ಮೈಸೂರಿನಲ್ಲಿ ಬಿಗ್ ಟೆಕ್ ಶೋ.. ಹೊಸ ಆಲೋಚನೆಗಳ ಭಂಡಾರ!

By Suvarna News  |  First Published Oct 25, 2021, 12:45 AM IST

* ನವೋದ್ಯಮಗಳಿಗೆ ಹೂಡಿಕೆ ಉತ್ತೇಜಿಸಲು ‘ದಿ ಬಿಗ್ ಟೆಕ್ ಶೋ
* ಮೈಸೂರಿನಲ್ಲಿ ಒಂದು ದಿನದ ಕಾರ್ಯಕ್ರಮ 
* ಕೇಂದ್ರ  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಉದ್ಘಾಟನೆ 


ಮೈಸೂರು(ಅ. 25)  ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ (Mysuru) ಸೋಮವಾರದಿಂದ ತಂತ್ರಜ್ಞಾನ (Technology) ಉದ್ದಿಮೆಗೆ ಸಂಬಂಧಿಸಿದ ‘ದಿ ಬಿಗ್ ಟೆಕ್ ಷೋ ಮೈಸೂರು’ ಕಾರ್ಯಕ್ರಮ ಆರಂಭವಾಗಲಿದೆ.

ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ (ದ ರಾಡಿಸನ್ ಬ್ಲೂ ಪ್ಲ್ಯಾಜಾ ಹೋಟೆಲ್ ನಲ್ಲಿ) ನಡೆಯುವ ಒಂದು ದಿನದ (ಬೆಳಿಗ್ಗೆ 10ರಿಂದ ಸಂಜೆ 4;30ರವರೆಗೆ) ಕಾರ್ಯಕ್ರಮವನ್ನು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)  ಅವರು ವರ್ಚ್ಯುಯಲ್ ಆಗಿ  ಉದ್ಘಾಟಿಸಲಿದ್ದಾರೆ.

Latest Videos

undefined

ರಾಜ್ಯದ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ (Dr. CN Ashwath Narayan) ಅವರು ಸರ್ಕಾರದ ಕಾರ್ಯಕ್ರಮಗಳು ಹಾಗೂ ಉಪಕ್ರಮಗಳಾದ ‘ಬಿಯಾಂಡ್ ಬೆಂಗಳೂರು’, ‘ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್-ಕೆಡಿಇಎಂ’, ‘ಮೇಕ್ ಇನ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’ ಮತ್ತು ‘ಸ್ಟಾರ್ಟ್ಅಪ್ ಇಂಡಿಯಾ’ಗಳ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ಉದ್ದಿಮೆಗಳಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲುವರು.

ತನ್ನದೆ ಹೊಸ ಸಾಮಾಜಿಕ ತಾಣ ಆರಂಭಿಸಿದ ಟ್ರಂಪ್

ಕಾರ್ಯಕ್ರಮದ ಭಾಗವಾಗಿ ಆಯ್ದ ಕಂಪನಿಗಳನ್ನು ಹಾಗೂ ನಗರ ಮೂಲದ ಉದ್ಯಮ ಪ್ರವರ್ತಕರನ್ನು ಸನ್ಮಾನಿಸಲಾಗುತ್ತದೆ. ಜೊತೆಗೆ, ಕೆಡಿಇಎಂ ಹಾಗೂ ಭೇರುಂಡ ಫೌಂಡೇಷನ್, ಕೆಡಿಇಎಂ ಹಾಗೂ ಐಸ್ಯಾಕ್ ನಡುವೆ ಒಡಂಬಡಿಕೆಗಳು ಏರ್ಪಡಲಿವೆ. ಕೆಡಿಇಎಂ ಮೈಸೂರು ಶಾಖೆಯು ಸೈಬರ್ ಭದ್ರತೆಗೆ ಸಂಬಂಧಿಸಿದ ಉತ್ಕೃಷ್ಠತಾ ಕೇಂದ್ರದ ಸ್ಥಾಪನೆಗಾಗಿ ಪ್ರಸ್ತಾವ ಸಲ್ಲಿಸಲಿದೆ. 

ನಗರವು ಇಡೀ ದೇಶದಲ್ಲೇ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (STPI) ಕೇಂದ್ರವಿರುವ ರಾಜಧಾನಿಯಲ್ಲದ ಮೊತ್ತಮೊದಲ ನಗರವಾಗಿದೆ. ಜೊತೆಗೆ, ಇದು ರಾಜ್ಯದಲ್ಲಿ ಸಾಫ್ಟ್ ವೇರ್ ರಫ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದು, ಮಾಹಿತಿ ತಂತ್ರಜ್ಞಾನ ವಲಯವಾಗಿ ವಿಕಾಸಗೊಳ್ಳುತ್ತಿದೆ. ಪ್ರಮುಖ ಶೈಕ್ಷಣಿಕ ಕೇಂದ್ರವೂ ಆಗಿರುವ ನಗರವು ಎಲೆಕ್ಟ್ರಾನಿಕ್ ವ್ಯವಸ್ಥೆ ವಿನ್ಯಾಸ ಹಾಗೂ ತಯಾರಿಕೆಯಲ್ಲೂ (ಇ.ಎಸ್.ಡಿ.ಎಂ.) ದೃಢವಾದ ಹೆಜ್ಜೆಗಳನ್ನು ಊರಿ ಮುನ್ನಡೆಯುತ್ತಿದೆ. ಈ ಅಂಶಗಳ ಹಿನ್ನೆಲೆಯಲ್ಲಿ ಸೋಮವಾರ ನಡೆಯುವ ಕಾರ್ಯಕ್ರಮವು ಗಮನಾರ್ಹವಾಗಿದೆ.

ಸಿಐಐ ಮೈಸೂರು ಅಧ್ಯಕ್ಷ ಹಾಗೂ ಎನ್.ಆರ್.ಗ್ರೂಪ್ ನಿರ್ದೇಶಕ ಪವನ್ ರಂಗ, ಐಬಿಎಂ ಇಂಡಿಯಾ/ದಕ್ಷಿಣ ಏಷ್ಯಾ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ಬಯೋಕಾನ್ ಸ್ಥಾಪಕಿ ಕಿರಣ್ ಮಜುಂದಾರ್ ಷಾ, ಸಂಸದ ಪ್ರತಾಪ್ ಸಿಂಹ, ರಾಜ್ಯ ನವೋದ್ಯಮ ದೂರದರ್ಶಿತ್ವ ಮಂಡಳಿ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಎಲೆಕ್ಟ್ರಾನಿಕ್ಸ್ ಮತ್ತು ಐಟಿ/ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ನ್ಯಾಸ್ ಕಾಂ ಅಧ್ಯಕ್ಷ ದೇಬ್ ಜಾನಿ ಘೋಷ್, ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು ಅವರು ಪಾಲ್ಗೊಳ್ಳುವರು.


  

 

click me!