ಟ್ವಿಟರ್‌ಗೆ(Twitter) ಹೊಸ ಸಿಇಒ(CEO) ಬಂದಿದ್ದಾರೆ. ಹಾಗೆಯೇ ಒಂದಷ್ಟು ರೂಲ್ಸ್ ಕೂಡಾ ಬದಲಾಗಿವೆ. ಹೌದು. ಟ್ವಿಟರ್‌ನಲ್ಲಿ(Twitter) ಇನ್ನು ಜನರ ಖಾಸಗಿ ಪೋಟೊಗಳನ್ನು ಅವರ ಅನುಮತಿ ಇಲ್ಲದೆ ಬಳಸೋ ಹಾಗಿಲ್ಲ. ಈ ಸಂಬಂಧ ಟ್ವೀಟ್ ಮಾಡಿದ ಟ್ವಿಟರ್, ಇಂದಿನಿಂದ, ಖಾಸಗಿ ವ್ಯಕ್ತಿಗಳ ಸಮ್ಮತಿಯಿಲ್ಲದೆ ಅವರ ಫೋಟೋ ಅಥವಾ ವೀಡಿಯೊಗಳಂತಹ ಖಾಸಗಿ ವಿಚಾರ ಹಂಚಿಕೊಳ್ಳಲು ನಾವು ಅನುಮತಿಸುವುದಿಲ್ಲ. ಈ ನೀತಿಯ ಅಡಿಯಲ್ಲಿ ಜನರ ಖಾಸಗಿ ಮಾಹಿತಿಯನ್ನು ಪ್ರಕಟಿಸುವುದನ್ನು ಸಹ ನಿಷೇಧಿಸಲಾಗಿದೆ, ಇತರರನ್ನು ಹಾಗೆ ಮಾಡಲು ಬೆದರಿಕೆ ಹಾಕುವುದು ಅಥವಾ ಪ್ರೋತ್ಸಾಹಿಸುವುದನ್ನು ನಿಷೇಧಿಸಲಾಗಿದೆ ಎಂದಿದ್ದಾರೆ.
ಖಾಸಗಿ ಜನರಿಗೆ ಟ್ವಿಟರ್‌ನಲ್ಲಿ ಶೇರ್ ಆದ ತಮ್ಮ ಪರ್ಸನಲ್ ಫೋಟೋ ಅಥವಾ ಗ್ರೂಪ್ ಫೋಟೋಗಳನ್ನು ತೆಗೆಯಿರಿ ಎಂದು ವಿನಂತಿಸಲು ಈ ಹೊಸನಿಯಮಗಳಡಿಯಲ್ಲಿ ಅನಮತಿ ನೀಡಲಾಗಿದೆ. ಖಾಸಗಿ ಮಾಹಿತಿ ರಿವೀಲ್ ಮಾಡುವುದರ ವಿರುದ್ಧ ಈಗಾಗಲೇ ಇರುವ ನಿಯಮದಲ್ಲಿಯೇ ಈ ಹೊಸ ಬದಲಾವಣೆಯೂ ಒಳಗೊಂಡಿದೆ.
ಭಾರತೀಯ ಮೂಲದ ಟ್ವಿಟ್ಟರ್‌ನ ಹೊಸ ಸಿಇಒ ಬಗ್ಗೆ ನಿಮಗೆಷ್ಟು ಗೊತ್ತು?
ವ್ಯಕ್ತಿಯ ವಿಡಿಯೋ ಫೋಟೊಗಳನ್ನು ಶೇರ್ ಮಾಡುವುದು ಅವರಿಗೆ ಮಾನಸಿಕವಾಗಿ ಅಥವಾ ದೈಹಿಕವಾಗಿ ನೋವುಂಟುಮಾಡಬಹುದು ಎಂದು ಟ್ವಿಟರ್ ಸೇಫ್ಟಿ ಬ್ಲಾಗ್ ಪೋಸ್ಟ್ ಬದಲಾವಣೆ ಎನೌನ್ಸ್ ಮಾಡಿದೆ. ಖಾಸಗಿ ಫೋಟೋ, ವಿಡಿಯೋ ದುರ್ಬಳಕೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಆದರೆ ಸ್ತ್ರೀಯರು, ಹಿಂದುಳಿದ ಸಮುದಾಯಗಳ ಜನರಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎನ್ನಲಾಗಿದೆ.
Beginning today, we will not allow the sharing of private media, such as images or videos of private individuals without their consent. Publishing people's private info is also prohibited under the policy, as is threatening or incentivizing others to do so.https://t.co/7EXvXdwegG
— Twitter Safety (@TwitterSafety)ಪೋಸ್ಟ್ ಮಾಡುವ ಫೋಟೋಗಳಲ್ಲಿರುವ ವ್ಯಕ್ತಿಯ ಅನುಮತಿ ಇಲ್ಲದೆ ಪೋಸ್ಟ್ ಮಾಡಿರುವ ಎಲ್ಲವೂ ಈ ನಿಯಮದಡಿ ಬರುತ್ತದೆ. ಸಾರ್ವಜನಿಕ ವ್ಯಕ್ತಿಗಳಿಗೆ ಅನ್ವಯವಾಗುವುದಿಲ್ಲ. ರಾಜಕಾರಣಿ, ಸೆಲೆಬ್ರಿಟಿಗಳು ಹಾಗೂ ಇತರ ಪ್ರಸಿದ್ಧ ವ್ಯಕ್ತಿಗಳಿಗೆ ಇದು ಅನ್ವಯಿಸುವುದಿಲ್ಲ. ಫೋಟೋ, ವಿಡಿಯೋಗೆ ಸಂಬಂಧಿಸಿ ಟ್ವಿಟರ್ ಇತರ ಸಂದರ್ಭಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಅಸ್ತಿತ್ವದಲ್ಲಿರುವ ನಿಯಮಗಳಾದ ಒಮ್ಮತವಿಲ್ಲದ ಲೈಂಗಿಕ ಚಿತ್ರಣವನ್ನು ಕೂಡಾ ನಿಷೇಧಿಸುತ್ತದೆ.
ಯಾವಾಗ ಫೋಟೋ ಬಳಸಬಹುದು ?
ಹಿಂಸಾತ್ಮಕ ಘಟನೆಯ ನಂತರ ಅಥವಾ ಸಾರ್ವಜನಿಕ ಹಿತಾಸಕ್ತಿಯಿಂದಾಗಿ ಸುದ್ದಿಯೋಗ್ಯ ಈವೆಂಟ್‌ನ ಭಾಗವಾಗಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡ ಯಾರಿಗಾದರೂ ಸಹಾಯ ಮಾಡುವ ಪ್ರಯತ್ನದಲ್ಲಿ ಖಾತೆದಾರರು ಖಾಸಗಿ ವ್ಯಕ್ತಿಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವ ಉದಾಹರಣೆ ಇದೆ. ಇದು ಮೌಲ್ಯ, ಮತ್ತು ಇದು ವ್ಯಕ್ತಿಯ ಸುರಕ್ಷತೆಯ ಅಪಾಯ ಮೀರಿದ್ದು ಎನ್ನಲಾಗಿದೆ.
ಆನ್‌ಲೈನ್ ಕಿರುಕುಳಗಳಿಗೆ ಪ್ರೇರಣೆಯಾಗುವ ಫೋಟೊಗಳು ಅಥವಾ ವೀಡಿಯೊಗಳನ್ನು ತೆಗೆದುಹಾಕುವುದು ಗುರಿಯಾಗಿದೆ. ಆದಾರೂ ಪ್ರಾಯೋಗಿಕವಾಗಿ, ನಿರ್ದಿಷ್ಟ ಸನ್ನಿವೇಶದ ಸೂಕ್ಷ್ಮ ವ್ಯತ್ಯಾಸವನ್ನು ನಿರ್ಣಯಿಸುವ ಮಾಡರೇಟರ್‌ಗಳ ಮೇಲೆ ಅದರ ಅನುಷ್ಠಾನವು ಅವಲಂಬಿತವಾಗಿರುತ್ತದೆ.
ಅಮೆರಿಕ ಮೂಲದ ಟ್ವಿಟರ್‌ನ ನೂತನ ಸಿಇಒ (India-born Parag Agrawal) ಆಗಿ ಭಾರತೀಯ ಮೂಲದ ಪರಾಗ್ ಅಗರ್‌ವಾಲ್ ಆಯ್ಕೆಯಾಗಿದ್ದಾರೆ. ಟ್ವಿಟರ್‌ನ ಸಂಸ್ಥಾಪಕ ಮತ್ತು ಹಾಲಿ ಸಿಇಒ ಜಾಕ್ ಡೋರ್ಸ(Twitter CEO Parag Agarwal) ಪದತ್ಯಾಗದ ಹಿನ್ನೆಲೆಯಲ್ಲಿ ಪರಾಗ್ ಅವರನ್ನು ಹೊಸ ಹುದ್ದೆಗೆ ನೇಮಿಸಲಾಗಿದೆ. ಹಾಲಿ ಟ್ವಿಟರ್‌ನ ಸಿಟಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಪರಾಗ್, ಸೋಮವಾರದಿಂದಲೇ ಜಾರಿಗೆ ಬರುವಂತೆ ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ. ಹೊಸ ಹೊಣೆಯ ಕುರಿತು ಪ್ರತಿಕ್ರಿಯಿಸಿರುವ ಪರಾಗ್, ‘ಇದು ನನಗೆ ಸಿಕ್ಕ ಗೌರವ, ಇದನ್ನ ನಾವು ವಿನಮ್ರನಾಗಿ ಸ್ವೀಕರಿಸುತ್ತೇನೆ. ಇದಕ್ಕಾಗಿ ಡೋರ್ಸಿಗೆ (Jack Dorsey) ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದು ಹೇಳಿದ್ದಾರೆ. 2006ರಲ್ಲಿ ಆರಂಭವಾದ ಟ್ವಿಟರ್ 33 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ವಾರ್ಷಿಕ 28000 ಕೋಟಿ ರು. ಆದಾಯ ಹೊಂದಿದೆ.