ನಕಲಿ ಖಾತೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಟ್ವೀಟರ್ ಒಪ್ಪಂದ ಇಲ್ಲ: ಎಲಾನ್ ಮಸ್ಕ್

By Suvarna News  |  First Published May 17, 2022, 7:41 PM IST

Elon Musk Latest News: ಟ್ವಿಟರ್‌ನ ಎಸ್‌ಇಸಿ ಫೈಲಿಂಗ್‌ಗಳು ನಿಖರವಾಗಿರುವುದರ ಮೇಲೆ ಅವರ ಒಪ್ಪಂದ ಆಧರಿಸಿದೆ ಎಂದು ಟೆಸ್ಲಾ ಸಿಇಓ ಎಲಾನ್ ಮಸ್ಕ್ ಹೇಳಿದ್ದಾರೆ


Elon Musk Latest News: ಮೈಕ್ರೋ ಬ್ಲಾಗಿಂಗ್‌ ಪ್ಲಾಟಫಾರ್ಮ್‌ ಟ್ವೀಟರ್‌ ಸ್ಪ್ಯಾಮ್ ಖಾತೆಗಳ ಬಗ್ಗೆ ಸ್ಪಷ್ಟತೆ ಪಡೆಯದೆ, ಒಪ್ಪಂದಕ್ಕೆ ಮುಂದಾಗುವುದಿಲ್ಲ ಎಂದು  ಬಿಲಿಯನೇರ್ ಎಲಾನ್ ಮಸ್ಕ್ ಹೇಳಿದ್ದಾರೆ.  ಹೀಗಾಗಿ ಎಲಾನ್‌ ಮಸ್ಕ್‌ ಟ್ವೀಟರ್‌ ಖರೀದಿಯಲ್ಲಿ ಮತ್ತಷ್ಟು ಗೊಂದಲಗಳು ಸೃಷ್ಟಿಯಾಗಿವೆ. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ಮುಖ್ಯಸ್ಥ ಮಸ್ಕ್‌ರನ್ನು ಫೋರ್ಬ್ಸ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಪಟ್ಟಿಮಾಡಿದೆ. ಮಸ್ಕ್ ಸುಮಾರು $230 ಬಿಲಿಯನ್ (ಸುಮಾರು ರೂ. 17,87,479 ಕೋಟಿ) ಸಂಪತ್ತು‌ ಹೊಂದಿದ್ದಾರೆ. ಇದರ ಬಹುಭಾಗ ಟೆಸ್ಲಾ ಸ್ಟಾಕ್‌ನಲ್ಲಿದೆ. 

ಮಸ್ಕ್ ಟ್ವಿಟರ್  ಖರೀದಿಸಲು ಬಯಸುತ್ತಾರೆ ಎಂಬ ಸುದ್ದಿಯೊಂದಿಗೆ ಏಪ್ರಿಲ್‌ನಲ್ಲಿ ಅನೇಕ ಹೂಡಿಕೆದಾರರನ್ನು ಆಶ್ಚರ್ಯಗೊಳಿಸಿದ್ದರು. ಈ ಬಳಿಕ ಸಾಮಾಜಿಕ ಜಾಲತಾಣ ಕಂಪನಿ ಟ್ವೀಟರ್‌ ಸುದ್ದಿಯಲ್ಲಿದೆ. ಅಲ್ಲದೇ ಕಂಪನಿಯಲ್ಲಿ ಪ್ರಮುಖ ಉದ್ಯೋಗಿಗಳ ವಜಾ ಸೇರಿದಂತೆ ಸಾಕಷ್ಟು ಬದಲಾವಣೆಗಳಾಗಿವೆ ಎಂದು ವರದಿಗಳು ತಿಳಿಸಿವೆ. 

Tap to resize

Latest Videos

ಇದನ್ನೂ  ಓದಿ: ಪರಾಗ್ ಅಗರವಾಲ್ ಟ್ವಿಟ್ಸ್‌ಗೆ ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ ಎಲಾನ್ ಮಸ್ಕ್: ನೆಟ್ಟಿಗರ ರಿಯಾಕ್ಷನ್‌ ಹೇಗಿದೆ ನೋಡಿ!

ಆದರೆ ನಕಲಿ ಖಾತೆಗಳ ಸಂಖ್ಯೆ ಅಥವಾ "ಬಾಟ್‌ಗಳ" ಸಾಮಾಜಿಕ ಮಾಧ್ಯಮ ಕಂಪನಿಯ ಅಂದಾಜುಗಳ ಕುರಿತು ಪ್ರಶ್ನೆಗಳು ಬಾಕಿ ಉಳಿದಿರುವುದರಿಂದ ಮಸ್ಕ್‌ರ ಟ್ವಿಟರ್‌ ಖರೀದಿಸುವ $44 ಶತಕೋಟಿ (ಸುಮಾರು ರೂ. 3,41,910 ಕೋಟಿ) ಬಿಡ್ ಈಗ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಇತ್ತೀಚೆಗೆಈ ಬಗ್ಗೆ ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದರು. ಈಗ ಹೊಸ ಟ್ವೀಟ್‌ವೊಂದರಲ್ಲಿ ಎಲಾನ್‌ ಮಸ್ಕ್‌ ಸ್ಪ್ಯಾಮ್ ಖಾತೆಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಟ್ವಿಟರ್ ಒಪ್ಪಂದ ಇಲ್ಲ ಎಂದು ಹೇಳಿದ್ದಾರೆ. 

 

20% fake/spam accounts, while 4 times what Twitter claims, could be *much* higher.

My offer was based on Twitter’s SEC filings being accurate.

Yesterday, Twitter’s CEO publicly refused to show proof of <5%.

This deal cannot move forward until he does.

— Elon Musk (@elonmusk)

 

"ನಿನ್ನೆ, ಟ್ವೀಟರ್‌ನ ಸಿಇಓ  ಶೇಕಡಾ 5ಕ್ಕಿಂ ಕಡಿಮೆ ನಕಲಿ ಖಾತೆಗಳಿರುವುದರ ಬಗ್ಗೆ ಪುರಾವೆಗಳನ್ನು ತೋರಿಸಲು ಸಾರ್ವಜನಿಕವಾಗಿ ನಿರಾಕರಿಸಿದರು," ಎಂದು ಸಾಮಾಜಿಕ ನೆಟ್ವರ್ಕ್ನಲ್ಲಿ ಸುಮಾರು 94 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮಸ್ಕ್ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಅವರು ಮಾಹಿತಿ ಬಹಿರಂಗ ಮಾಡುವವರೆಗೂ ಈ ಒಪ್ಪಂದವು ಮುಂದುವರೆಯಲು ಸಾಧ್ಯವಿಲ್ಲ ಎಂದು ಮಸ್ಕ್‌ ಟ್ವೀಟ್‌ ಮಾಡಿದ್ದಾರೆ

ಫೇಕ್‌ ಖಾತೆಗಳ ಮೇಲೆ ಕ್ರಮ: ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಪರಾಗ್ ಅಗರವಾಲ್  ಪ್ಲಾಟ್‌ಫಾರ್ಮ್ ಪ್ರತಿದಿನ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಬೋಗಸ್ ಖಾತೆಗಳನ್ನು ಅಮಾನತುಗೊಳಿಸುತ್ತದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಅವುಗಳು ಕಾಣುವ ಮೊದಲು ಮತ್ತು ಖಾತೆಗಳು ಮನುಷ್ಯರಿಂದ ನಿರ್ವಹಿಸಲ್ಪಡುತ್ತಿವೆ, ಸಾಫ್ಟ್‌ವೇರ್‌ನಿಂದ ಅಲ್ಲ ಎಂದು ಖಚಿತಪಡಿಸಿಕೊಳ್ಳಲು ತಪಾಸಣೆ ವಿಫಲವಾದ ಲಕ್ಷಾಂತರ ಖಾತೆಗಳು ವಾರದಲ್ಲಿ ಲಾಕ್ ಮಾಡಲಾಗುತ್ತದೆ ಎಂದು ಪರಾಗ್ ಹೇಳಿದ್ದಾರೆ.

ಟ್ವಿಟರ್‌ನಲ್ಲಿ ಯಾವುದೇ ದಿನದಲ್ಲಿ ಸಕ್ರಿಯವಾಗಿರುವ ಐದು ಪ್ರತಿಶತಕ್ಕಿಂತ ಕಡಿಮೆ ಖಾತೆಗಳು ಸ್ಪ್ಯಾಮ್ ಎಂದು ಆಂತರಿಕ ಕ್ರಮಗಳು ತೋರಿಸುತ್ತವೆ, ಆದರೆ ಬಳಕೆದಾರರ ಡೇಟಾವನ್ನು ಖಾಸಗಿಯಾಗಿ ಇರಿಸುವ ಅಗತ್ಯತೆಯಿಂದಾಗಿ ಆ ವಿಶ್ಲೇಷಣೆಯನ್ನು ಬಾಹ್ಯವಾಗಿ ನೀಡಲು ಸಾಧ್ಯವಿಲ್ಲ ಎಂದು ಅಗರವಾಲ್ ತಿಳಿಸಿದ್ದರು.

ಬಾಟ್‌ಗಳು ಟ್ವಿಟ್ಟರನ್ನು ಆವರಿಸುತ್ತಿವೆ ಮತ್ತು ಅವರು ಪ್ಲಾಟ್‌ಫಾರ್ಮ್ ಪಡೆದುಕೊಂಡರೆ ಅವುಗಳನ್ನು ತೊಡೆದುಹಾಕಲು ಆದ್ಯತೆ ನೀಡುವುದಾಗಿ ಹೇಳಿರುವ ಮಸ್ಕ್, ಅಗರವಾಲ್ ಅವರ ಟ್ವೀಟ್‌ಗೆ ಪೂಪ್ ಎಮೋಜಿಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಟ್ವಿಟರ್‌ನಿಷೇಧ ಹಿಂಪಡೆಯುತ್ತೇನೆ ಎಂದ ಟೆಸ್ಲಾ ಸಿಇಓ ಎಲಾನ್ ಮಸ್ಕ್

ಟ್ವಿಟರ್ ಬಳಕೆದಾರರು ನಿಜವಾದ ಜನರು ಎಂದು ಸಾಬೀತುಪಡಿಸುವ ಅಗತ್ಯತೆಯ ಬಗ್ಗೆ ಹೇಳಿದೆ ಮಸ್ಕ್ " ಜಾಹೀರಾತುದಾರರು ತಮ್ಮ ಹಣಕ್ಕಾಗಿ ಏನು ಪಡೆಯುತ್ತಿದ್ದಾರೆಂದು ಹೇಗೆ ತಿಳಿಯುತ್ತಾರೆ?" ಎಂದು ಟ್ವೀಟ್ ಮಾಡಿದ್ದಾರೆ. "ಇದು ಟ್ವೀಟರ್‌ನ ಆರ್ಥಿಕ ಆರೋಗ್ಯಕ್ಕೆ ಮೂಲಭೂತವಾಗಿದೆ." ಎಂದು ಅವರು ಹೇಳಿದ್ದಾರೆ. 

ಎಷ್ಟು ಖಾತೆಗಳು ಬಾಟ್‌ಗಳಾಗಿವೆ ಎಂಬುದನ್ನು ಅಂದಾಜು ಮಾಡಲು ಬಳಸುವ ಪ್ರಕ್ರಿಯೆಯನ್ನು ಮಸ್ಕ್‌ನೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಅಗರವಾಲ್ ಹೇಳಿದ್ದಾರೆ.  ವೇದಿಕೆಯಲ್ಲಿ ವಾಕ್ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಬಯಕೆಯಿಂದ ಮತ್ತು ಭಾರೀ ಪ್ರಭಾವಶಾಲಿ ಆದರೆ ಲಾಭದಾಯಕ ಬೆಳವಣಿಗೆಯನ್ನು ಸಾಧಿಸಲು ಹೆಣಗಾಡುತ್ತಿರುವ ವೆಬ್‌ಸೈಟ್‌ನ ಹಣಗಳಿಕೆಯನ್ನು ಹೆಚ್ಚಿಸುವ ಬಯಕೆಯಿಂದ ಮಸ್ಕ್ ಟ್ವೀಟರ್‌ ಖರೀದಿಸುತ್ತಿರುವುವಾಗಿ ವಿವರಿಸಿದ್ದಾರೆ. ಅಲ್ಲದೇ ಟ್ವೀಟರ್‌ ಖರೀದಿಸಿ ಬಳಿಕ ಅಮೆರಿಕಾದ ಮಾಜಿ ಅಧ್ಯಕ್ಷ  ಡೊನಾಲ್ಡ್ ಟ್ರಂಪ್ ಮೇಲಿನ ನಿಷೇಧವನ್ನು ತೆಗೆದುಹಾಕಲು ಅವರು ಒಲವು ತೋರಿದ್ದಾರೆ. 

click me!