
ಬೆಂಗಳೂರು (ಜೂ.22): ಈ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಪ್ರತಿಸ್ಪರ್ಧಿಗಳಿಗೆ ಪೈಪೋಟಿಯೊಡ್ಡಲು ಕಂಪನಿಗಳು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ತಮ್ಮ ಪ್ರಾಡಕ್ಟ್‌ಗಳನ್ನು ಜನರ ಬಳಿಗೆ ಕೊಂಡೊಯ್ಯಲು ಏನೆಲ್ಲಾ ಗಿಮಿಕ್ ಮಾಡುತ್ತವೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ.
ಈಗ ಅಂತಹದ್ದೇ ಒಂದು ಬೆಳವಣಿಗೆಯಲ್ಲಿ ವಾಟರ್ ಪ್ಯೂರಿಫೈರ್ ಕಂಪನಿಯೊಂದು, ವಿಚಿತ್ರ ತರ್ಕವನ್ನು ಮುಂದಿಟ್ಟು ನೆಟ್ಟಿಗರಿಂದ ಮಂಗಳಾರತಿ ಮಾಡಿಸಿಕೊಂಡಿದೆ.
‘ನೀವು ಸಸ್ಯಾಹಾರಿಗಳಾ? ನೀವು ಕುಡಿಯುವ ನೀರು ಮಾಂಸಾಹಾರಿಯಾಗಿರುವ ವಿಚಾರ ತಿಳಿದು ಶಾಕ್ ಆಗೋದು ಪಕ್ಕಾ!’ ಎಂಬ ಒಕ್ಕಣೆಯೊಂದಿಗೆ ಕಂಪನಿಯೊಂದು ತನ್ನ ವಾಟರ್ ಪ್ಯೂರಿಫೈರ್ ಜಾಹೀರಾತನ್ನು ಪತ್ರಿಕೆಯಲ್ಲಿ ಪ್ರಕಟಿಸಿದೆ.
ಜಾಹೀರಾತಿನ ಪ್ರಕಾರ, ಕುದಿಸಿದ ನೀರು ಮತ್ತು ಇನ್ನಿತರ ವಾಟರ್ ಪ್ಯೂರಿಫೈರ್‌ಗಳು ನೀರಿನಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತವೆ. ಆದರೆ, ಅವುಗಳ ಮೃತದೇಹ ಅದೇ ನೀರಿನಲ್ಲಿ ಸೇರಿಕೊಂಡಿರುತ್ತದೆ. ನೀರು ಕುಡಿಯಲು ಯೋಗ್ಯವಾಗಿದ್ರೂ, ಅದು ಎಷ್ಟೆಂದರೂ ಮಾಂಸಾಹಾರಿ ನೀರು! ಎಂಬ ತರ್ಕವನ್ನು ಮುಂದಿಟ್ಟಿತ್ತು.
ಇದನ್ನೂ ಓದಿ | ಮೊಬೈಲ್ ಪಾರ್ಸೆಲ್ ಡೆಲಿವರಿ ಮಾಡಲು ಕೊರಿಯರ್ ಕಂಪನಿ ಹಿಂದೇಟು!
ಈ ಕಂಪನಿಯ ವಾಟರ್ ಪ್ಯೂರಿಫೈರ್, ಕೀಟಾಣುಗಳು ಜೀವಂತ ವಾಗಿರಲಿ ಅಥವಾ ಮೃತಪಟ್ಟಿರಲಿ, ಆ ಎಲ್ಲಾವನ್ನು ಹೊರಹಾಕುತ್ತದೆ ಎಂದು ಹೇಳಿಕೊಂಡಿತ್ತು.
ಟ್ವಿಟರಿಗರಿಗೆ ಇನ್ನೇನು ಬೇಕು? ಈ ಜಾಹೀರಾತು ತುಣುಕು ಸಿಕ್ಕಿದ್ದೇ ತಡ, ಶುರುವಾಗಿ ಹಚ್ಕೊಂಡು ಬಿಟ್ರು! ಅದರ ಒಂದು ಝಲಕ್ ಇಲ್ಲಿದೆ....
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.