ಭಾರತದ ಮೊಬೈಲ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಕಾಲಿಟ್ಟಿದೆ. ಹೊಸತೆಂದರೆ, ಬರೇ ಮಾಡೆಲ್ ಹೊಸತಲ್ಲ, ತಂತ್ರಜ್ಞಾನ ಕೂಡಾ ಹೊಸತು. ಇದೇ ಮೊದಲ ಬಾರಿಗೆ 21:9 ಆ್ಯಸ್ಪೆಕ್ಟ್ ರೇಶ್ಯೋ ಇರುವ Motorola ಫೋನ್ ಬಿಡುಗಡೆಯಾಗಿದೆ. ಇಲ್ಲಿದೆ ಫೀಚರ್ಸ್ ಮತ್ತು ಬೆಲೆ.
Lenovo ಒಡೆತನದ Motorola One Vision ಮೊಬೈಲ್ ಭಾರತದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಮೊಬೈಲ್ ಕ್ಷೇತ್ರದಲ್ಲಿ ಮೊದಲ 21:9 ಆ್ಯಸ್ಪೆಕ್ಟ್ ರೇಶ್ಯೋ ಹೊಂದಿರುವುದು Motorola One Vision ಸ್ಮಾರ್ಟ್‌ಫೋನ್ ಹೆಗ್ಗಳಿಕೆ.
ಪಂಚ್‌ಹೋಲ್ ಕ್ಯಾಮೆರಾ ಮತ್ತು ಸಿನಿಮಾ ವಿಷನ್ ಡಿಸ್ಪ್ಲೇ ಹೊಂದಿರುವ ಈ ಫೋನ್ 4GB RAM ಮತ್ತು 128GB ವೇರಿಯಂಟ್ Bronze Gradient ಮತ್ತು Sapphire Gradient ಬಣ್ಣಗಳಲ್ಲಿ ಲಭ್ಯವಿದೆ. ಮೈಕ್ರೊSD ಮೂಲಕ ಸ್ಟೋರೆಜನ್ನು 512 GBವರೆಗೆ ವಿಸ್ತರಿಸಬಹುದು.
ಇದನ್ನೂ ಓದಿ | ಹೊಸ ಉದ್ಯಮಕ್ಕೆ ಕೈ ಹಾಕಿದ ಫೇಸ್ಬುಕ್! ನಿಮಗೇನು ಲಾಭ?
Samsung Exynos 9609 octa-core ಚಿಪ್‌ಸೆಟ್ ಒಳಗೊಂಡಿರುವ ಈ ಫೋನ್ Android 9 Pie ಆಪರೇಟಿಂಗ್ ಸಿಸ್ಟಮ್ ಹಾಗೂ ಹೈಬ್ರಿಡ್ ಡ್ಯುಯಲ್ ಸಿಮ್ ಸೌಲಭ್ಯ ಹೊಂದಿದೆ.
ಹಿಂಬದಿ 48MP + 5MP ಸಾಮರ್ಥ್ಯದ ಎರಡು ಕ್ಯಾಮೆರಾ ಸೆಟಪ್ ಹೊಂದಿದ್ದು, 25 MP ಸೆಲ್ಫೀ ಕ್ಯಾಮೆರಾ ಹೊಂದಿದೆ.
3500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಟರ್ಬೋಪವರ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಭಾರತದಲ್ಲಿ ಇದರ ಬೆಲೆ Rs 19,999 ಆಗಿದೆ.ಮುಂದಿನ ವಾರದಲ್ಲಿ ಇದು ಆನ್ ಲೈನ್ ಮೂಲಕ ಖರೀದಿಗೆ ಲಭ್ಯವಾಗಲಿದೆ.