಇಂದು ಬಳಸುವ ಅಲ್ಟ್ರಾ-ತೆಳುವಾದ, ಸ್ಪರ್ಶ-ಪ್ರತಿಕ್ರಿಯಾತ್ಮಕ ಸಾಧನಗಳಿಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ.
₹67,538 ಕೋಟಿ ಮೌಲ್ಯದ ಅಮೆಜಾನ್ ಷೇರು ಮಾರಾಟ ಮಾಡಿದ ಜೆಫ್ ಬೆಜೋಸ್ ಮಾಜಿ ಪತ್ನಿ!
ಇದು ನಿಖರವಾಗಿ ಈ ರೆಟ್ರೊ ಮೋಡಿಯಾಗಿದ್ದು, ನೆಟಿಜನ್‌ಗಳಲ್ಲಿ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ, ಅನೇಕರು ವಿಂಟೇಜ್ ಗ್ಯಾಜೆಟ್‌ಗಳ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಕಂಪ್ಯೂಟಿಂಗ್ ತಂತ್ರಜ್ಞಾನವು ಹೇಗೆ ರೂಪಾಂತರಗೊಂಡಿದೆ ಎಂದೂ ಅಚ್ಚರಿಪಟ್ಟಿದ್ದಾರೆ.
ನಾಲ್ಕು ವರ್ಷದ ಹಿಂದೆ 3 ರೂಪಾಯಿ ಇದ್ದ ಷೇರಿನ ಬೆಲೆ ಇಂದು 1,412 ರೂಪಾಯಿ!
"ಕಂಪ್ಯೂಟರ್ ಕ್ರಾನಿಕಲ್ಸ್ ನನ್ನ ನೆಚ್ಚಿನ ಶೋ. ಅವರು 80 ಮತ್ತು 90 ರ ದಶಕದ ಪೋರ್ಟಬಲ್‌ಗಳು ಮತ್ತು ಪಿಸಿಗಳನ್ನು ಡಾಕ್ಯುಮೆಂಟ್ ಮಾಡುವ ಟಿವಿ ಕಾರ್ಯಕ್ರಮವನ್ನು ಹೊಂದಿದ್ದರು. ಇದು ಆಕರ್ಷಕವಾಗಿದೆ, ನಾನು ಅದನ್ನು ನೋಡಲು ಯಾರನ್ನಾದರೂ ಪ್ರೋತ್ಸಾಹಿಸುತ್ತೇನೆ. ನಾವು ಇಲ್ಲಿಯವರೆಗೆ ಬಂದಿದ್ದೇವೆ ಮತ್ತು ಕಿಲೋಬೈಟ್‌ಗಳು ವೇಗವಾಗಿ ಟೆರಾಬೈಟ್‌ಗಳಾಗಿ ಮಾರ್ಪಟ್ಟಿವೆ. ಯಾರಾದರೂ ಕನಸು ಕಂಡಿದ್ದಕ್ಕಿಂತ ವೇಗಾವಾಗಿ ಇದು ಆಗಿದೆ' ಎಂದು ಯೂಸರ್ ಒಬ್ಬರು ಬರೆದಿದ್ದಾರೆ. ಮತ್ತೊಬ್ಬ ಯೂಸರ್, ತಂತ್ರಜ್ಞಾನ ನಿಜಕ್ಕೂ ಅತ್ಯಂತ ವೇಗವಾಗಿ ಬೆಳೆದಿದೆ ಎಂದು ಬರೆದಿದ್ದಾರೆ.
This Sony laptop from 1986. Technology is advancing at a rapid pace. pic.twitter.com/uIfDXKJxrj
— Ian Miles Cheong (@stillgray)