ನವದೆಹಲಿ(ಜ.01): ಇಸ್ರೋದ ಚಂದ್ರಯಾನ-3 ಯೋಜನೆಗೆ ಕೇಂದ್ರ ಸರ್ಕಾರ ಅಧಿಕೃತ ಒಪ್ಪಿಗೆ ನೀಡಿದ್ದು, 2021ರಲ್ಲಿ ಮತ್ತೆ ಚಂದ್ರನೆಡೆಗೆ ನೌಕೆಯನ್ನು ಕಳುಹಿಸಲಾಗುವುದು.
ಈ ಕುರಿತು ಮಾಹಿತಿ ನೀಡಿರುವ ಇಸ್ರೋ ಮುಖ್ಯಸ್ಥ ಕೆ. ಸಿವನ್, 2021ರಲ್ಲಿ ಚಂದ್ರಯಾನ-3 ಯೋಜನೆ ಮೂಲಕ ಮತ್ತೆ ಚಂದ್ರನ ನೆಲ ತಲುಪಲಾಗುವುದು ಎಂದು ಭರವಸೆ ನೀಡಿದರು.
ಚಂದ್ರಯಾನ-2 ಯೋಜನೆಯ ನಕಾರಾತ್ಮಕ ಅಂಶಗಳಿಂದ ಪಾಠ ಕಲಿತಿದ್ದು, ಈ ಬಾರಿ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿಯೇ ಸಿದ್ಧ ಎಂದು ಸಿವನ್ ಸ್ಪಷ್ಟಪಡಿಸಿದರು.
ನಾವು ವಚನಬದ್ಧ: ಚಂದ್ರಯಾನ-3 ಯೋಜನೆಗೆ ಇಸ್ರೋ ಸಿದ್ಧ!
ಚಂದ್ರಯಾನ-2 ಯೋಜನೆ ವೈಫಲ್ಯವಲ್ಲ ಎಂದಿರುವ ಸಿವನ್, ಸಾಫ್ಟ್ ಲ್ಯಾಂಡಿಂಗ್ ಕುರಿತು ಚಂದ್ರಯಾನ-2 ನಮಗೆ ಮಹತ್ವದ ಪಾಠ ಕಲಿಸಿದೆ ಎಂದು ಹೇಳಿದರು. ಚಂದ್ರಯಾನ-2ನ ಆರ್ಬಿಟರ್ ನೌಕೆ ಚಂದ್ರನ ಅಧ್ಯಯನ ಮುಂದುವರೆಸಿದೆ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ 2020ರಲ್ಲಿ ಇಸ್ರೋ ಒಟ್ಟು 25 ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳಲಿದ್ದು, ಚಂದ್ರಯಾನ-3 ಯೋಜನೆಯನ್ನು ಮುಂದಿನ ವರ್ಷ ಅಂದರೆ 2021ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಿವನ್ ಸ್ಪಷ್ಟಪಡಿಸಿದರು.
ಗಗನಯಾನ್‌ಗೆ ಸಿದ್ಧತೆ:
ಇನ್ನು ಇಸ್ರೋದ ಮತ್ತೊಂದು ಮಹತ್ವದ ಯೋಜನೆಗಳಲ್ಲಿ ಒಂದಾದ ಗಗನಯಾನ್‌ಗೆ ಸಂಸ್ಥೆ ಸಿದ್ಧತೆ ಪೂರ್ಣಗೊಳಿಸಿದ್ದು, ನಾಲ್ವರು ಗಗನಯಾತ್ರಿಗಳಿಗೆ ಭಾರತೀಯ ವಾಯುಸೇನೆಯಿಂದ ರಷ್ಯಾದಲ್ಲಿ ತರಬೇತಿ ನೀಡಲಾಗುವುದು.
ಈ ಜನವರಿಯಿಂದಲೇ ಆಯ್ದ ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ಪ್ರಾರಂಭಿಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ಸ್ಪಷ್ಟಪಡಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.