ಶಾಪಿಂಗ್ ನಲ್ಲಿ ಮೊಬೈಲ್ ಹೆಚ್ಚು ಬಳಸ್ತೀರಾ?ಹಾಗಾದ್ರೆ ನಿಮ್ಮ ಜೇಬು ಖಾಲಿ!

By Web DeskFirst Published May 19, 2019, 5:10 PM IST
Highlights

ಶಾಪಿಂಗ್ ಮಾಡುತ್ತಾ ಮೊಬೈಲ್ ಬಳಕೆ ಮಾಡಿದ್ರೆ ಒಂದು ಕ್ಷಣ ಏನು ತೆಗೆದುಕೊಳ್ಳಲು ಬಂದಿದ್ದೇವೆ ಎನ್ನುವುದನ್ನೇ ಮರೆತು ಬೇರೊಂದು ವಸ್ತುವನ್ನು ಕೊಂಡುಕೊಂಡು ಹೋಗಿರುತ್ತೇವೆ. ಬಹಶಃ ಇದು ಎಲ್ಲರ ಅನುಭವಕ್ಕೂ ಬಂದಿರುತ್ತದೆ. ಹೀಗಾದರೆ ಏನೂ ತೊಂದರೆ ಇಲ್ಲ, ಮತ್ತೆ ನೆನಪು ಮಾಡಿಕೊಂಡು ಖರೀದಿ ಮಾಡಬಹುದು. ಆದರೆ ಈ ಹವ್ಯಾಸದಿಂದ ಹೆಚ್ಚು ಹಣ ಕೂಡ ಖರ್ಚಾಗುತ್ತೆ ಅಂತ ಸಮೀಕ್ಷೆಯೊಂದು ಹೇಳಿದೆ.

ಕೆಲಸ ಮಾಡುತ್ತಾ ಮೊಬೈಲ್‌ನಲ್ಲಿ ಚಾಟ್ ಮಾಡಿದರೆ, ಅಥವಾ ಇ-ಮೇಲ್‌ಗಳನ್ನು ಚೆಕ್ ಮಾಡಿದರೆ, ಹಾಡು ಕೇಳುತ್ತಿದ್ದರೆ ಅಥವಾ ಏನನ್ನಾದರೂ ಗೂಗಲ್‌ನಲ್ಲಿ ಹುಡುಕುತ್ತಿದ್ದರೆ ಗಮನ ಬೇರೆಡೆಗೆ ಹೋಗುತ್ತದೆ. ಇಲ್ಲಿಗೆ ಯಾವ ಕೆಲಸಕ್ಕೆ ಬಂದಿದ್ದೇವೆ ಎನ್ನುವುದೇ ಮರೆತು ಹೋಗುತ್ತದೆ ಎಂದು ಕೆಲ ಸಮೀಕ್ಷೆಗಳು ಹೇಳಿವೆ.

ಈ ಹಿನ್ನೆಲೆಯಲ್ಲಿ ಫೈರ್‌ಫೀಲ್ಡ್ ಯುನಿವರ್ಸಿಟಿ ಸಂಶೋಧಕರು ವಸ್ತುಗಳ ಖರೀದಿ ಸಂದರ್ಭದಲ್ಲಿ ಗ್ರಾಹಕರ ಗಮನ ಎಲ್ಲಿರುತ್ತದೆ ಎಂದು ಸಮೀಕ್ಷೆ ನಡೆಸಿದ್ದಾರೆ. 230  ಜನರನ್ನು ಸಮೀಕ್ಷೆಗೆ ಈ ಒಳಪಡಿಸಲಾಗಿದ್ದು, ಅವರಲ್ಲಿ ಕೆಲವರಿಗೆ ಮೊಬೈಲ್‌ನಿಂದ ದೂರವಿರಲು, ಮತ್ತೆ ಕೆಲವರಿಗೆ ಆಗಾಗ ಮಾತ್ರ ಬಳಕೆ ಮಾಡಲು, ಇನ್ನೂ ಕೆಲವರಿಗೆ ಮೊಬೈಲ್ ಬಳಕೆ ಮಾಡುತ್ತಲೇ ಶಾಪಿಂಗ್ ಮಾಡಲು ಹೇಳಲಾಗಿತ್ತು.

ಕೊನೆಯಲ್ಲಿ ಮೂರೂ ಗುಂಪು ಖರೀದಿಯನ್ನು ಹೋಲಿಕೆ ಮಾಡಿದಾಗ ಹೆಚ್ಚು ಮೊಬೈಲ್ ಬಳಕೆದಾರರು ಬೇಡವಾಗಿದ್ದನ್ನೆಲ್ಲಾ ಖರೀದಿ ಮಾಡಿದ್ದರು. ಅಲ್ಲದೆ ಈ ಗುಂಪಿನಲ್ಲಿದ್ದ ಶೇ.93 ರಷ್ಟು ಗ್ರಾಹಕರ ಗಮನ ಬೇರೆಡೆಯೇ ಇತ್ತು. ಹಾಗೇ ಬೇಕು ಬೇಡವಾಗಿದ್ದನ್ನೆಲ್ಲಾ ಖರೀದಿಸಿ ಪಾಕೆಟ್ ಖಾಲಿ ಮಾಡಿಕೊಂಡಿದ್ದರು. ಇನ್ನು ಮೊಬೈಲ್ ಬಳಕೆ ಮಾಡದವರ ಗುಂಪು ಯೋಜನಾ ಬದ್ಧವಾಗಿ ವಸ್ತುಗಳನ್ನು ಕೊಂಡುಕೊಂಡಿತ್ತು. ಆಗಾಗ ಮೊಬೈಲ್ ಬಳಸಿದವರ ಗಮನ ಕೆಲ ಕಾಲ ವಿಕೇಂದ್ರೀಕರಣಗೊಳ್ಳುತ್ತಿತ್ತು ಎಂದು ತಿಳಿದುಬಂದಿದೆ. 

click me!