ನೋಡೋದಿಕ್ಕೆ ನಾರ್ಮಲ್‌ ಸ್ಟೈಲಿಷ್‌ ವಾಚ್, ಆದ್ರೆ ಇದು ಹೈಬ್ರಿಡ್‌ ಸ್ಮಾರ್ಟ್‌ವಾಚ್‌!

By Suvarna News  |  First Published Dec 29, 2019, 2:13 PM IST
  • ವಾಚ್‌ನಂತೆ ಇರುವ ಫಿಟ್‌ನೆಸ್‌ ಬ್ಯಾಂಡ್‌ ಬಯಸುವವರಿಗೆ ಇದು ಬೆಸ್ಟ್‌
  • ಫಿಟ್‌ನೆಸ್‌ ಬ್ಯಾಂಡ್‌ನಂತೆ ಕಾಣದ ಸ್ಮಾರ್ಟ್‌ವಾಚ್‌ ಸೊನಾಟ ಸ್ಟ್ರೈಡ್‌

ಸರಿಯಾದ ಟೈಮೂ ಹೇಳಬೇಕು, ನಡೆದ ಸ್ಟೆಪ್ಪುಗಳ ಲೆಕ್ಕವನ್ನೂ ಕರೆಕ್ಟಾಗಿ ಹೇಳಬೇಕು ಅನ್ನುವುದಕ್ಕಾಗಿಯೇ ಸ್ಮಾರ್ಟ್‌ವಾಚ್‌ಗಳು ಬಂದವು. ಒಂದು ಕಾಲದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದ ಈ ಫಿಟ್‌ನೆಸ್‌ ಬ್ಯಾಂಡ್‌ಗಳು ಎಲ್ಲಾ ಕಡೆ ಇರುವ ದೇವರಂತೆಯೇ ಆಗಿಹೋಗಿದೆ. ಎಲ್ಲರ ಕೈಯಲ್ಲಿ ಒಂದೇ ಸ್ಟೈಲಿನ ಸ್ಮಾರ್ಟ್‌ವಾಚ್‌ಗಳು ಕಾಣಿಸುತ್ತಿರುವ ಈ ಸಂದರ್ಭದಲ್ಲಿ ಟೈಟಾನ್‌ ಕಂಪನಿ ಹೈಬ್ರಿಡ್‌ ಸ್ಮಾರ್ಟ್‌ವಾಚ್‌ ರೆಡಿ ಮಾಡಿದೆ. ಅದರ ಹೆಸರು ಸೊನಾಟ ಸ್ಟ್ರೈಡ್‌.

ಈ ವಾಚ್‌ನಲ್ಲಿ ಎರಡು ಮಾದರಿಗಳಿವೆ. ಸೊನಾಟ ಸ್ಟ್ರೈಡ್‌ ಮತ್ತು ಸೊನಾಟ ಸ್ಟ್ರೈಡ್‌ ಪ್ರೋ. ನಮಗೆ ರಿವ್ಯೂಗೆ ಸಿಕ್ಕಿದ್ದು ಸೊನಾಟ ಸ್ಟ್ರೈಡ್‌ ಪ್ರೋ. ಮೇಲ್ನೋಟಕ್ಕೆ ಇದು ನಾರ್ಮಲ್‌ ಸ್ಟೈಲಿಷ್‌ ವಾಚ್‌ನಂತೆಯೇ ಕಾಣಿಸುತ್ತದೆ. ಅದೇ ಈ ವಾಚ್‌ನ ವಿಶೇಷತೆ ಮತ್ತು ಹೆಗ್ಗಳಿಕೆ. ಈ ವಾಚ್‌ನಲ್ಲಿ ಎರಡು ವಿಭಾಗಗಳಿವೆ. ಒಂದು ಟೈಮು ತೋರಿಸುತ್ತದೆ. ಇನ್ನೊಂದು ಸ್ಮಾರ್ಟ್‌ವಾಚ್‌ಗೆ ಸಂಬಂಧಿಸಿದ್ದು. ಹಾಗಂತ ಅದು ಸ್ಟೆಪ್ಪುಗಳ ಅಂಕಿಸಂಖ್ಯೆ ತೋರಿಸಲ್ಲ. ಹಾಗಾಗಿಯೇ ಇದೊಂದು ಫಿಟ್‌ನೆಸ್‌ ಬ್ಯಾಂಡ್‌ ಅಂತ ಅನ್ನಿಸಲ್ಲ.

Latest Videos

undefined

ಇದನ್ನೂ ಓದಿ | ಹ್ಯಾಪಿ ನ್ಯೂ ಇಯರ್ ಕಣೋ! ಹೊಸ ವರ್ಷಕ್ಕೆ ಹೊಸ ಆಫರ್ ಪ್ರಕಟಿಸಿದ ಜಿಯೋ...

ವಾಚ್‌ ಕೈಗೆ ಕಟ್ಟಿಕೊಂಡು ಮೊದಲು ಮಾಡಬೇಕಾದ ಕೆಲಸ ಸೊನಾಟ ಸ್ಟ್ರೈಡ್‌ ಆ್ಯಪ್‌ ಡೌನ್‌ಲೋಡ್‌ ಮಾಡುವುದು. ಆ್ಯಪ್‌ ಮತ್ತು ವಾಚ್‌ ಕನೆಕ್ಟ್ ಮಾಡಿದ ತಕ್ಷಣ ನೀವು ಎಷ್ಟು ನಡೆದಿದ್ದೀರಿ ಎಂಬ ಲೆಕ್ಕ ಆ್ಯಪ್‌ ನೆನಪಿಟ್ಟುಕೊಳ್ಳುತ್ತದೆ. ಇದನ್ನೇ ಕಟ್ಟಿಕೊಂಡು ಮಲಗಿದರೆ ನಿಮ್ಮ ನಿದ್ದೆಯ ಲೆಕ್ಕಾಚಾರ ಹೇಳಿ ನಿಮ್ಮ ಕಷ್ಟಸುಖವನ್ನು ಲೆಕ್ಕದಲ್ಲಿ ಹೇಳುತ್ತದೆ. ಇಂತಿಷ್ಟುನಿದ್ದೆ ಮಾಡಿದರೆ ಆರಾಮಾಗಿದ್ದೀರಿ, ಇಲ್ಲವೇ ಇನ್ನೊಂಚೂರು ಜಾಸ್ತಿ ನಿದ್ದೆ ಬೇಕು ಎಂಬುದು ಹೇಳುವುದು ಇದರ ಒಳ್ಳೆಯ ಕೆಲಸ.

ಈ ಸ್ಮಾರ್ಟ್‌ವಾಚ್‌ನಲ್ಲೇ ಕ್ಯಾಮೆರಾ ಹ್ಯಾಂಡಲ್‌ ಮಾಡಬಹುದು. ಫೋಟೋ ಕ್ಲಿಕ್‌ ಮಾಡುವ ಸೌಲಭ್ಯವೂ ಉಂಟು. ಆದರೆ ಅಷ್ಟೊಂದು ಸಮರ್ಪಕವಾಗಿಲ್ಲ. ಚೂರು ಸ್ಲೋ ಇದೆ. ವೇಗದ ಬದುಕಿಗೆ ಬದಲಾದ ನಾವು ನಿಧಾನವನ್ನು ಸಹಿಸಲಾರೆವು. ಫೋನೆತ್ತಿಕೊಂಡು ಫೋಟೋ ತೆಗೆಯುವುದೇ ಲೇಸು ಎಂದುಕೊಂಡರೆ ಅಚ್ಚರಿಯಿಲ್ಲ. ಇದರ ಒಳ್ಳೆಯ ಗುಣವೆಂದರೆ ಒಂದು ವರ್ಷಗಳ ಕಾಲ ರಿಚಾರ್ಜ್ ಮಾಡುವ ಹಾಗಿಲ್ಲ. ಒಂದು ವರ್ಷ ಬಾಳಿಕೆ ಬರುವ ಬ್ಯಾಟರಿ ಹಾಕಿದ್ದೇವೆ ಎನ್ನುತ್ತಿದೆ ಸೊನಾಟ. ಅದನ್ನು ಚೆಕ್‌ ಮಾಡಲು ಒಂದು ವರ್ಷ ಆಗಬೇಕು. ಕಾಯದೇ ವಿಧಿಯಿಲ್ಲ.

ಇದನ್ನೂ ಓದಿ |ಗೂಗಲ್ ಪೇಯಿಂದ ಬಳಕೆದಾರರಿಗೆ ಇಂಪಾರ್ಟೆಂಟ್ ನೋಟ್! ಮಾಡ್ಬೇಡಿ ಇಗ್ನೋರ್...

ಫೋನ್‌ ಬಂದರೆ ಈ ವಾಚ್‌ ವೈಬ್ರೇಟ್‌ ಆಗಿ ಡಯಲ್‌ನಲ್ಲಿರುವ ಮುಳ್ಳು ಫೋನ್‌ ಬರುತ್ತಿದೆ ಎಂದು ತೋರಿಸುತ್ತದೆ. ಅಲ್ಲಿಗೆ ನೀವು ಫೋನ್‌ ಎತ್ತಿಕೊಳ್ಳಲು ಸಿದ್ಧರಾಗಬೇಕು ಅಂತರ್ಥ. ನೋಡಲು ಚೆಂದ ಕಾಣುವ ಈ ವಾಚ್‌ ಅಂಥಾ ದುಬಾರಿಯೇನಲ್ಲ. ಆದರೆ ಫಿಟ್‌ನೆಸ್‌ ಬ್ಯಾಂಡ್‌ ಥರ ಇಲ್ಲ ಅನ್ನುವುದೇ ಇದರ ಪ್ಲಸ್ಸು ಅಥವಾ ಮೈನಸ್ಸು. ಸ್ಮಾರ್ಟ್‌ವಾಚ್‌ ಅಥವಾ ಫಿಟ್‌ನೆಸ್‌ ಬ್ಯಾಂಡ್‌ ಒಂದು ಚೆಂದದ ವಾಚ್‌ ಥರ ಮಾತ್ರ ಕಾಣಬೇಕು ಅನ್ನುವವರಿಗೆ ಇದು ಹೇಳಿಮಾಡಿಸಿದ್ದು. ಇದರ ಬೆಲೆ ರು.3495.
 

click me!