ಟಿಕ್‌ಟಾಕ್‌ನಿಂದ ಆನ್ಲೈನ್ ಟ್ಯಾಲೆಂಟ್ ಹಂಟ್! ರೆಕಾರ್ಡ್‌ ಮಾಡಿ ಮ್ಯೂಸಿಕ್ ಸ್ಟಾರ್‌ ಆಗಿ

By Suvarna News  |  First Published Jun 12, 2020, 7:18 PM IST
  • ಟಿಕ್‍ಟಾಕ್‍ನಿಂದ ಸಂಗೀತ ಪ್ರತಿಭೆಯನ್ನು ಹೊರತರಲು ಆನ್‍ಲೈನ್ ಪ್ರತಿಭಾನ್ವೇಷಣೆ 
  • #ಮ್ಯೂಸಿಕ್‍ಸ್ಟಾರ್‌ಕನ್ನಡ ಆರಂಭ, ಹಾಡಿ, ರೆಕಾರ್ಡ್‌ ಮಾಡಿ, ಅಪ್ಲೋಡ್ ಮಾಡಿ
  • ಪ್ರತಿಷ್ಠಿತ ಸಂಸ್ಥೆಗೆ ಹಾಡುವ/ರೆಕಾರ್ಡ್‌ ಮಾಡುವ ಅವಕಾಶ ಗೆಲ್ಲಿ
     

ಬೆಂಗಳೂರು (ಜೂ. 12):  ಸಂಗೀತ ಪ್ರತಿಭೆಗಳಿಗೆ ವೇದಿಕೆ ಓದಗಿಸಲು ಜನಪ್ರಿಯ ಸೋಶಿಯಲ್ ಮೀಡಿಯಾ ಸಂಸ್ಥೆ ಟಿಕ್‌ಟಾಕ್ , ಮ್ಯೂಸಿಕ್‍ಸ್ಟಾರ್‌ಕನ್ನಡ  ಎಂಬ ಆನ್‌ಲೈನ್ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಶುರುಮಾಡಿದೆ.

ರೆಸ್ಸೊ ಸಂಸ್ಥೆಯ ಸಹಯೋಗದೊಂದಿಗೆ ಪ್ರಸ್ತುತಪಡಿಸಲಾಗುತ್ತಿರುವ ಈ ಸ್ಪರ್ಧೆಯ ವಿಜೇತರು ಭಾರತದ ಮ್ಯೂಸಿಕ್ ಲೇಬಲ್‍ನಡಿಯಲ್ಲಿ ರೆಕಾರ್ಡ್ ಮಾಡುವ ಜೀವಿತಾವಧಿ ಅವಕಾಶ ಪಡೆಯುತ್ತಾರೆ. ಆ ಮೂಲಕ ಈ ಆನ್ಲೈನ್ ಟ್ಯಾಲೆಂಟ್ ಹಂಟ್ ಸ್ಪರ್ಧೆಯ ವಿಜೇತರು ಭಾರತದ ಹಲವು ಪ್ರಮುಖ ಸಂಗೀತ ಲೇಬಲ್‌ಗಳಲ್ಲಿ ಹಾಡುವ ಅವಕಾಶ ಪಡೆಯುತ್ತಾರೆ. 

Latest Videos

undefined

ಇದನ್ನೂ ಓದಿ | ಗೂಗಲ್ ಸರ್ಚ್‌‌‌ನಲ್ಲಿ ಕಾಣತ್ತೆ ನಿಮ್ಮ ವಾಟ್ಸ್ಆ್ಯಪ್ ನಂಬರ್!...

#ಮ್ಯೂಸಿಕ್‍ಸ್ಟಾರ್ ಕನ್ನಡ ಅಭಿಯಾನದ ಹಂತಗಳು:

1ನೇ ಹಂತ- ಜೂನ್ 7-14:  ಅತ್ಯಂತ ಹೆಚ್ಚು ಲೈಕ್ಸ್, ಗುಣಮಟ್ಟ ಮತ್ತು ಮ್ಯೂಸಿಕ್ ಕಂಟೆಂಟ್ ಆಧರಿಸಿಸಿ, ಪ್ರತಿಭಾಷೆಯ 10 ಮಂದಿಯನ್ನು ಆಯ್ಕೆ ಮಾಡಲಾಗುತ್ತದೆ.

2ನೇ ಹಂತ-ಜೂನ್ 15: ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ, ಮತ್ತು ಬಳಕೆದಾರರಿಗೆ ಮತ ನೀಡಲು ಉತ್ತೇಜಿಸಲಾಗುತ್ತದೆ ಮತ್ತು ಎಲ್ಲ ಪ್ರದೇಶಗಳ 60 ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಅವರ ಅಚ್ಚುಮೆಚ್ಚಿನ ಸಂಗೀತಗಾರರನ್ನು ಬೆಂಬಲಿಸಲು ಪ್ರೋತ್ಸಾಹಿಸಲಾಗುತ್ತದೆ.

3ನೇ ಹಂತ- ಜೂನ್ 21: ಅತ್ಯಂತ ಹೆಚ್ಚಿನ ಸಂಖ್ಯೆಯ ಮತಗಳನ್ನು ಆಧರಿಸಿ, ಪ್ರತಿ ಭಾಷೆಯ 5 ಫೈನಲಿಸ್ಟ್‌ಗಳನ್ನು ಸ್ಪರ್ಧೆಯ ವಿಜೇತರಾಗಿ ಆಯ್ಕೆ ಮಾಡಲಾಗುತ್ತದೆ.

ಈ ಸ್ಪರ್ಧೆ ಜೂನ್ 7ರಂದು ತಮಿಳು, ತೆಲುಗು, ಮಲಯಾಳಂ, ಕನ್ನಡ, ಪಂಜಾಬಿ ಮತ್ತು ಬಂಗಾಳಿ ಭಾಷೆಗಳಲ್ಲಿ ಪ್ರಾರಂಭಗೊಂಡಿದ್ದು, ವಿಜೇತರನ್ನು ಜೂನ್ 21ರಂದು ವಿಶ್ವ ಸಂಗೀತ ದಿನದಂದು ಪ್ರಕಟಿಸಲಾಗುತ್ತದೆ. 

ಇದನ್ನೂ ಓದಿ | ಟ್ವಿಟ್ಟರ್‌‌‌‌‌ಗೂ ಬಂತು ಏಕ್ ದಿನ್ ಕಾ ಸ್ಟೋರಿ, WhatsApp Status ರೀತಿ!...

ಎರಡು ವಾರಗಳು ನಡೆಯುವ #ಮ್ಯೂಸಿಕ್‍ಸ್ಟಾರ್ ಕಾರ್ಯಕ್ರಮದಲ್ಲಿ, ಇನ್ಸ್ಟ್ರುಮೆಂಟಲಿಸ್ಟ್ , ಗಾಯಕರು, ಬ್ಯಾಂಡ್‍ಗಳು ಮತ್ತು ಸಂಗೀತ ನಿರ್ಮಾಪಕರು/ಸಂಯೋಜಕರು ಕೂಡಾ ಭಾಗವಹಿಸುತ್ತಾರೆ. ಬಳಕೆದಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಟಿಕ್‍ಟಾಕ್ ವಿಡಿಯೋವನ್ನು #ಮ್ಯೂಸಿಕ್‍ಸ್ಟಾರ್ ಹ್ಯಾಷ್‍ಟ್ಯಾಗ್ಸ್ ಬಳಸಿ(#MusicStarTamil, #MusicStarTelugu, #MusicStarMalayalam, #MusicStarKannada, #MusicStarPunjabi, #MusicStarBengali) ಅಪ್‍ಲೋಡ್ ಮಾಡಿದರೆ ಸಾಕು.

click me!