ಮೊಬೈಲ್ ಪಾರ್ಸೆಲ್ ಡೆಲಿವರಿ ಮಾಡಲು ಕೊರಿಯರ್ ಕಂಪನಿ ಹಿಂದೇಟು!

By Web DeskFirst Published Jun 22, 2019, 5:21 PM IST
Highlights

ಮೊಬೈಲ್ ಪಾರ್ಸೆಲ್ ಮಾಡಲ್ಲ ಎಂದ ಕೊರಿಯರ್ ಕಂಪನಿ! ಕಳುಹಿಸಿದ ಕಂಪನಿಗೆ ವಾಪಾಸು ಮಾಡಿದ ಕೊರಿಯರ್ ಸಂಸ್ಥೆ; ಅಮೆರಿಕಾದ Huawei ಮೇಲಿನ ನಿಷೇಧಕ್ಕೆ ಹೊಸ ತಿರುವು   

ಬೆಂಗಳೂರು (ಜೂ. 22): ಅಮೆರಿಕಾ ಸರ್ಕಾರ ಮತ್ತು ಚೀನಾ ಕಂಪನಿ Huawei ನಡುವಿನ  'ನಿಷೇಧ' ಸಮರ ಈಗ ಹೊಸ ತಿರುವನ್ನು ಪಡೆದುಕೊಂಡಿದೆ.

PC Magazine ಎಂಬ ಸಂಸ್ಥೆಯು ತನ್ನ ಇಂಗ್ಲಂಡ್ ಕಛೇರಿಯಿಂದ  ಅಮೆರಿಕಾದ ಕಛೇರಿಗೆ Huawei ಫೋನನ್ನು ಫೆಡೆಕ್ಸ್ ಕೊರಿಯರ್ ಕಂಪನಿ ಮೂಲಕ ಪಾರ್ಸೆಲ್ ಮಾಡಿತ್ತು. ಆದರೆ, ಆ ಪಾರ್ಸೆಲ್ ಈಗ ಡೆಲಿವರಿಯಾಗದೇ ವಾಪಾಸಾಗಿದೆ.

This is totally ridiculous. Our UK writer tried to send us his P30 unit so I could check something - not a new phone, our existing phone, already held by our company, just being sent between offices - and THIS happened pic.twitter.com/sOaebiqfN6

— Sascha Segan (@saschasegan)

ಅಮೆರಿಕಾ ಮತ್ತು ಹುವೈ ಕಂಪನಿ- ಚೀನಾ ಸರ್ಕಾರ ಜೊತೆ ಸಮಸ್ಯೆ ಇರುವ ಕಾರಣ ಈ ಪಾರ್ಸೆಲ್ ಹಿಂತಿರುಗಿಸಲಾಗಿದೆ ಎಂದು ಕೊರಿಯರ್ ಕಂಪನಿ ಸ್ಪಷ್ಟನೆ ನೀಡಿದೆ.

ಇದನ್ನೂ ಓದಿ | 

ಕಳೆದ ತಿಂಗಳು ಅಮೆರಿಕಾದ ಡೊನಾಲ್ಡ್ ಟ್ರಂಪ್ ಸರ್ಕಾರ, ಆಂತರಿಕ ಭದ್ರತೆಯ ಕಾರಣವನ್ನು ಮುಂದಿಟ್ಟುಕೊಂಡು Huawei ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಹಾಗೂ, ಅಮೆರಿಕಾದ ಟೆಕ್ ಕಂಪನಿಗಳ ಜೊತೆ ವ್ಯವಹರಿಸದಂತೆ ನಿರ್ಬಂಧ ಹೇರಿತ್ತು.

ಈ ನಿರ್ಬಂಧ ಟೆಕ್ ಕಂಪನಿಗಳಿಗೆ ಅನ್ವಯಿಸುತ್ತದೆ. ಆದರೆ ಕೊರಿಯರ್ ಕಂಪನಿಯು ಸ್ವಯಂ ಪ್ರೇರಿತವಾಗಿ ನಿಷೇಧ ಹೇರಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಆದ್ದರಿಂದ, ಗೂಗಲ್ ಮತ್ತಿತರ ದಿಗ್ಗಜ ಟೆಕ್ ಕಂಪನಿಗಳು Huawei ಜೊತೆ ವ್ಯವಹಾರವನ್ನು ನಿಲ್ಲಿಸಿವೆ. ಗೂಗಲ್ ತನ್ನ ಆ್ಯಂಡ್ರಾಯಿಡ್ ಸೇವೆಯನ್ನು Huawei ಫೋನ್‌ಗಳಿಗೆ ಸ್ಥಗಿತಗೊಳಿದೆ.

ಟ್ರಂಪ್ ಸರ್ಕಾರ ಭದ್ರತೆಯ ಕಾರಣ ನೀಡಿ ಈ ಕ್ರಮ ಕೈಗೊಂಡರೂ, ಇದನ್ನು ಚೀನಾ ಜೊತೆಗಿನ ವ್ಯಾಪಾರ-ಸಮರದ ಇನ್ನೊಂದು ರೂಪ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.    
 

click me!